More

    ಬಿಜೆಪಿ ಮೈತ್ರಿಯೊಂದಿಗೆ ಭಾನುವಾರ ಸಿಎಂ ಆಗಿ ಪ್ರಮಾಣವಚನ: ನಿತೀಶ್​ಕುಮಾರ್​ ಮತ್ತೆ ‘ಪಲ್ಟಿ ರಾಮ’ ಆಗಿದ್ದೇಕೆ?

    ನವದೆಹಲಿ: ನಿತೀಶ್ ಕುಮಾರ್ ಅವರು ಬಿಜೆಪಿಯ ಬೆಂಬಲದೊಂದಿಗೆ ಭಾನುವಾರ ಒಂಬತ್ತನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಬೆಂಬಲಕ್ಕೆ ಬದಲಾಗಿ ಬಿಜೆಪಿಗೆ ಎರಡು ಉಪಮುಖ್ಯಮಂತ್ರಿ ಸ್ಥಾನಗಳನ್ನು ದಕ್ಕಲಿವೆ ಎನ್ನಲಾಗಿದೆ. ಇದು 2020 ರ ಚುನಾವಣೆಯ ನಂತರ ಒಪ್ಪಂದವನ್ನು ಪ್ರತಿಬಿಂಬಿಸುತ್ತದೆ.

    ನಿತೀಶ್ ಕುಮಾರ್ ಅವರು ಶನಿವಾರ ಬೆಳಗ್ಗೆ 10 ಗಂಟೆಗೆ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸರ್ಕಾರದಲ್ಲಿ ಮುಂಬರುವ ಬದಲಾವಣೆಯ ವರದಿಗಳ ನಡುವೆ ಬಿಹಾರದಲ್ಲಿ ಜಿಲ್ಲಾಧಿಕಾರಿಗಳ ದೊಡ್ಡ ಪ್ರಮಾಣದ ವರ್ಗಾವಣೆ ಕೂಡ ನಡೆಯುತ್ತಿದೆ.

    ಈ ಸಮಯದಲ್ಲಿ ವಿಧಾನಸಭೆಯನ್ನುವಿಸರ್ಜಿಸಲಾಗುವುದಿಲ್ಲ ಮತ್ತು ಮತದಾನವನ್ನು ನಡೆಸಲಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಬಿಹಾರದಲ್ಲಿ ಹೇಗಾದರೂ ಮುಂದಿನ ವರ್ಷ ಮತದಾನ ನಡೆಯಲಿದೆ, ಆದ್ದರಿಂದ ಎರಡೂ ಪಕ್ಷಗಳು ಅವಸರದಲ್ಲಿಲ್ಲ ಎಂಬುದು ಅರ್ಥವಾಗುವಂತಹದ್ದಾಗಿದೆ. ಏಪ್ರಿಲ್‌/ಮೇನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯ ಮೇಲೆ ತಕ್ಷಣದ ಗಮನ ಕೇಂದ್ರೀಕರಿಸಲಿವೆ.

    ಬಿಜೆಪಿ ಮತ್ತು ನಿತೀಶ್ ಅವರ ಜನತಾ ದಳ (ಯುನೈಟೆಡ್) ಎರಡೂ ಪಕ್ಷಗಳು ತಮ್ಮ ಸಂಸದರು ಮತ್ತು ಶಾಸಕರನ್ನು ಕರೆಸಿ ಈ ಒಪ್ಪಂದವನ್ನು ಅಂತಿಮಗೊಳಿಸಲಿವೆ, ಈ ನಡುವೆ ಮುಖ್ಯಮಂತ್ರಿ ಕುಮಾರ್ ಅವರು ಶುಕ್ರವಾರ ಸಂಜೆ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರನ್ನು ಭೇಟಿಯಾಗಿದ್ದಾರೆ, ಪ್ರತಿ ಗಣರಾಜ್ಯೋತ್ಸವದಂದು ಆಯೋಜಿಸಲಾಗುವ ಈ ಚಹಾ ಕೂಟಕ್ಕೆ ರಾಷ್ಟ್ರೀಯ ಜನತಾದಳ ಸರ್ಕಾರದ ಭಾಗವಾಗಿರುವ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಗೈರು ಹಾಜರಾಗಿದ್ದರು.

    ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುವುದು ಸೇರಿದಂತೆ ಜನವರಿ 28 ರ ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ನಿತೀಶ್​ ರದ್ದುಗೊಳಿಸಿದ್ದಾರೆ ಎಂದು ಮೂಲಗಳು ಇಂದು ತಿಳಿಸಿವೆ, ಅವರು 2022 ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬಿಜೆಪಿಯಿಂದ ಮೈತ್ರಿ ಕಡಿದುಕೊಂಡು ಆರ್‌ಜೆಡಿ ಜತೆ ಕೈಜೋಡಿಸಿದ್ದರು. ಈ ಮತ್ತೆ ಬಿಜೆಪಿಗೆ ಕೈಜೋಡಿಸಿ ‘ಪಲ್ಟು ಕುಮಾರ್’ ಎಂಬ ಅಡ್ಡಹೆಸರನ್ನು ಮತ್ತೆ ಪಡೆಯಲು ಸಜ್ಜಾಗಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ.

    ಇಂಡಿಯಾ ಮೈತ್ರಿಕೂಟದ ಅಧ್ಯಕ್ಷರನ್ನಾಗಿ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ಕೆ ಮಾಡಿದ ನಂತರ ನಿತೀಶ್​ಕುಮಾರ್​ ಅವರು ಈಚೆಗೆ ಆ ಮೈತ್ರಿಕೂಟದ ಸಂಚಾಲಕ ಹುದ್ದೆಯನ್ನು ತಿರಸ್ಕರಿಸಿದ್ದರು. ಇದು ಮೈತ್ರಿಕೂಟದ ಬಗೆಗೆ ಕುಮಾರ್ ಅವರ ಅಸಮಾಧಾನ ಇರುವುದನ್ನು ತೋರಿಸಿತ್ತು. ಬಿಹಾರದಲ್ಲಿ ಕಾಂಗ್ರೆಸ್ ಜೊತೆ ಸೀಟು ಹಂಚಿಕೆಯಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದೂ ಅವರು ಹೇಳಿದ್ದರು.

    ರಾಜ್ಯದಲ್ಲಿ ರಾಷ್ಟ್ರೀಯ ಜನತಾ ದಳ ಮತ್ತು ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವಲ್ಲಿ ಕುಮಾರ್‌ಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ರಾಷ್ಟ್ರ ಮಟ್ಟಕ್ಕೆ ಬಂದಾಗ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವಂತೆ ಅವರ ಪಕ್ಷದ ಶಾಸಕರಿಂದ ಒತ್ತಡ ಇತ್ತು ಎಂದು ಮೂಲಗಳು ತಿಳಿಸಿವೆ.

    ಕಳೆದ ಬಾರಿಯ 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜನತಾ ದಳ (ಯುನೈಟೆಡ್) ಮೈತ್ರಿ ಇತ್ತು. ಆಗ ಬಿಹಾರದ 40 ಸ್ಥಾನಗಳ ಪೈಕಿ 39 ಸ್ಥಾನಗಳನ್ನು ಈ ಮೈತ್ರಿ ಗೆದ್ದಿತ್ತು. ಹೀಗಾಗಿ, ರಾಷ್ಟ್ರೀಯ ಚುನಾವಣೆಗೆ ಬಂದಾಗ, ರಾಷ್ಟ್ರೀಯ ಜನತಾ ದಳಕ್ಕಿಂತ ಹೆಚ್ಚಾಗಿ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವುದು ಲಾಭದಾಯದ ಎಂಬ ಲೆಕ್ಕಾಚಾರ ಇದೆ ಎಂದು ಮೂಲಗಳು ತಿಳಿಸಿವೆ.

    ಅಡಲ್ಟ್ ಫಿಲ್ಮ್​ ಸ್ಟಾರ್​ ಜೆಸ್ಸಿ ಜೇನ್ ಮತ್ತು ಬಾಯ್​ಫ್ರೆಂಡ್​ ಶವವಾಗಿ ಪತ್ತೆ: 43ರ ಸಣ್ಣ ವಯಸ್ಸಿನಲ್ಲಿಯೇ ಸಾವನ್ನಪ್ಪಿದ್ದೇಕೆ?

    ಕರ್ನಾಟಕದ ಈ ಕಂಪನಿಯ ಷೇರು 4 ವರ್ಷಗಳಲ್ಲಿ 2021% ರಷ್ಟು ಏರಿಕೆ: 5 ಬೋನಸ್​ ಷೇರು ಬಹುಮಾನ ನೀಡಲು ಸಜ್ಜಾಗುತ್ತಿದ್ದಂತೆ ಅಪಾರ ಬೇಡಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts