More

    ವಿದ್ಯಾರ್ಥಿಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಎಂಎಲ್​ಎ ಕ್ಷಮೆ ಕೇಳಿದ್ದೇಕೆ?: ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋ ವೈರಲ್​

    ಚೆನ್ನೈ: ಡಿಎಂಕೆ ಸದಸ್ಯರು ವಿದ್ಯಾರ್ಥಿಗಳಿಗೆ ಸೆಂಟರ್ ಸ್ಟೇಜ್ ನೀಡದೆ ವಾಗ್ವಾದಕ್ಕಿಳಿದರು ಎಂದು ಆರೋಪಿಸಿ ವಿದ್ಯಾರ್ಥಿಗಳ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿದ ಪಿಎಂಕೆ ಶಾಸಕ ಅರುಳ್

    ಸೇಲಂನ ಬಾಗಲ್‌ಪಟ್ಟಿಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಸರ್ಕಾರ ಆಯೋಜಿಸಿದ್ದ ಬೈಸಿಕಲ್ ವಿತರಣೆ ಕಾರ್ಯಕ್ರಮದಲ್ಲಿ ರಾಜಕೀಯ ಗಲಾಟೆ ನಡೆಯಿತು. ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ಸದಸ್ಯರು ಆಡಳಿತ ಪಕ್ಷಕ್ಕೆ ಈ ಕಾರ್ಯಕ್ರಮದ ವೇದಿಕೆಯಲ್ಲಿ ಮಹತ್ವ ನೀಡದಿರುವುದಕ್ಕಾಗಿ ಶಾಲೆಯ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದರು. ನಂತರ ಈ ಘಟನೆ ವಿಕೋಪಕ್ಕೆ ಹೋಯಿತು.

    ಪಟ್ಟಾಲಿ ಮಕ್ಕಳ್ ಕಚ್ಚಿ (ಪಿಎಂಕೆ)ಗೆ ಸೇರಿದ ಶಾಸಕ ಅರುಳ್ ಅವರು ಈ ಘಟನೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಕ್ಷಮೆ ಯಾಚಿಸಿದರು. ಇಷ್ಟೆ ಅಲ್ಲ, ವಿದ್ಯಾರ್ಥಿಗಳ ಕಾಲಿಗೆ ಬೀಳುವುದರೊಂದಿಗೆ ಜಗಳಕ್ಕೆ ಶಾಸಕರು ಕೊನೆ ಹಾಡಿದ್ದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್​ ಆಗಿದೆ.

    ಸಮೀಪದ ಕಾಲೇಜಿನಲ್ಲಿ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಲು ವಿದ್ಯಾರ್ಥಿಗಳು ತೆರಳಬೇಕಾಗಿರುವುದರಿಂದ ಸೈಕಲ್‌ಗಳನ್ನು ವಿತರಿಸಿ ಶೀಘ್ರವೇ ಕಾರ್ಯಕ್ರಮವನ್ನು ಮುಕ್ತಾಯಗೊಳಿಸುವುದಾಗಿ ಶಾಸಕ ಅರುಳ್ ಹೇಳಿದರು. ಆದರೆ, ಡಿಎಂಕೆ ಸದಸ್ಯರು ತಮಗೆ ಈ ಸಮಾರಂಭದಲ್ಲಿ ಮಾತನಾಡಲು ಅವಕಾಶ ನೀಡದ ಕಾರಣ ಅಸಮಾಧಾನ ವ್ಯಕ್ತಪಡಿಸಿದರು.

    ಆಗ ಡಿಎಂಕೆ ಸದಸ್ಯರು “ನಾವು ಆಡಳಿತ ಪಕ್ಷ. ನಾವು ಇಲ್ಲದಿದ್ದರೆ, ವಿತರಿಸಲು ಯಾವುದೇ ಸೈಕಲ್‌ಗಳು ಇರುತ್ತಿರಲಿಲ್ಲ” ಎಂದು ಶಾಸಕರನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಅರುಳ್ ಅವರು, ವಿದ್ಯಾರ್ಥಿಗಳ ಕಾರ್ಯಕ್ರಮವನ್ನು ರಾಜಕೀಯಗೊಳಿಸಬೇಡಿ ಎಂದು ಮನವಿ ಮಾಡಿದರು ಎನ್ನಲಾಗಿದೆ.

    ಆದರೆ, ಡಿಎಂಕೆ ಕೃಷಿ ತಂಡದ ಜಿಲ್ಲಾ ಉಪ ಸಂಘಟಕ ರಾಜು ಅವರು, ಈ ಕಾರ್ಯಕ್ರಮ ಸುಗಮವಾಗಿ ನಡೆಯದಂತೆ ತಡೆ ಒಡ್ಡಿದರು ಎನ್ನಲಾಗಿದೆ. ಈ ಗಲಾಟೆಯಿಂದ ಬೇಸರಗೊಂಡ ಶಾಸಕ ಅರುಳ್ ಅವರು ಈ ಘಟನೆಯನ್ನು ರಾಜಕೀಯಗೊಳಿಸಬೇಡಿ ಮತ್ತು ವಿದ್ಯಾರ್ಥಿಗಳ ಮುಂದೆ ದೃಶ್ಯವನ್ನು ಸೃಷ್ಟಿಸಬೇಡಿ ಎಂದು ಮತ್ತೊಮ್ಮೆ ವಿನಂತಿಸಿದರು. ತದನಂತರ ಅರುಲ್ ಅವರು ವಿದ್ಯಾರ್ಥಿಗಳ ಮುಂದೆ ನೆಲದ ಮೇಲೆ ಸಾಷ್ಟಾಂಗ ನಮಸ್ಕಾರ ಮಾಡಿದರು.

    ಗಲಾಟೆಗೆ ತೀವ್ರ ವಿಷಾದ ವ್ಯಕ್ತಪಡಿಸಿದ ಶಾಸಕರು ಮೈಕ್ ತೆಗೆದುಕೊಂಡು ವಿದ್ಯಾರ್ಥಿಗಳಿಗೆ ಈ ರೀತಿ ಹೇಳಿದರು “ನೀವು ಉತ್ತಮ ಮೌಲ್ಯಗಳು ಮತ್ತು ನಡವಳಿಕೆಯ ಬಗ್ಗೆ ಕಲಿಯಬೇಕಾದ ಸ್ಥಳದಲ್ಲಿ ನಾವು ನಿಮ್ಮನ್ನು ಅಸಂಸ್ಕೃತಿಯೊಂದಕ್ಕೆ ಸಾಕ್ಷಿಯಾಗುವಂತೆ ಮಾಡಿದ್ದೇವೆ. ಇದಕ್ಕಾಗಿ ನಾನು ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತೇನೆ. ನಾನು ನಿಮ್ಮ ಪಾದಗಳಿಗೆ ಬಿದ್ದು ಕ್ಷಮೆಯಾಚಿಸಲು ಬಯಸುತ್ತೇನೆ” ಎಂದಿದ್ದಾರೆ. ಆಗ ಅಕ್ಕಪಕ್ಕದಲ್ಲಿದ್ದ ಇತರರು ತಡೆದರೂ, ಅರುಲ್ ಅವರು ವಿದ್ಯಾರ್ಥಿಗಳ ಮುಂದೆ ನೆಲದ ಮೇಲೆ ಸಾಷ್ಟಾಂಗ ನಮಸ್ಕಾರ ಮಾಡಿ ಕ್ಷಮೆ ಯಾಚಿಸಿದರು.

    ಐಪಿಒ ತೆರೆಯುವ ಮೊದಲೇ ಗ್ರೇ ಮಾರುಕಟ್ಟೆಯಲ್ಲಿ 50% ಹೆಚ್ಚಳ: ಮೊದಲ ದಿನವೇ ಹೂಡಿಕೆ ಹಣ ದುಪ್ಪಟ್ಟಾಗುವ ನಿರೀಕ್ಷೆ

    ಹೊಸ ಷೇರುಗಳಾಗಿ ಪರಿವರ್ತಿತವಾಗಲಿವೆ 13,50,00,000 ವಾರಂಟ್​: ಪೆನ್ನಿ ಸ್ಟಾಕ್​ಗೆ ಈಗ ಡಿಮ್ಯಾಂಡು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts