More

    ತಾಂಡಾದ ಮಹಿಳೆಗೆ ಅಪಚಾರ ಎಸಗಿದ್ದಕ್ಕೆ ತಲೆ ಬೋಳಿಸಿ ಚಪ್ಪಲಿ ಹಾರದಲ್ಲಿ ಮೆರವಣಿಗೆ ಮಾಡಿಸಿದರು!

    ವಿಜಯಪುರ: ಈ ಅವಳಿ ಅಣ್ಣತಮ್ಮಂದಿರು ತಾಂಡಾದ ಮಹಿಳೆ ಮೇಲೆ ಅತ್ಯಾಚಾರ ಮಾಡಿದ ಆರೋಪಿಗಳಾಗಿದ್ದು ಈ ಬಗ್ಗೆ ತಕ್ಷಣವೇ ಗ್ರಾಮಸ್ಥರು ಕಠಿಣ ಕ್ರಮಗಳನ್ನು ಕೈಗೊಂಡು ಪುಂಡ ಯುವಕರಿಗೆ ಅಪಮಾನಕರ ಶಿಕ್ಷೆಯನ್ನು ನೀಡಿದ್ದಾರೆ. ಈ ಘಟನೆ ವಿಜಯಪುರ ತಾಲೂಕಿನ ಹೆಗಡಿಹಾಳ ತಾಂಡಾದಲ್ಲಿ ನಡೆದಿದೆ.

    ತಾಂಡಾದ ಮಹಿಳೆಗೆ ಅಪಚಾರ ಎಸಗಿದ್ದಕ್ಕೆ ತಲೆ ಬೋಳಿಸಿ ಚಪ್ಪಲಿ ಹಾರದಲ್ಲಿ ಮೆರವಣಿಗೆ ಮಾಡಿಸಿದರು!

    ಮಹಾರಾಷ್ಟ್ರದಲ್ಲಿ ಕೆಲಸಕ್ಕೆ ಹೋಗಿದ್ದ ವೇಳೆ ಮಹಿಳೆಯೊಬ್ಬರ ಮೇಲೆ ಈ ಸಹೋದರರು ಅತ್ಯಾಚಾರಕ್ಕೆ ಯತ್ನಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ವಿಚಾರ ತಿಳಿದ ಗ್ರಾಮದ ಲಂಬಾಣಿ ಸಮುದಾಯದ ಮುಖಂಡರು ಆರೋಪಿಗಳನ್ನು ಕರೆಸಿ ತಲೆ ಬೋಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿಸಿದ್ದಾರೆ.

    ಹೆಗಡಿಹಾಳ ತಾಂಡಾದಲ್ಲಿ ಮುಖಂಡರು ಮೆರವಣಿಗೆ ಮಾಡಿಸಿದ್ದು ತೇಜು ಚೌಹಾಣ್, ರಾಜು ಚೌಹಾಣ್ ಈ ಇಬ್ಬರು ಯುವಕರ ತಲೆ ಬೋಳಿಸಿದ್ದಾರೆ. ಇವರಿಬ್ಬರೂ ಅವಳಿ ಜವಳಿ ಸಹೋದರರಾಗಿದ್ದಾರೆ. ಮುಖಂಡರು ಹಾಗೂ ಗ್ರಾಮದ ಪಂಚರು ಇಬ್ಬರ ತಲೆ ಬೋಳಿಸಿ ಮೆರವಣಿಗೆ ಮಾಡಿ ಮಹಿಳೆಗೆ ತಮ್ಮ ಕೈಯಲ್ಲಿ ಆದಷ್ಟು ನ್ಯಾಯವನ್ನು ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts