More

    ಐಪಿಒ ತೆರೆಯುವ ಮೊದಲೇ ಗ್ರೇ ಮಾರುಕಟ್ಟೆಯಲ್ಲಿ 50% ಹೆಚ್ಚಳ: ಮೊದಲ ದಿನವೇ ಹೂಡಿಕೆ ಹಣ ದುಪ್ಪಟ್ಟಾಗುವ ನಿರೀಕ್ಷೆ

    ಮುಂಬೈ: ಇತ್ತೀಚಿನ ದಿನಗಳಲ್ಲಿ ಷೇರು ಮಾರುಕಟ್ಟೆಗಳಲ್ಲಿ ಐಪಿಒ ದಾಂಗುಡಿ ಇಡುತ್ತಿವೆ. ಈಗ ಬಿಎಲ್​ಎಸ್​ ಇ-ಸರ್ವೀಸ್​ (BLS E-Services) ಕಂಪನಿಯ ಐಪಿಒಗೆ ಸಾಕಷ್ಟು ಬೇಡಿಕೆ ಕುದುರಿದೆ. ಬಿಎಲ್​ಎಸ್​ ಇ-ಸರ್ವೀಸ್​ ಐಪಿಒ ಬೆಲೆಯನ್ನು ಪ್ರತಿ ಷೇರಿಗೆ 129 ರಿಂದ 135 ರೂ.ಗಳಿಗೆ ನಿಗದಿಪಡಿಸಲಾಗಿದೆ. ಈ ಐಪಿಒ ಜನವರಿ 30 ರಂದು ತೆರೆಯುತ್ತಿದ್ದು, ಫೆ. 1ರವರೆಗೆ ಹೂಡಿಕೆದಾರರಿಗೆ ಮುಕ್ತವಾಗಿರುತ್ತದೆ. ಅಂದರೆ, ಈ ಐಪಿಒದಲ್ಲಿ ಷೇರುಗಳನ್ನು ಖರೀದಿಸಲು ಹೂಡಿಕೆದಾರರು ಜ. 30ರಿಂದ ಫೆ. 1ರವರೆಗೆ ಅರ್ಜಿ ಸಲ್ಲಿಸಬಹುದು. ಈ IPO ನ ಗಾತ್ರ 310.91 ಕೋಟಿ ರೂಪಾಯಿ. ಷೇರು ಹಂಚಿಕೆ ಫೆಬ್ರವರಿ 2ರಂದು ನಡೆಯಬಹುದು. ಷೇರು ಮಾರುಕಟ್ಟೆಯಲ್ಲಿ ಫೆಬ್ರವರಿ 6 ರಂದು ಪಟ್ಟಿಯಾಗಲಿದೆ.

    ಬೆಲೆ ಪಟ್ಟಿ ಏನು?:

    ಈ ಐಪಿಒನ ಬೆಲೆ ಪಟ್ಟಿಯನ್ನು ಪ್ರತಿ ಷೇರಿಗೆ 129 ರಿಂದ 135 ರೂ.ಗೆ ನಿಗದಿಪಡಿಸಲಾಗಿದೆ. ಒಬ್ಬ ಹೂಡಿಕೆದಾರರು ಕನಿಷ್ಠ 108 ಷೇರುಗಳ ಖರೀದಿಗೆ ಅರ್ಜಿ ಸಲ್ಲಿಸಬೇಕು. ಹೆಚ್ಚು ಷೇರು ಖರೀದಿಸಬಯಸುವವರು 108 ನಂತರದಲ್ಲಿ ಅನೇಕ ಪಟ್ಟು ಸಂಖ್ಯೆಯಲ್ಲಿ ಹೂಡಿಕೆ ಮಾಡಬೇಕು. ಅಂದರೆ, 216 ಇಲ್ಲವೇ 324 ಅಥವಾ 432 ಈ ರೀತಿ ಸಂಖ್ಯೆಯ ಷೇರುಗಳನ್ನು ಖರೀದಿಸಬಹುದು. ಹೂಡಿಕೆದಾರರು ಕನಿಷ್ಠ 14,580 ರೂ.ಗಳ ಬಾಜಿ ಕಟ್ಟಬೇಕಾಗುತ್ತದೆ. ಯಾವುದೇ ಚಿಲ್ಲರೆ ಹೂಡಿಕೆದಾರರು ಗರಿಷ್ಠ 13 ಲಾಟ್‌ಗಳಲ್ಲಿ ಷೇರುಗಳನ್ನು (ಅಂದರೆ 1404 ಷೇರುಗಳು) ಖರೀದಿಸಲು ಅರ್ಜಿ ಸಲ್ಲಿಸಬಹುದು. ಕಂಪನಿಯು ಐಪಿಒ ಮೂಲಕ 2.3 ಕೋಟಿ ಷೇರುಗಳನ್ನು ವಿತರಿಸಲಿದೆ.

    ಗ್ರೇ ಮಾರ್ಕೆಟ್‌ ರಿಪೋರ್ಟ್​:

    ಈ ಐಪಿಒದ GMP (ಗ್ರೇ ಮಾರ್ಕೆಟ್​ ಪ್ರೀಮಿಯಂ) ಬೂದು ಮಾರುಕಟ್ಟೆ ಪ್ರೀಮಿಯಂ 60 ರೂಪಾಯಿ ಅಧಿಕವಾಗಿದೆ. ಇನ್ವೆಸ್ಟರ್​ ಗೇನ್​ (Investorgain.com) ಪ್ರಕಾರ, BLS ಇ-ಸೇವೆಗಳ ಷೇರಿನ ಬೆಲೆಯು ಬೂದು ಮಾರುಕಟ್ಟೆಯಲ್ಲಿ 60 ರೂಪಾಯಿ ಪ್ರೀಮಿಯಂನಲ್ಲಿ ವಹಿವಾಟು ನಡೆಸುತ್ತಿದೆ ಎಂಬುದನ್ನು ಇದು ಸೂಚಿಸುತ್ತದೆ. ಐಪಿಒ ಬೆಲೆಗಿಂತ ಅಂದಾಜು ಶೇಕಡಾ 50ರಷ್ಟು ಹೆಚ್ಚಳ ಇದಾಗಿದೆ. ‘ಗ್ರೇ ಮಾರ್ಕೆಟ್ ಪ್ರೀಮಿಯಂ’ ಇಶ್ಯೂ ಬೆಲೆಗಿಂತ ಹೆಚ್ಚಿನ ಹಣವನ್ನು ಪಾವತಿಸಲು ಹೂಡಿಕೆದಾರರ ಸಿದ್ಧತೆಯನ್ನು ಸೂಚಿಸುತ್ತದೆ.

    ಲಿಸ್ಟಿಂಗ್ ಆಗುವವರೆಗೂ ಇದೇ ಸ್ಥಿತಿ ಇದ್ದರೆ ಷೇರು ಮಾರುಕಟ್ಟೆಯಲ್ಲಿ ಕಂಪನಿಯ ಷೇರು ಬೆಲೆ 277 ರೂಪಾಯಿಗೆ ಏರಬಹದು. ಅಂದರೆ ಐಪಿಒದ ಮೊದಲ ದಿನವೇ ಹೂಡಿಕೆದಾರರ ಹಣ ದ್ವಿಗುಣಗೊಳ್ಳಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts