More

    ತಾರಕೂಟೇಲು ಕಿಂಡಿ ಅಣೆಕಟ್ಟು ಉದ್ಘಾಟನೆಗೆ ಸಿದ್ಧ

    ಬೆಳ್ತಂಗಡಿ: ತಾಲೂಕಿನ ಕನ್ಯಾಡಿ- ಗ್ರಾಮದ ಗುರಿಪಳ್ಳದ ತಾರಕೂಟೇಲು ಎಂಬಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ರಚಿಸಿದ ನೂತನ ಕಿಂಡಿ ಅಣೆಕಟ್ಟಿನ ಕೆಲಸ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ.

    ನೇತ್ರಾವತಿ ನದಿಯ ಸಂಪರ್ಕ ಹಳ್ಳಕ್ಕೆ ಈ ಕಿಂಡಿ ಅಣೆಕಟ್ಟು ನಿರ್ಮಾಣಗೊಂಡಿದ್ದು, ಈ ಪ್ರದೇಶದ ನೂರಾರು ಎಕರೆ ಕೃಷಿ ಭೂಮಿಗೆ ನೀರಿನ ವ್ಯವಸ್ಥೆಯಾಗಲಿದೆ.
    ಸಮೀಪದ ಮಣ್ಣಡ್ಕ, ಕಟ್ಣಡ್ಕ, ಗುರಿಪಳ್ಳ, ಕಯ್ಯಂಗು, ಕೊಡೆಕಲ್ ಸಹಿತ ಸುತ್ತಮುತ್ತಲ ಪ್ರದೇಶಗಳ ಅನೇಕ ಕುಟುಂಬಗಳಿಗೆ ನಿತ್ಯ ಬಳಕೆಯ ನೀರಿಗೆ ಹಾಗೂ ಅಂತರ್ಜಲವೃದ್ಧಿಗೆ ಸಹಕಾರಿಯಾಗಲಿದೆ. ಈ ಪರಿಸರದ ಜನರು ಅನೇಕ ವಷರ್ಗಳಿಂದ ಕಿಂಡಿ ಅಣೆಕಟ್ಟಿನ ಬೇಡಿಕೆ ಇಟ್ಟಿದ್ದರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಯೋಜನೆಯ ಅನುಷ್ಠಾನಕ್ಕೆ ಹೆಚ್ಚಿನ ಮುತುವರ್ಜಿ ವಹಿಸಿ ಕಿಂಡಿ ಅಣೆಕಟ್ಟಿನ ಶಿಲಾನ್ಯಾಸ ನೆರವೇರಿಸಿದ್ದರು. ಈಗ ಬಹುದಿನದ ಕನಸು ನನಸಾಗಿದೆ.

    ಈ ಬಾರಿ ಬೇಸಿಗೆ ಮಳೆ ಉತ್ತಮವಾಗಿ ಸುರಿದ ಕಾರಣ, ಈ ಹಳ್ಳದಲ್ಲಿ ನೀರಿನ ಹರಿವು ಮೇ ತಿಂಗಳಲ್ಲೇ ಹೆಚ್ಚಾಗಿದೆ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಸೌಮ್ಯಲತಾ ಜಯಂತ ಗೌಡ, ಬಿಜೆಪಿ ತಾಲೂಕು ಮೋರ್ಚಾ ಅಧ್ಯಕ್ಷ ಜಯಂತ ಗೌಡ ಹಾಗೂ ಊರವರು ಸಂಪೂರ್ಣ ಸಹಕಾರದಿಂದ ಕಾಮಗಾರಿ ಕಿಂಡಿ ಅಣೆಕಟ್ಟು ಪೂರ್ಣಗೊಂಡಿದೆ.

    ಅಣೆಕಟ್ಟಿನ ಸ್ವರೂಪ: ಸಂಪರ್ಕ ಸೇತುವೆ ಸಹಿತ ಕಿಂಡಿ ಅಣೆಕಟ್ಟು, ಒಟ್ಟು ಮೊತ್ತ 1.5 ಕೋಟಿ ರೂ., ಉದ್ದ 11 ಮೀ., ಅಗಲ 1.8 ಮೀ., ಎತ್ತರ 3.5 ಮೀ., ಕಿಂಡಿಗಳು 5, ಎರಡು ಬದಿಗಳಲ್ಲಿ 30 ಮೀ. ಉದ್ದ ಹಾಗೂ 3.5 ಮೀ. ಎತ್ತರದ ತಡೆಗೋಡೆ, ಕಿಂಡಿ ಅಣೆಕಟ್ಟಿನ ಸಂಬಂಧಿಸಿದ ಹಲಗೆ, ಇತ್ಯಾದಿ ದಾಸ್ತಾನು ಇಡಲು ಶೆಡ್.

    ಶಾಸಕ ಹರೀಶ್ ಪೂಂಜರ ವಿಶೇಷ ಮುತುವರ್ಜಿಯಿಂದ ಈ ಪ್ರದೇಶದ ಬಹು ವರ್ಷಗಳ ಬೇಡಿಕೆ ಈಡೇರಿದೆ. ಈ ಕಿಂಡಿ ಅಣೆಕಟ್ಟಿನಿಂದ ಪರಿಸರದ ಕೃಷಿಕರಿಗೆ ಹಾಗೂ ಗ್ರಾಮದ ಅಂತರ್ಜಲ ಮಟ್ಟಕ್ಕೆ ಹೆಚ್ಚಿನ ಸಹಕಾರ ದೊರೆಯಲಿದೆ.
    – ಜಯಂತ ಗೌಡ, ಕೃಷಿಕರು, ಕನ್ಯಾಡಿ-1

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts