More

    ದೇಶಾದ್ಯಂತ ಬ್ಯೂಟಿ ಪಾರ್ಲರ್​​ ಬ್ಯಾನ್​ ಮಾಡಿದ ಅಫ್ಘಾನಿಸ್ತಾನ, ಸರ್ಕಾರದ ಆದೇಶಕ್ಕೆ ಮಹಿಳೆಯರು ಶಾಕ್​

    ಅಫ್ಘಾನಿಸ್ತಾನ: ತಾಲಿಬಾನ್ ನೇತೃತ್ವದ ಸರ್ಕಾರವು ದೇಶಾದ್ಯಂತ ಬ್ಯೂಟಿ ಪಾರ್ಲರ್​​ ಬ್ಯಾನ್​ ಮಾಡಿ ಆದೇಶವನ್ನು ಹೊರಡಿಸಿದ್ದು, ಸರ್ಕಾರದ ಈ ಆದೇಶದಿಂದ ಮಹಿಳೆಯರು ಶಾಕ್​ಗೆ ಒಳಗಾಗಿದ್ದಾರೆ.

    ಅಫ್ಘಾನಿಸ್ತಾನದ ಸಚಿವಾಲಯವು ಈ ಕುರಿತು ಸಂದೇಶವನ್ನು ಹೊರಡಿಸಿದ್ದು, ಕಾಬೂಲ್ ಮತ್ತು ಇತರ ಪ್ರಾಂತ್ಯಗಳಲ್ಲಿ ಮಹಿಳೆಯರು ನಿರ್ವಹಿಸುವ ಎಲ್ಲಾ ಬ್ಯೂಟಿ ಸಲೂನ್‌ಗಳನ್ನು ತಕ್ಷಣವೇ ಮುಚ್ಚುವಂತೆ ಆದೇಶಿಸಿದೆ. ತೀವ್ರ ಬಡತನದ ವಿರುದ್ಧ ಹೋರಾಡುತ್ತಿರುವಾಗ ನೂರಾರು ಮಹಿಳಾ ಉದ್ಯೋಗಿಗಳು ಈ ಆದೇಶದಿಂದ ತಮ್ಮ ಕೆಲಸ ಕಳೆದುಕೊಳ್ಳಲಿದ್ದಾರೆ.

    ಇದನ್ನೂ ಓದಿ: ನನ್ನ ಬಾಯಿ ಮುಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ, ಬಿಜೆಪಿ ಶಿಸ್ತು ಸಮಿತಿ ನೋಟಿಸ್​ಗೆ ಉತ್ತರ ಕೊಡಲ್ಲ: ಎಂ.ಪಿ.ರೇಣುಕಾಚಾರ್ಯ

    ಈ ಕಾನೂನನ್ನು ಜುಲೈ 2ರಿಂದಲೇ ಅನ್ವಯಿಸಲಾಗಿದ್ದು, ಬ್ಯೂಟಿ ಸಲೂನ್‌ಗಳನ್ನು ಮುಚ್ಚಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಈ ಕಾನೂನನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಜರುಗಿಸುವುದಾಗಿ ಸಚಿವಾಲಯದ ವಕ್ತಾರ ಮೊಹಮ್ಮದ್ ಸಾದೇಕ್ ಅಕಿಫ್ ಮುಹಾಜಿರ್ ಎಚ್ಚರಿಕೆ ನೀಡಿದ್ದಾರೆ.

    ಈ ನಿಷೇಧದ ಮೊದಲು ತಾಲಿಬಾನ್, ಹೆಣ್ಣುಮಕ್ಕಳ ಶಿಕ್ಷಣ, ಕ್ರೀಡಾ ಸೌಲಭ್ಯಗಳು ಮತ್ತು ಉದ್ಯಾನವನಗಳು ಮತ್ತು ಈಜುಕೊಳಗಳಂತಹ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶದ ಮೇಲೆ ನಿರ್ಬಂಧಗಳನ್ನು ಹೇರಿತ್ತು. ಜತೆಗೆ ಇತ್ತೀಚೆಗೆ ವಿಶ್ವಸಂಸ್ಥೆಯಲ್ಲಿ ಕೆಲಸ ಮಾಡುವ ಮಹಿಳೆಯರಿಗೂ ಈ ನಿಷೇಧವನ್ನು ವಿಸ್ತರಿಸಿ ಕಟ್ಟುನಿಟ್ಟಾದ ಡ್ರೆಸ್​​ಕೋಡ್​​ನ್ನು ಜಾರಿಗೊಳಿಸಿದ್ದಾರೆ.

    ಇದನ್ನೂ ಓದಿ: 19 ವರ್ಷದ ನಂತರ ಮರಳಿ ಬಂದ ಪತ್ನಿ ಜತೆ ಮತ್ತೆ ಮದುವೆಯಾದ ಪತಿ; ಅಸಲಿ ಕಥೆ ಇಂತಿದೆ…

    ಜತೆಗೆ ಪ್ರಯಾಣದ ಸಮಯದಲ್ಲಿ ಕಡ್ಡಾಯವಾಗಿ ಪುರುಷನು ಇರಲೇಬೇಕು ಎಂಬ ನಿಯಮವನ್ನು ಜಾರಿಗೆಗೊಳಿಸಿ, ಮಹಿಳೆಯರ ಚಲನೆಯ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿದ್ದಾರೆ. ಹ್ಯೂಮನ್ ರೈಟ್ಸ್ ವಾಚ್ (HRW) ಮಹಿಳೆಯರು ಮತ್ತು ಹುಡುಗಿಯರ ಹಕ್ಕುಗಳ ವಿಷಯದಲ್ಲಿ ಅಫ್ಘಾನಿಸ್ತಾನವನ್ನು ವಿಶ್ವದ ಅತ್ಯಂತ ನಿರ್ಬಂಧಿತ ದೇಶ ಎಂದು ವಿವರಿಸಿದೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts