More

    ಮರಾಠ ಸಮಾಜಕ್ಕೆ 2ಎ ಮೀಸಲಾತಿ ನೀಡಲಿ

    ಸಂಡೂರು: ಛತ್ರಪತಿ ಶಿವಾಜಿ ಗೆರಿಲ್ಲಾ ಯುದ್ಧದ ಮೂಲಕ ಪ್ರಸಿದ್ಧಿಗೆ ಬಂದರು ಎಂದು ಜಿಪಂ ಮಾಜಿ ಸದಸ್ಯ ಅಕ್ಷಯ ಲಾಡ್ ಹೇಳಿದರು.

    ಪಟ್ಟಣದ ಮರಾಠ ಸಮಾಜ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಯಿ ಜೀಜಾಬಾಯಿ ನೆಚ್ಚಿನ ಮಗನಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ ವಂಶಸ್ಥರು, ಸನಾತನ ಹಿಂದು ಧರ್ಮದವರೆಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ.

    ಇದನ್ನು ಓದಿ: ಸರ್ಕಾರಗಳಿಂದ ರೈತ ವಿರೋಧಿ ಆಡಳಿತ : ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆರೋಪ

    1731ರಲ್ಲಿ ಘೋರ್ಪಡೆ ರಾಜಮನೆತನ, 1836ರಲ್ಲಿ ಪೇಶ್ವೆ ಮಹಾರಾಜರು ಸೇರಿದಂತೆ ಅನೇಕ ಸಂಸ್ಥಾನ, ಪಾಳೆಪಟ್ಟುಗಳನ್ನಾಳಿದ ಚರಿತ್ರೆ ಮರಾಠರಿಗಿದೆ. ಮರಾಠರನ್ನು 3 ಬಿಯಿಂದ 2ಎಗೆ ಬದಲಾಯಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

    ವಿರಕ್ತಮಠದ ಪ್ರಭುಸ್ವಾಮೀಜಿ ಮಾತನಾಡಿ, ಬಸವಣ್ಣ ಛತ್ರಪತಿ ಶಿವಾಜಿ ಮಹಾರಾಜ ಕರ್ನಾಟಕ-ಮಹಾರಾಷ್ಟ್ರದ ಸಾಂಸ್ಕೃತಿಕ ಕೊಂಡಿಯಿದ್ದಂತೆ. ಉತ್ತರ ಭಾರತದ ಕಾಶಿ, ಮಥುರಾ ಮುಂತಾದ ದೇವಸ್ಥಾನಗಳಂತೆ ದಕ್ಷಿಣ ಭಾರತದ ದೇವಸ್ಥಾನಗಳು ಪರಕೀಯರ ದಾಳಿಗೊಳಗಾಗಿಲ್ಲ. ಇದರಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕೊಡುಗೆ ಇದೆ ಎಂದರು.

    ಪತ್ರಕರ್ತ ವಿನೋದ್ ಚವ್ಹಾಣ್, ಮರಾಠ ಸಮಾಜದ ಅಧ್ಯಕ್ಷ ಎಂ.ಮಾರುತಿರಾವ್ ಬೋಸ್ಲೆ ಮಾತನಾಡಿದರು. ಕಾರ್ಯದರ್ಶಿ ಹನುಮಂತರಾವ್ ಬೋಯಿಟೆ, ಪುರಸಭೆ ಮಾಜಿ ಸದಸ್ಯೆ ಸಾಧನಾ ಬೋಯಿಟೆ, ಎನ್‌ಎಂಡಿಸಿ ನಿವೃತ್ತ ನೌಕರ ಚಂದ್ರಶೇಖರ ಇತರರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts