More

    ಸೋಲಿನ ಬೆನ್ನಲ್ಲೇ ವಿರಾಟ್​ ಕೊಹ್ಲಿ ವಿರುದ್ಧ ಗಂಭೀರ ಆರೋಪ ಮಾಡಿದ ಬಾಂಗ್ಲಾ ಆಟಗಾರ ನರುಲ್​ ಹಸನ್​!

    ಸಿಡ್ನಿ: ನಿನ್ನೆ (ನ.2) ನಡೆದ ಟಿ20 ವಿಶ್ವಕಪ್​ ಪಂದ್ಯದಲ್ಲಿ ಟೀಮ್​ ಇಂಡಿಯಾದ ಆಟಗಾರ ಹಾಗೂ ಮಾಜಿ ನಾಯಕ ವಿರಾಟ್​ ಕೊಹ್ಲಿ ಅವರು ನಕಲಿ ಕ್ಷೇತ್ರರಕ್ಷಣೆ ಮಾಡಿದ್ದಾರೆ ಎಂದು ಬಾಂಗ್ಲಾದೇಶ ವಿಕೆಟ್​ ಕೀಪರ್​ ಕಂ ಬ್ಯಾಟ್ಸ್​ಮನ್​ ನರುಲ್​ ಹಸನ್​ ಗಂಭೀರ ಆರೋಪ ಮಾಡಿದ್ದಾರೆ.

    ಕೊಹ್ಲಿ ನಕಲಿ ಕ್ಷೇತ್ರ ರಕ್ಷಣೆ ಮಾಡಿದ್ದನ್ನು ಅಂಪೈರ್​ ಗಮನಿಸಲಿಲ್ಲ. ಇದರಿಂದ ನಮ್ಮ ತಂಡಕ್ಕೆ 5 ಪೆನಾಲ್ಟಿ ರನ್​ ಸಿಗುವ ಸಾಧ್ಯತೆ ಇತ್ತು. ಆದರೆ, ಅಂಪೈರ್​ಗಳು ಮಾಡಿದ ಎಡವಟ್ಟಿನಿಂದಾಗಿ ನಮ್ಮ ತಂಡಕ್ಕೆ ವಂಚನೆ ಆಗಿದೆ ಎಂದು ಅಪೈಂರ್​ಗಳಾದ ಕ್ರಿಸ್​ ಬ್ರೌನ್​ ಮತ್ತು ಮರೈಸ್ ಎರಾಸ್ಮಸ್ ವಿರುದ್ಧ ಆರೋಪ ಮಾಡಿದ್ದಾರೆ.

    ಮಳೆಯ ಕಾರಣದಿಂದಾಗಿ ಡಕ್​ವರ್ತ್​ ಲೂಯಿಸ್​ ನಿಯಮದ ಪ್ರಕಾರ ಬಾಂಗ್ಲಾ ತಂಡಕ್ಕೆ 16 ಓವರ್​ಗಳಲ್ಲಿ 151 ರನ್​ ಗುರಿ ನೀಡಲಾಗಿತ್ತು. ಆದರೆ, ಅಂತಿಮವಾಗಿ 5 ರನ್​ ಅಂತರದಿಂದ ಬಾಂಗ್ಲಾ ತಂಡ ಸೋಲನ್ನು ಅನುಭವಿಸಿತು. ಅಂತಿಮ ಓವರ್​ನಲ್ಲಿ ಅರ್ಷದೀಪ್​ ಸಿಂಗ್​ಗೆ ಒಂದು ಸಿಕ್ಸರ್​ ಮತ್ತು ಬೌಂಡರಿ ಮೂಲಕ ಪಂದ್ಯವನ್ನು ಜೀವಂತವಾಗಿರಿಸಿದ್ದ ನರುಲ್​, ಕೊನೆಯಲ್ಲಿ ಐದು ರನ್​ಗಳ ಅಂತರದಿಂದ ಸೋತ ಬಳಿಕ ಅಂಪೈರ್​ಗಳನ್ನು ದೂಷಿಸಿದರು.

    ಮಳೆಯಿಂದಾಗಿ ಮೈದಾನ ತೇವವಾಗಿದ್ದರಿಂದ ಪಂದ್ಯದ ದಿಕ್ಕೇ ಬದಲಾಯಿತು. ಆದರೆ, ನಕಲಿ ಕ್ಷೇತ್ರ ರಕ್ಷಣೆಯಿಂದ ನಮಗೆ 5 ರನ್​ ಸಿಗಬಹುದಿತ್ತು. ಆದರೆ, ಅದು ಕೂಡ ಸಿಗಲಿಲ್ಲ ಎಂದು ಅಂಪೈರ್​ಗಳಿಬ್ಬರ ವಿರುದ್ಧ ನರುಲ್​ ಅಸಮಾಧಾನ ಹೊರಹಾಕಿದ್ದಾರೆ.

    ಅಂದಹಾಗೆ ನರುಲ್​ 7ನೇ ಓವರ್​ನಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸಿ ಈ ಮಾತನ್ನು ಆಡಿದ್ದಾರೆ. ಬೌಂಡರಿ ಲೈನ್​ನಲ್ಲಿದ್ದ ಅರ್ಷದೀಪ್​ ಚೆಂಡನ್ನು ವಿಕೆಟ್​ ಕೀಪರ್​ ಬಳಿ ಎಸೆಯುತ್ತಾರೆ. ಈ ವೇಳೆ ಸ್ಲಿಪ್​ ವಿಭಾಗದಲ್ಲಿ ನಿಂತಿದ್ದ ಕೊಹ್ಲಿ ಚೆಂಡನ್ನು ಹಿಡಿದಿರುವಂತೆ ಮತ್ತು ನಾನ್​ ಸ್ಟ್ರೈಕರ್​ ವಿಭಾಗಕ್ಕೆ ಎಸೆಯುತ್ತಿರುವಂತೆ ನಟಿಸುತ್ತಾರೆ. ಆದರೆ, ಚೆಂಡು ವಿಕೆಟ್​ ಕೀಪರ್​ ಕೈಯಲ್ಲಿ ಇರುತ್ತದೆ. ಆ ಕ್ಷಣದಲ್ಲಿ ಬ್ಯಾಟ್ಸ್​ಮನ್​ಗಳಾದ ಲಿಟನ್​ ದಾಸ್​ ಮತ್ತು ನಿಜ್ಮುಲ್​ ಹೊಸೈನ್​ ಕೊಹ್ಲಿಯನ್ನು ಗಮನಿಸುವುದೇ ಇಲ್ಲ.

    ಇದೀಗ ಇದಕ್ಕೆ ಸಂಬಂಧಿಸಿದ ವಿಡಿಯೋ ಶೇರ್​ ಮಾಡಿರುವ ನರುಲ್​, ಅಂಪೈರ್​ಗಳು ಇದ್ದನ್ನು ಗಮನಿಸಿದ್ದರೆ ನಮಗೆ 5 ರನ್​ ಪೆನಾಲ್ಟಿ ಸಿಗುತ್ತಿತ್ತು ಎಂದಿದ್ದಾರೆ. ಇದು ನಕಲಿ ಕ್ಷೇತ್ರ ರಕ್ಷಣೆಯಾಗಿದ್ದು, ಅದನ್ನು ಗಮನಿಸಿದ ಅಂಪೈರ್​ಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

    ಐಸಿಸಿ ಆಟದ ನಿಯಮ 41.5 ಅನ್ಯಾಯದ ಆಟಕ್ಕೆ ಸಂಬಂಧಿಸಿದೆ. ಫೀಲ್ಡಿಂಗ್ ತಂಡವು ಉದ್ದೇಶಪೂರ್ವಕವಾಗಿ ವಂಚನೆ ಅಥವಾ ಬ್ಯಾಟ್ಸ್​ಮನ್​ಗೆ ಅಡಚಣೆ ಉಂಟು ಮಾಡುವುದನ್ನು ಈ ನಿಯಮ ನಿಷೇಧಿಸುತ್ತದೆ. ಒಂದು ವೇಳೆ ಇದು ಅಂಪೈರ್​ ಗಮನಕ್ಕೆ ಬಂದು ನಿಯಮ ಉಲ್ಲಂಘನೆ ಎಂದು ಗೊತ್ತಾದಲ್ಲಿ ಆ ಎಸೆತವನ್ನು ಡೆಡ್​ ಬಾಲ್​ ಎಂದು ಪರಿಗಣಿಸಿ, ಐದು ಪೆನಾಲ್ಟಿ ರನ್​ ಕೊಡಬಹುದು. ಆದರೆ, ಕೊಹ್ಲಿ ಪ್ರಕರಣದಲ್ಲಿ ಆ ರೀತಿ ನಡೆದಿಲ್ಲ. ಏಕೆಂದರೆ, ಕೊಹ್ಲಿ ಚೆಂಡನ್ನು ಎಸೆಯುವಂತೆ ನಟಿಸಿದಾಗ ಬ್ಯಾಟ್ಸ್​ಮನ್​ಗಳು ಕೊಹ್ಲಿಯನ್ನು ಗಮನಿಸಿಲ್ಲ ಮತ್ತು ಯಾವುದೇ ಅಡಚಣೆಗೆ ಒಳಗಾಗಿಯೇ ಇಲ್ಲ. ಹೀಗಾಗಿ ಆರೋಪಕ್ಕೆ ಬೆಲೆಯಿಲ್ಲ ಎಂದು ಹೇಳಲಾಗಿದೆ. (ಏಜೆನ್ಸೀಸ್​)

    ವಿಜಯವಾಣಿ ಅಚ್ಚಗನ್ನಡ ಅಭಿಯಾನ: ಬನ್ನಿ ಭಾಗವಹಿಸಿ ಬಹುಮಾನ ಗೆಲ್ಲಿ

    ಅಧಿಕಾರ ಸ್ವೀಕರಿಸುತ್ತಿದ್ದಂತೆ ತಮ್ಮ ನಿರ್ಧಾರದಿಂದ ಯೂಟರ್ನ್​ ಹೊಡೆದ ಬ್ರಿಟನ್​ ಪ್ರಧಾನಿ ರಿಷಿ ಸುನಕ್​!

    ನಗುತ್ತಲೇ ಸೆಲ್ಫಿಗೆ ಪೋಸ್​​ ನೀಡಿ ಗರ್ಭಿಣಿ ಪತ್ನಿಯನ್ನು ಬೆಟ್ಟದಿಂದ ನೂಕಿದ ಪತಿಗೆ 30 ವರ್ಷ ಜೈಲು ಶಿಕ್ಷೆ!

    VIDEO| ಸ್ಕೂಟರ್​ ಒಳಗಡೆ ಅಡಗಿ ಕುಳಿತ ದೈತ್ಯ ನಾಗರಹಾವು: ಮೈ ಜುಮ್​ ಎನಿಸುವ ವಿಡಿಯೋ ಇದು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts