More

    ಪಂಚಮಸಾಲಿ ಮೀಸಲಾತಿಗೆ ಸರ್ಕಾರಕ್ಕೆ ಗಡುವು ನೀಡಿದ ಶ್ರೀಗಳು

    ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2-ಎ ಮೀಸಲಾತಿ ನೀಡಬೇಕೆಂದು ಹೋರಾಟ ನಡೆದಿದೆ. ಸೆಪ್ಟೆಂಬರ್ 30 ರೊಳಗೆ ಈ ಬೇಡಿಕೆಯನ್ನು ರಾಜ್ಯ ಸರ್ಕಾರ ಈಡೇರಿಸಬೇಕು ಎಂದು ಪಂಚಮಸಾಲಿ ಪೀಠದ ಜಯಮೃತ್ಯುಂಜಯ‌ಶ್ರೀ ಸ್ವಾಮಿಗಳು ಆಗ್ರಹಿಸಿದ್ದಾರೆ. ಇಂದು ನಗರದ ಚಾಲುಕ್ಯವೃತ್ತದಲ್ಲಿರುವ ಬಸವೇಶ್ವರ ಪುತ್ಥಳಿಯ ಬಳಿ ನಡೆದ ಹೋರಾಟದ ನೇತೃತ್ವ ವಹಿಸಿ ಅವರು ಮಾತನಾಡಿದರು.

    ಪಂಚಮಸಾಲಿ ಮೀಸಲಾತಿ ಕೋರಿ ಈಗಾಗಲೇ ಪಾದಯಾತ್ರೆ ಮಾಡಿದ್ದೇವೆ. ಅಧಿವೇಶನದಲ್ಲಿ ಆಗಿನ ಸಿಎಂ ಆರು ತಿಂಗಳೊಳಗೆ ಬೇಡಿಕೆ ಈಡೇರಿಸುತ್ತೇವೆ ಎಂದು ಮಾತು ಕೊಟ್ಟಿದ್ದರು. ಅವರ ಮಾತಿನ ಗಡುವು ಸೆಪ್ಟಂಬರ್ 15 ಕ್ಕೆ ಮುಕ್ತಾಯವಾಗ್ತಿದೆ. ಹೀಗಾಗಿ ನಾವು ಮತ್ತೊಮ್ಮೆ ಹೋರಾಟ ಮಾಡ್ತೇವೆ. ನಾಳೆಯಿಂದ ಪ್ರತಿಜ್ಞಾ ಪಂಚಾಯತ್ ಹೆಸರಲ್ಲಿ ರಾಜ್ಯ ಮಟ್ಟದ ಬೃಹತ್ ಅಭಿಯಾನವನ್ನು ಮಲೆಮಹದೇಶ್ವರ ಬೆಟ್ಟದಿಂದ ಪ್ರಾರಂಭಿಸುತ್ತೇವೆ ಎಂದರು.

    ಇದನ್ನೂ ಓದಿ: ಶಾಲೆ, ಕಾಲೇಜು, ಮಾಲ್, ಸಿನಿಮಾ ಹಾಲ್​… ಈ ರಾಜ್ಯದಲ್ಲಿ ಎಲ್ಲಾ ಓಪನ್!

    ಸೆಪ್ಟೆಂಬರ್ 30 ರೊಳಗೆ ನಮ್ಮ ಬೇಡಿಕೆ ಈಡೇರಿಸಬೇಕು. ಇಲ್ಲವಾದರೆ ಫ್ರೀಡಂ ಪಾರ್ಕ್​ನಲ್ಲಿ ಬೃಹತ್ ಸಮಾವೇಶ ಮಾಡ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಶ್ರೀಗಳು, ಸಿಎಂ ಸಕಾರಾತ್ಮಕವಾಗಿ ನಮ್ಮ ಜೊತೆ ಸ್ಪಂದಿಸಿದ್ದಾರೆ. ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರು ಚರ್ಚೆ ಮಾಡಿದ್ದಾರೆ ಎಂದರು.

    ಯಡಿಯೂರಪ್ಪ ಸಿಎಂ ಆಗಿದ್ದಾಗ ಅವರ ಸುಪುತ್ರ ಅವರನ್ನು ಮಿಸ್ ಗೈಡ್ ಮಾಡಿದ್ದರು. ಆದ್ರೆ ಈಗ ಸೂಕ್ತ ವ್ಯಕ್ತಿ ಸಿಎಂ ಆಗಿದ್ದಾರೆ. ಸಮುದಾಯವನ್ನು ಬಲ್ಲವರು ಅವರು. ಗೃಹ ಮಂತ್ರಿಗಳಾಗಿದ್ದಾಗ ನಮ್ಮ ಹೋರಾಟಕ್ಕೆ ಸಹಕಾರ ಕೊಟ್ಟಿದ್ದರು ಬೊಮ್ಮಾಯಿ. ಬೊಮ್ಮಾಯಿ ಅವಧಿಯೊಳಗೆ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಗುತ್ತದೆ ಎಂಬ ನಂಬಿಕೆ ನಮಗಿದೆ ಎಂದು ಜಯಮೃತ್ಯುಂಜಯಶ್ರೀ ಸ್ವಾಮಿಗಳು ಹೇಳಿದರು.

    ಇದನ್ನೂ ಓದಿ: ಇಂಧನ ಬೆಲೆ: ಮುಂಬರುವ ತಿಂಗಳಲ್ಲಿ ಕೊಂಚ ಪರಿಹಾರ ಎಂದ ಕೇಂದ್ರ ಸಚಿವ

    ವಿನಯ್​ ಕುಲಕರ್ಣಿ ಭಾಗಿ: ಇತ್ತೀಚೆಗಷ್ಟೆ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿರೋ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಧುಮುಕಿದ್ದಾರೆ. ನಗರದ ಬಸವೇಶ್ವರ ಪುತ್ಥಳಿ ಬಳಿ ಜಯಮೃತ್ಯಂಜಯ ಶ್ರೀಗಳ ಜೊತೆ ಹೋರಾಟಕ್ಕೆ ಕುಲಕರ್ಣಿ ಜೊತೆಯಾಗಿದ್ದರು.

    ಡ್ರಗ್ಸ್​​ ಸೇವನೆ ಖಚಿತವಾದ ಬೆನ್ನಲ್ಲೇ ನಟಿ ಸಂಜನಾ ಗಲ್ರಾನಿ ಆಸ್ಪತ್ರೆಗೆ ದಾಖಲು

    ಬೆಳೆಯುವ ಮಕ್ಕಳಿಗೆ ಎತ್ತರವಾಗಲು ಸಹಕಾರಿ, ಈ ಸುಲಭ ಯೋಗಾಸನ!

    ಚಾಮುಂಡಿ ಬೆಟ್ಟದ ತಪ್ಪಲಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್​ ರೇಪ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts