More

    ಕರ್ನಾಟಕದ ಈ ಕಂಪನಿಯ ಷೇರು 4 ವರ್ಷಗಳಲ್ಲಿ 2021% ರಷ್ಟು ಏರಿಕೆ: 5 ಬೋನಸ್​ ಷೇರು ಬಹುಮಾನ ನೀಡಲು ಸಜ್ಜಾಗುತ್ತಿದ್ದಂತೆ ಅಪಾರ ಬೇಡಿಕೆ

    ಮುಂಬೈ: ಈ ಮಲ್ಟಿಬ್ಯಾಗರ್ ಷೇರು ಬೆಲೆ ರೂ 150 ರಿಂದ ರೂ 3200 ರೂ. ದಾಟಿದೆ, ಈಗ ಕಂಪನಿಯು 5 ಬೋನಸ್ ಷೇರುಗಳನ್ನು ನೀಡುತ್ತಿದ್ದು, ಇದಕ್ಕಾಗಿ ದಿನಾಂಕವನ್ನು ಕೂಡ ಪ್ರಕಟಿಸಿದೆ

    ಸಂಡೂರ್ ಮ್ಯಾಂಗನೀಸ್ ಆ್ಯಂಡ್​ ಐರನ್​ ಓರ್ಸ್​ ಲಿಮಿಟೆಡ್​ (Sandur Manganese and Iron Ores Ltd. ತನ್ನ ಹೂಡಿಕೆದಾರರಿಗೆ ದೊಡ್ಡ ಉಡುಗೊರೆಯನ್ನು ನೀಡುತ್ತಿದೆ. ಈ ಕಂಪನಿಯು 5:1 ಅನುಪಾತದಲ್ಲಿ ಬೋನಸ್ ಷೇರುಗಳನ್ನು ನೀಡುವುದಾಗಿ ಘೋಷಿಸಿದೆ. ಅಂದರೆ, ಕಂಪನಿಯು ಪ್ರತಿ ಷೇರಿಗೆ 5 ಬೋನಸ್ ಷೇರುಗಳನ್ನು ನೀಡುತ್ತದೆ. ಬೋನಸ್ ಷೇರುಗಳ ದಾಖಲೆ ದಿನಾಂಕವನ್ನು ಫೆಬ್ರವರಿ 2 ಎಂದು ನಿಗದಿಪಡಿಸಿದೆ.

    ಕರ್ನಾಟಕ ಮೂಲದ ಈ ಸ್ಮಾಲ್‌ಕ್ಯಾಪ್ ಕಂಪನಿಯ ಷೇರುಗಳು 150 ರೂ.ನಿಂದ 3200 ರೂಗೆ ಏರಿವೆ. ಕಂಪನಿಯ ಷೇರುಗಳು 4 ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಈ ಮೈಲಿಗಲ್ಲನ್ನು ಸಾಧಿಸಿವೆ.
    ಈ ಅವಧಿಯಲ್ಲಿ ಸಂಡೂರ್ ಮ್ಯಾಂಗನೀಸ್ ಷೇರುಗಳು ಶೇಕಡಾ 2000ಕ್ಕಿಂತ ಅಧಿಕ ಏರಿಕೆ ಕಂಡಿವೆ.

    ಸಂಡೂರ್ ಮ್ಯಾಂಗನೀಸ್ ಷೇರುಗಳು ಕಳೆದ 4 ವರ್ಷಗಳಲ್ಲಿ ತ್ವರಿತ ಏರಿಕೆ ಕಂಡಿವೆ. 9 ಏಪ್ರಿಲ್ 2020 ರಂದು ಈ ಕಂಪನಿಯ ಷೇರುಗಳ ಬೆಲೆ 150.95 ರೂಪಾಯಿ ಇತ್ತು. 25 ಜನವರಿ 2024 ರಂದು ಈ ಷೇರುಗಳ ಬೆಲೆ 3201.30 ರೂಪಾಯಿ ತಲುಪಿದೆ. ಈ ಮೂಲಕ ಈ ಕಂಪನಿಯ ಷೇರುಗಳು ಕಳೆದ 4 ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ 2021% ರಷ್ಟು ಏರಿಕೆಯಾಗಿದೆ.

    ಕಳೆದ 2 ವರ್ಷಗಳಲ್ಲಿ ಕಂಪನಿಯ ಷೇರುಗಳ ಬೆಲೆ 297% ರಷ್ಟು ಏರಿಕೆಯಾಗಿದೆ. ಸಂಡೂರ್ ಮ್ಯಾಂಗನೀಸ್ ಷೇರುಗಳ 52 ವಾರದ ಗರಿಷ್ಠ ಬೆಲೆ 3258 ರೂಪಾಯಿ ಇದ್ದರೆ, ಕನಿಷ್ಠ ಬೆಲೆ 852.20 ರೂಪಾಯಿ. 1 ವರ್ಷದಲ್ಲಿ ಈ ಕಂಪನಿಯ ಷೇರುಗಳ ಬೆಲೆ 237% ಏರಿಕೆ ದಾಖಲಿಸಿದೆ. ಕಂಪನಿಯ ಷೇರುಗಳ ಬೆಲೆ ಜನವರಿ 27, 2023 ರಂದು 952.05 ರೂಪಾಯಿ ಇದ್ದು, ಈಗ ರೂ 3201.30 ತಲುಪಿದೆ. ಕಳೆದ 6 ತಿಂಗಳಲ್ಲಿ ಸಂಡೂರ್ ಮ್ಯಾಂಗನೀಸ್ ಷೇರುಗಳು 159% ಏರಿಕೆಯಾಗಿವೆ. ಕಳೆದ 6 ತಿಂಗಳಲ್ಲಿ ಕಂಪನಿಯ ಷೇರುಗಳ ಬೆಲೆ 1237.35 ರೂ.ನಿಂದ 3201.30 ರೂ.ಗೆ ಏರಿಕೆಯಾಗಿದೆ. ಕಳೆದ 5 ದಿನಗಳಲ್ಲಿ, ಸಂಡೂರ್ ಮ್ಯಾಂಗನೀಸ್ ಷೇರುಗಳ ಬೆಲೆ 17% ರಷ್ಟು ಭರ್ಜರಿ ಏರಿಕೆ ಕಂಡಿದೆ.

    ಕರ್ನಾಟಕದ ಹೊಸಪೇಟೆ-ಬಳ್ಳಾರಿ ಪ್ರದೇಶದಲ್ಲಿ ಮ್ಯಾಂಗನೀಸ್ ಮತ್ತು ಕಬ್ಬಿಣದ ಅದಿರಿನ ಗಣಿಗಾರಿಕೆಯಲ್ಲಿ ಈ ಕಂಪನಿ ತೊಡಗಿಸಿಕೊಂಡಿದೆ.

    ಮೇಡ್​ ಇನ್​ ಇಂಡಿಯಾ ಹೆಲಿಕಾಪ್ಟರ್ ಉತ್ಪಾದನೆಗೆ ಟಾಟಾ- ಏರ್‌ಬಸ್ ಒಪ್ಪಂದ: ಎಲ್ಲಿ, ಯಾವಾಗ ತಯಾರಿಕೆ ಆರಂಭ?

    16000% ಏರಿಕೆ ಕಂಡ ಷೇರಿಗೆ ಈಗ ಮತ್ತೆ ಡಿಮ್ಯಾಂಡು: ಬೋನಸ್ ಷೇರು ನೀಡಲು ಮಲ್ಟಿಬ್ಯಾಗರ್ ಕಂಪನಿ ಸಜ್ಜು

    ವಿದ್ಯಾರ್ಥಿಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಎಂಎಲ್​ಎ ಕ್ಷಮೆ ಕೇಳಿದ್ದೇಕೆ?: ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋ ವೈರಲ್​

    ಮೇಡ್​ ಇನ್​ ಇಂಡಿಯಾ ಹೆಲಿಕಾಪ್ಟರ್ ಉತ್ಪಾದನೆಗೆ ಟಾಟಾ- ಏರ್‌ಬಸ್ ಒಪ್ಪಂದ: ಎಲ್ಲಿ, ಯಾವಾಗ ತಯಾರಿಕೆ ಆರಂಭ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts