More

    ರಕ್ಷಣಾ ಸಚಿವಾಲಯದಿಂದ ಧರ್ಮಸ್ಥಳಕ್ಕೆ ಬಂತು ಟಿ-565 ಯುದ್ಧ ಟ್ಯಾಂಕ್; ಇಲ್ಲಿದೆ ಇದರ ವಿಶೇಷತೆ

    ಬೆಂಗಳೂರು: ಧರ್ಮಸ್ಥಳ ಮಂಜುನಾಥೇಶ್ವರ ದೇವಾಲಯದಲ್ಲಿರುವ ‘ಮಂಜೂಷಾ’ ವಸ್ತು ಸಂಗ್ರಹಾಲಯಕ್ಕೆ ರಕ್ಷಣಾ ಸಚಿವಾಲಯದಿಂದ ಟಿ-565 ಯುದ್ಧ ಟ್ಯಾಂಕ್ ಕೊಡುಗೆಯಾಗಿ ನೀಡಲಾಗಿದೆ.

    ಭಾರತೀಯ ರಕ್ಷಣಾ ಸಚಿವಾಲಯದಿಂದ ಪೂನಾದ ಕೇಂದ್ರೀಯ ರಕ್ಷಣಾ ಡಿಪೋದ ಮೂಲಕ ಧರ್ಮಸ್ಥಳದ ಮಂಜೂಷಾ ವಸ್ತಸಂಗ್ರಹಾಲಯಕ್ಕೆ ಟಿ-565 ಯುದ್ಧ ಟ್ಯಾಂಕ್​ನ್ನು ರವಾನಿಸಲಾಗಿದೆ.

    ರಕ್ಷಣಾ ಸಚಿವಾಲಯದಿಂದ ಧರ್ಮಸ್ಥಳಕ್ಕೆ ಬಂತು ಟಿ-565 ಯುದ್ಧ ಟ್ಯಾಂಕ್; ಇಲ್ಲಿದೆ ಇದರ ವಿಶೇಷತೆ

    ದೇಶದ ರಕ್ಷಣಾ ಕಾರ್ಯದಲ್ಲಿ ಸುಮಾರು 40 ವರ್ಷಗಳ ಕಾಲ ಟಿ-565 ಯುದ್ಧ ಟ್ಯಾಂಕ್ ಬಳಕೆಯಾಗಿದೆ. 1971ರ ಇಂಡೋ-ಪಾಕ್ ಯುದ್ಧ ಮತ್ತು ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಈ ಟ್ಯಾಂಕ್ ಭಾಗಿಯಾಗಿದೆ.

    40 ಟನ್‌ಗಳಷ್ಟು ತೂಕ ಹೊಂದಿರುವ ಟಿ-565 ಯುದ್ಧ ಟ್ಯಾಂಕ್ 9 ಅಡಿ ಎತ್ತರ, 27.6 ಅಡಿ ಉದ್ದ ಮತ್ತು 10.8 ಅಗಲವಿದೆ. ಗಂಟೆಗೆ 51 ಕಿ.ಮೀ. ಗರಿಷ್ಠ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. 1968ರಲ್ಲಿ ಭಾರತೀಯ ಸೇನೆಗೆ ಈ ಟ್ಯಾಂಕ್ ಸೇರ್ಪಡೆಯಾಗಿದ್ದು, ಸೋವಿಯತ್ ಒಕ್ಕೂಟ ಸಿಬ್ಬಂದಿ ಇದನ್ನು ನಿರ್ಮಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts