More

    ತನುಜಾ ಚಿತ್ರ ವೀಕ್ಷಿಸಿದ ಸುತ್ತೂರು ಶ್ರೀ; ಮಠದ 4 ಸಾವಿರ ವಿದ್ಯಾರ್ಥಿಗಳೊಂದಿಗೆ ವೀಕ್ಷಣೆ

    ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಸುತ್ತೂರು ಮಠದಲ್ಲಿ ನಾಲ್ಕು ಸಾವಿರ ವಿದ್ಯಾರ್ಥಿಗಳ ಜತೆ ‘ತನುಜಾ’ ಚಿತ್ರ ವೀಕ್ಷಿಸಿದರು. ಜತೆಗೆ ಜೆಎಸ್​ಎಸ್ ಶಿಕ್ಷಣ ಸಂಸ್ಥೆಗಳ ಎಲ್ಲ ಶಾಲೆ, ಕಾಲೇಜುಗಳಲ್ಲಿ ‘ತನುಜಾ’ ಚಿತ್ರ ಪ್ರದರ್ಶನ ಮಾಡಲು ಚಾಲನೆ ನೀಡಿದರು.

    ಬಳಿಕ ಮಾತನಾಡಿದ ಸುತ್ತೂರು ಶ್ರೀಗಳು, ‘ಶ್ರದ್ಧೆ ಎಲ್ಲಿರುತ್ತದೆಯೋ ಅಲ್ಲಿ ಅವಕಾಶವಿರುತ್ತದೆ. ಒಬ್ಬ ವಿದ್ಯಾರ್ಥಿ ಮನಸ್ಸು ಮಾಡಿದರೆ ಹಾಗೂ ಶ್ರದ್ಧೆ, ನಿಷ್ಠೆಯಿದ್ದರೆ ಅವಕಾಶಗಳು ತಾನಾಗಿಯೇ ಒದಗಿ ಬರುತ್ತವೆ ಎನ್ನುವುದಕ್ಕೆ ‘ತನುಜಾ’ ಸಿನಿಮಾ ಒಂದು ನಿದರ್ಶನ. ಒಂದು ಆಡಳಿತ ವ್ಯವಸ್ಥೆ ಮನಸ್ಸು ಮಾಡಿದರೆ ಅಸಾಧ್ಯವಾದುದನ್ನು ಸಾಧ್ಯವಾಗಿಸುತ್ತದೆ ಎಂಬುದಕ್ಕೆ ಈ ತನುಜಾ ಘಟನೆ ಸಾಕ್ಷಿ. ಪ್ರದೀಪ್ ಈಶ್ವರ್ ಅವರು ಕೋಚಿಂಗ್ ಸೆಂಟರ್ ಮೂಲಕ ಮಕ್ಕಳ ಭವಿಷ್ಯ ರೂಪಿಸುತ್ತಿರುವುದು ಶ್ಲಾಘನೀಯ. ಪತ್ರಕರ್ತ ವಿಶ್ವೇಶ್ವರ ಭಟ್​ರವರು ಅಂದು ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪರವರ ಗಮನಕ್ಕೆ ತಂದು, ಡಾ. ಕೆ. ಸುಧಾಕರ್​ರವರ ಮುಖಾಂತರ ಆ ಹೆಣ್ಣುಮಗುವಿಗೆ ಪರೀಕ್ಷೆ ತೆಗೆದುಕೊಳ್ಳುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಈ ಎಲ್ಲ ಪಾತ್ರಗಳು ಕಷ್ಟಕರ ಸಂದರ್ಭದಲ್ಲಿ ಸ್ಪಂದಿಸಿದ ರೀತಿ ‘ತನುಜಾ’ ಸಿನಿಮಾದಲ್ಲಿ ಮಾದರಿಯಾಗಿ ರೂಪಿತವಾಗಿದೆ. ನಿರ್ದೇಶಕ ಹರೀಶ್ ಎಂ.ಡಿ ಹಳ್ಳಿ ನೈಜ ಘಟನೆಯನ್ನು ನೈಜವಾಗಿಯೇ ಸಿನಿಮಾ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ’ ಎಂದು ಸಿನಿಮಾವನ್ನು ಮೆಚ್ಚಿ ಚಿತ್ರತಂಡವನ್ನು ಸನ್ಮಾನಿಸಿ, ಆಶೀರ್ವದಿಸಿದರು.

    ಬೆಂಗಳೂರು ಚಿತ್ರೋತ್ಸವಕ್ಕೆ ಆಯ್ಕೆ

    ಇದೇ ತಿಂಗಳ 23ರಿಂದ 30ರವರೆಗೆ 14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ. ವಿಶೇಷ ಅಂದರೆ ‘ತನುಜಾ’ ಚಿತ್ರ ಸಹ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸ್ಪರ್ಧೆಯಲ್ಲಿದೆ. ಭಾರತೀಯ ಸಿನಿಮಾಗಳ ವಿಭಾಗದಲ್ಲಿ ‘ತನುಜಾ’ ಸಿನಿಮಾ ಸ್ಪರ್ಧೆಗೆ ಆಯ್ಕೆಯಾಗಿದ್ದು, ಚಿತ್ರದ ನಿರ್ದೇಶಕ ಹರೀಶ್ ಎಂ.ಡಿ. ಹಳ್ಳಿ ಹಾಗೂ ಚಿತ್ರತಂಡ ಸಂತಸ ವ್ಯಕ್ತಪಡಿಸಿದೆ.

    ಇಬ್ರಿಗೂ ಒಬ್ನೇ ಪತಿ, ಶಿಫ್ಟ್​ನಲ್ಲಿ ಸಂಸಾರ: ವಾರದಲ್ಲಿ 3 ದಿನ ಆ ಪತ್ನಿಗೆ, ಇನ್ನು 3 ದಿನ ಈ ಪತ್ನಿಗೆ; ಭಾನುವಾರ ಮಾತ್ರ ಗಂಡ ಫ್ರೀ!

    ಮಾ.27ರಿಂದ ಏ.1ರ ವರೆಗೆ 5 ಮತ್ತು 8ನೇ ತರಗತಿ ಮೌಲ್ಯಾಂಕನ ಪರೀಕ್ಷೆ; ಇಲ್ಲಿದೆ ವೇಳಾಪಟ್ಟಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts