More

    ಸುಸಜ್ಜಿತ ನ್ಯಾಯಾಲಯ ನಿರ್ಮಿಸಿ ; ಲೋಕೋಪಯೋಗಿ ಇಲಾಖೆಗೆ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ದೇವದಾಸ್ ಸೂಚನೆ

    ಕೋಲಾರ: ಹುಬ್ಬಳ್ಳಿಯಲ್ಲಿ ಎಸಿ ಕಚೇರಿಯನ್ನು ಅತ್ಯಂತ ಸುಸಜ್ಜಿತವಾಗಿ ನಿರ್ಮಿಸಿದ್ದು ಅದರಂತೆ ಕೋಲಾರ ಜಿಲ್ಲಾ ನ್ಯಾಯಾಲಯ ಸಂಕೀರ್ಣವನ್ನು ನಿರ್ಮಿಸುವಂತೆ ಹೈಕೋರ್ಟ್‌ನ ನ್ಯಾಯಮೂರ್ತಿ ಹಾಗೂ ಕೋಲಾರ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಆರ್.ದೇವದಾಸ್ ಅವರು ಲೋಕೋಪಯೋಗಿ ಇಲಾಖೆಯ ಕಾರ್ಯಾಪಾಲಕ ಅಭಿಯಂತರ ಚಂದ್ರಶೇಖರ್ ಅವರಿಗೆ ಸೂಚಿಸಿದರು.

    ಶನಿವಾರ ಹೈಕೋರ್ಟ್‌ನ ನ್ಯಾಯಮೂರ್ತಿ ಬಿ.ವೀರಪ್ಪ ಅವರೊಂದಿಗೆ ಜಿಲ್ಲಾ ನ್ಯಾಯಾಲಯಕ್ಕೆ ಭೇಟಿ ನೀಡಿ ಜಿಲ್ಲೆಯ ಮುಳಬಾಗಿಲು, ಬಂಗಾರಪೇಟೆಯಲ್ಲಿ ಸುಸಜ್ಜಿತ ನ್ಯಾಯಾಲಯ ನಿರ್ಮಿಸಲಾಗಿದೆ. ಜಿಲ್ಲಾ ಕೇಂದ್ರವಾದ ಕೋಲಾರದಲ್ಲಿ ಇಷ್ಟು ವರ್ಷಗಳಾದರೂ ದೊಡ್ಡದೊಂದು ನ್ಯಾಯಾಲಯ ಸಂಕೀರ್ಣ ಇಲ್ಲದಿರುವುದು ಬೇಸರದ ಸಂಗತಿ ಎಂದರು.

    ಒಟ್ಟು 37 ವಿವಿಧ ನ್ಯಾಯಾಲಯಗಳನ್ನು ಒಳಗೊಂಡ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ 25 ಕೋಟಿ ರೂ. ಮಂಜೂರು ಆಗಿರುವುದರಿಂದ ಗುಣಮಟ್ಟದ ಹಾಗೂ ಕಲಾಪಗಳು ಸುಗಮವಾಗಿ ನಡೆಸಲು ಎಲ್ಲ ಅನುಕೂಲ ಒಳಗೊಂಡ ನ್ಯಾಯಾಲಯ ಅತ್ಯವಶ್ಯಕತೆ ಇದೆ ಎಂದರು.

    ಹಾಲಿ ಜಿಲ್ಲಾ ನ್ಯಾಯಾಲಯ ಕಟ್ಟಡ ಅತ್ಯಂತ ಚಿಕ್ಕದಾಗಿದೆ, ಜತೆಗೆ ಅನೇಕ ವರ್ಷಗಳ ಹಿಂದೆ ಕಲ್ಲಿನಿಂದ ಕಟ್ಟಡವನ್ನು ನಿರ್ಮಿಸಿರುವುದರಿಂದ ಸದರಿ ಕಟ್ಟಡಕ್ಕೆ ಯಾವುದೇ ಹಾನಿ ಆಗದಂತೆ ಸಂರಕ್ಷಣೆ ವಾಡಿ ಪೂರ್ವಾಭಿಮುಖವಾಗಿ ಭವ್ಯ ಕಟ್ಟಡ ನಿರ್ಮಿಸಲು ನಕ್ಷೆ ತಯಾರಿಸುವಂತೆ ಇಂಜನಿಯರ್‌ಗಳಿಗೆ ಸಲಹೆ ನೀಡಿದರು.

    ಹುಬ್ಬಳ್ಳಿಗೆ ಭೇಟಿ ನೀಡಿದ್ದ ವೇಳೆ ಅಲ್ಲಿ ನಿರ್ಮಿಸಿರುವ ಎಸಿ ಕಚೇರಿಯ ಕಟ್ಟಡ ವೀಕ್ಷಿಸಿದ್ದೆ, ಅತ್ಯಂತ ವಿಶಾಲವಾದ, ಸೊಗಸಾದ ಹಾಗೂ ಎಲ್ಲ ಮೂಲ ಸೌಕರ್ಯ ಒಳಗೊಂಡ ಕಟ್ಟಡ ನಿರ್ಮಿಸಲಾಗಿದೆ. ಅಲ್ಲಿನ ಇಂಜನಿಯರ್‌ಗಳಿಂದ ನಕ್ಷೆ ತರಿಸಿಕೊಂಡು ಇಲ್ಲೂ ಅದೇ ವಾದರಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಕಾರ್ಯೋನ್ಮುಖರಾಗಬೇಕೆಂದು ತಿಳಿಸಿದರು.

    ಲೋಕೋಪಯೋಗಿ ಇಲಾಖೆಯ ಇಇ ಚಂದ್ರಶೇಖರ್ ಅವರು ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಸಿದ್ಧಪಡಿಸಿರುವ ನಕ್ಷೆ ಹಾಗೂ ಕ್ರಿಯಾ ಯೋಜನೆಯ ಕುರಿತು ವಾಹಿತಿ ನೀಡಿ, ಪರಿಷ್ಕೃತ ಯೋಜನೆಗೆ ಸಂಬಂಧಿಸಿದ ವಾಹಿತಿಯನ್ನು ಶ್ರೀ ವರದಿ ವಾಡುವುದಾಗಿ ತಿಳಿಸಿದರು.

    ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನವರಾದ ಹೈಕೋರ್ಟ್ ನ್ಯಾಯಮೂರ್ತಿ ಬಿ.ವೀರಪ್ಪ ಮಾತನಾಡಿ, ಜಿಲ್ಲೆಯಲ್ಲಿ ಸಾಕಷ್ಟು ಮಂದಿ ಒಳ್ಳೆಯ ಜನರಿದ್ದಾರೆ, ಮನಸ್ಸು ವಾಡಿದರೆ ಏನನ್ನಾದರೂ ಸಾಧಿಸುತ್ತಾರೆ, ಹೊಸದಾಗಿ ನಿರ್ಮಿಸಲು ಉದ್ದೇಶಿಸಿರುವ ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೆ ಜನರ ಸಹಕಾರ ಸಿಗಲಿದೆ ಎಂದು ತಿಳಿಸಿದರು. ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ.ಆರ್.ನಾಗರಾಜ್, ಪೊಸ್ಕೊ ನ್ಯಾಯಾಧೀಶ ದೇವ ವಾನೆ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮಹೇಶ್ ಬಾಬು ಹಾಜರಿದ್ದರು.

    ಗಣೇಶನ ದರ್ಶನ: ವಕೀಲರ ಸಂದಲ್ಲಿ ಪ್ರತಿಷ್ಠಾಪಿಸಿರುವ ಗಣಪತಿಯ ದರ್ಶನ ಪಡೆದ ನ್ಯಾಯಮೂರ್ತಿ ಆರ್.ದೇವದಾಸ್ ಅವರು, ಗಣೇಶನ ಕಪೆಯಿಂದ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಬೇಗನೆ ನಿರ್ವಾಣಗೊಳ್ಳಲಿ ಎಂದು ಆಶಿಸಿದರು. ಈ ಸಂದರ್ಭದಲ್ಲಿ ವಕೀಲರ ಸಂದ ಅಧ್ಯಕ್ಷ ಶ್ರೀಧರ್ ಅವರು ನ್ಯಾಯಮೂರ್ತಿ ದೇವದಾಸ್ ಮತ್ತು ವೀರಪ್ಪ ಅವರನ್ನು ಸನ್ಮಾನಿಸಿದರು. ಸಂದ ಪ್ರಧಾನ ಕಾರ್ಯದರ್ಶಿ ರುಪತಿಗೌಡ, ಹಿರಿಯ ವಕೀಲ ಕೋದಂಡಪ್ಪ, ವೆಂಕಟಾಚಲಪತಿಗೌಡ, ಧನರಾಜ್, ಸಂದ ವಾಜಿ ಅಧ್ಯಕ್ಷ ಕಷ್ಣಾರೆಡ್ಡಿ, ಸರ್ಕಾರಿ ವಕೀಲ ವಾಗೇರಿ ನಾರಾಯಣಸ್ವಾಮಿ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts