More

  ಕಾರ್ಮಿಕ ಇಲಾಖೆ ಹಳೆಯ ತಂತ್ರಾಂಶ ಮುಂದುವರಿಸಲಿ; ಕಾರ್ಮಿಕ ಸಚಿವ ಲಾಡ್ ರಾಜೀನಾಮೆಗೆ ಕಟ್ಟಡ ಕಾರ್ಮಿಕರ ಒತ್ತಾಯ

  ಹಾವೇರಿ: ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆಯಿಂದ ನೈಜ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಕಾರ್ಮಿಕ ಇಲಾಖೆ ಜಾರಿಗೊಳಿಸಿದ ಹೊಸ ತಂತ್ರಾಂಶದಲ್ಲಿ ಸಾಕಷ್ಟು ಲೋಪದೋಷಗಳಿದ್ದು, ಹಳೆಯ ಸೇವಾ ಸಿಂಧು ತಂತ್ರಾಂಶವನ್ನೇ ಮುಂದುವರೆಸಬೇಕೆಂದು ಸಂತ ಶಿಶುನಾಳ ಶರೀಫ ರಸ್ತೆ ಕಾಮಗಾರಿ ನಿರ್ಮಾಣ ಕಾರ್ಮಿಕರು ಮತ್ತು ಕಟ್ಟಡ ಅಸಂಘಟಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಎಂ.ಎಂ ಕಾಲೇಭಾಗ ಒತ್ತಾಯಿಸಿದರು.
  ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಐವರು ಶಾಸಕರಿದ್ದರೂ ಕಾರ್ಮಿಕರಿಗೆ ನ್ಯಾಯ ಒದಗಿಸಲು ಮುಂದಾಗುತ್ತಿಲ್ಲ. ಕಾರ್ಮಿಕ ಸಚಿವರಿಗೆ ಹಲವು ಬಾರಿ ಜಿಲ್ಲೆಯ ನೈಜ ಕಾರ್ಮಿಕರ ಕಾರ್ಡುಗಳನ್ನು ಮರುಪರಿಶೀಲನೆಗೆ ಆಗ್ರಹಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಬದಲಾಗಿ ನೈಜ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಇಲಾಖೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸಿದ್ದರೂ ಕಾರ್ಮಿಕರಿಗೆ ಗೊತ್ತಾಗಿಲ್ಲ. ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಇಲಾಖೆಗೆ ಬರುವ ಸೆಸ್ ಕಡಿಮೆಯಾಗಿದೆ ಎನ್ನುವ ನೆಪದಲ್ಲಿ ಸಚಿವರು ಅರ್ಹ ಕಾರ್ಮಿಕರ ಕಾರ್ಡ್ ರದ್ದು ಮಾಡಿದ್ದಾರೆ. ಇದರಿಂದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದೇವೆ. ಹಾವೇರಿ ಜಿಲ್ಲೆಗೆ ಕಾರ್ಮಿಕ ಇಲಾಖೆ ಸಚಿವರ ಸಾಧನೆ ಶೂನ್ಯವಾಗಿದ್ದು, ಸಚಿವರು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದರು.
  ಕಾರ್ಮಿಕ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಮಿಕರ ಹಿತರಕ್ಷಣೆ ಕುರಿತು ಕೆಲಸ ಮಾಡುತ್ತಿಲ್ಲ. ಅಧಿಕಾರಿಗಳ ಬೇಜವ್ದಾಬ್ದಾರಿತನ ಖಂಡಿಸಿ ಹಾಗೂ ಕಾರ್ಮಿಕ ಇಲಾಖೆಯಿಂದ ವಿವಿಧ ಸೌಲಭ್ಯಗಳ ಈಡೇರಿಕೆಗೆ ಆಗ್ರಹಿಸಿ ಜೂ.13ರಂದು ಬೆಳಗ್ಗೆ 11ಕ್ಕೆ ಡಿಸಿ ಕಚೇರಿಯಲ್ಲಿನ ಕಾರ್ಮಿಕ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ಬಳಿಕ ಮನವಿ ಸಲ್ಲಿಸಲಾಗುವುದು. ಆದ್ದರಿಂದ ಜಿಲ್ಲೆಯಲ್ಲಿರುವ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
  ಸುದ್ದಿಗೋಷ್ಠಿಯಲ್ಲಿ ಎ.ಎಂ ಪಟವೇಗಾರ, ಕೆ.ಎಂ.ಮಕಾಂದಾರ, ಶಾಬೀರ ಕಡಕೋಳ ಇದ್ದರು.

  See also  ಭರ್ಜರಿ ಗೆಲುವು ದಾಖಲಿಸಿದ ಸಿಎಂ ಬಸವರಾಜ್​ ಬೊಮ್ಮಾಯಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts