More

    ಮಾ.27ರಿಂದ ಏ.1ರ ವರೆಗೆ 5 ಮತ್ತು 8ನೇ ತರಗತಿ ಮೌಲ್ಯಾಂಕನ ಪರೀಕ್ಷೆ; ಇಲ್ಲಿದೆ ವೇಳಾಪಟ್ಟಿ..

    ಬೆಂಗಳೂರು: ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ 5 ಮತ್ತು 8ನೇ ತರಗತಿ ಮೌಲ್ಯಾಂಕನ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ. ಮಾ.27ರಿಂದ ಏ.1ರ ವರೆಗೆ ನಡೆಯಲಿದೆ.

    5ನೇ ತರಗತಿ ಮಕ್ಕಳಿಗೆ ಮಾ.27ರಿಂದ 30ರವರೆಗೆ ಮತ್ತು 8ನೇ ತರಗತಿಗೆ ಮಾ.27ರಿಂದ ಏ.1ರ ವರೆಗೆ ನಡೆಯಲಿದೆ. ಮಾ.30ರಂದು ನಡೆಯಲಿರುವ ಗಣಿತ ವಿಷಯದ ಪರೀಕ್ಷೆ ಮಾತ್ರ ಬೆಳಗ್ಗೆ 10.30ರಿಂದ 12.30ರ ವರೆಗೆ ನಡೆಯಲಿದೆ. ಉಳಿದೆಲ್ಲ ಪರೀಕ್ಷೆಗಳು ಮಧ್ಯಾಹ್ನ 2.30ರಿಂದ 4.30ರ ವರೆಗೆ ನಡೆಯಲಿವೆ. ಎಲ್ಲ ಪರೀಕ್ಷೆಗಳನ್ನು 40 ಅಂಕಗಳಿಗೆ ನಡೆಸಲಾಗುತ್ತದೆ.

    ಇದನ್ನೂ ಓದಿ: ಪ್ರೇಮ ವಿವಾಹವಾಗಿ ಪತಿಯನ್ನು ಬಿಟ್ಟು ತವರಿಗೆ ಬಂದಿದ್ದವಳ ಪ್ರಾಣವೇ ಹೋಯ್ತು; ತಂದೆಯೇ ಕೊಂದಿದ್ದೇಕೆ?

    ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆಯಾ ಶಾಲೆಗಳನ್ನೇ ಮೌಲ್ಯಾಂಕನ ಕೇಂದ್ರಗಳಾಗಿ ಪರಿಗಣಿಸಿದೆ. ವಿದ್ಯಾರ್ಥಿಗಳ ಕಲಿಕಾ ಮಟ್ಟ, ಕಲಿಕಾ ನ್ಯೂನತೆಗಳು ಹಾಗೂ ಯಾವ ವಿಷಯದ ಕಲಿಕೆಯಲ್ಲಿ ಎಷ್ಟು ಹಿನ್ನಡೆಯುಂಟಾಗಿದೆ ಎಂಬುದನ್ನು ತಿಳಿಯುವುದಾಗಿದೆ. ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸುವುದಿಲ್ಲ. ಮೌಲ್ಯಾಂಕನ ಫಲಿತಾಂಶವನ್ನು ವಿದ್ಯಾರ್ಥಿಗಳಿಗೆ ಮಾತ್ರ ತಿಳಿಸಲಾಗುತ್ತಿದ್ದು, ಫಲಿತಾಂಶದ ಗೌಪ್ಯತೆ ಕಾಪಾಡಲಾಗುವುದು ಎಂದು ಸ್ಪಷ್ಟಪಡಿಸಿದೆ.

    ಇದನ್ನೂ ಓದಿ: ಕಲ್ಯಾಣಮಂಟಪಕ್ಕೂ ಕುಡಿದೇ ಬಂದ ವರ, ಮದುವೆಯೇ ಬೇಡ ಎಂದ ವಧು! 

    ಪ್ರಶ್ನೆಪತ್ರಿಕೆ ಸ್ವರೂಪ 

    40 ಅಂಕಗಳ ಲಿಖಿತ ಮೌಲ್ಯಾಂಕನ ನಡೆಸಲಾಗುತ್ತಿದ್ದು, 28 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ 1 ಅಂಕದ 20 ಬಹುಆಯ್ಕೆ ಪ್ರಶ್ನೆಗಳು (ಎಂಸಿಕ್ಯು), 2 ಅಂಕಗಳ 5, 3 ಅಂಕಗಳ 2 ಹಾಗೂ 4 ಅಂಕಗಳ 1 ವಿವರಣಾತ್ಮಕವಾಗಿ ಉತ್ತರಿಸುವ ಪ್ರಶ್ನೆಗಳಿರುತ್ತವೆ.

    ಇದನ್ನೂ ಓದಿ: ವಿಶ್ವಸಂಸ್ಥೆಯಲ್ಲೂ ‘ಕಾಂತಾರ’ ಹವಾ; ಭಾರತದ ಪ್ರತಿನಿಧಿಯಾಗಿ ಕನ್ನಡದಲ್ಲೇ ಮಾತನಾಡಿದ ರಿಷಬ್​ ಶೆಟ್ಟಿ

    10 ಅಂಕಗಳ ಮೌಲ್ಯಂಕನವನ್ನು ಶಾಲಾ ಹಂತದಲ್ಲಿಯೇ ನಿರ್ವಹಿಸಲು ಸೂಚಿಸಲಾಗಿದೆ. 40 ಅಂಕಗಳ ಲಿಖಿತ ಮೌಲ್ಯಂಕನ ಮತ್ತು 10 ಅಂಕಗಳ ಮೌಖಿಕ ಮೌಲ್ಯಾಂಕನದಲ್ಲಿ ವಿದ್ಯಾರ್ಥಿಗಳು ಗಳಿಸಿದ ಅಂಕಗಳನ್ನು 20 ಅಂಕಗಳಿಗೆ ಪರಿವರ್ತಿಸುವುದು.

    ವಿದ್ಯಾರ್ಥಿಗಳನ್ನು ಮೌಲ್ಯಾಂಕನಕ್ಕೆ ಸಿದ್ಧಗೊಳಿಸಲು ಮಾದರಿ ಪ್ರಶ್ನೋತ್ತರ ಪತ್ರಿಕೆಗಳನ್ನು ಮತ್ತು ಮೌಲ್ಯಂಕನಕ್ಕೆ ಒಳಪಡಿಸಿರುವ ಪಠ್ಯಪುಸ್ತಕದಲ್ಲಿನ ಘಟಕಗಳ ವಿವರಗಳನ್ನು ಮಂಡಳಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

    ವೇಳಾಪಟ್ಟಿ 

    ದಿನಾಂಕ 5ನೇ ತರಗತಿ 8ನೇ ತರಗತಿ
    ಮಾ.27 ಪ್ರಥಮ ಭಾಷೆ ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ, ತೆಲುಗು, ತಮಿಳು ಪ್ರಥಮ ಭಾಷೆ ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ, ತೆಲುಗು, ತಮಿಳು, ಸಂಸ್ಕೃತ, ಇಂಗ್ಲಿಷ್ (ಎನ್‌ಸಿಇಆರ್‌ಟಿ)
    ಮಾ.28 ದ್ವಿತೀಯ ಭಾಷೆ ಇಂಗ್ಲಿಷ್, ಕನ್ನಡ ದ್ವಿತೀಯ ಭಾಷೆ ಇಂಗ್ಲಿಷ್, ಕನ್ನಡ
    ಮಾ.29 ಪರಿಸರ ಅಧ್ಯಯನ ತೃತೀಯ ಭಾಷೆ ಹಿಂದಿ, ಹಿಂದಿ (ಎನ್‌ಸಿಇಆರ್‌ಟಿ), ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು
    ಮಾ.30 ಗಣಿತ ಗಣಿತ
    ಮಾ.31 – ವಿಜ್ಞಾನ
    ಏ.1 – ಸಮಾಜ ವಿಜ್ಞಾನ

    ಇಬ್ರಿಗೂ ಒಬ್ನೇ ಪತಿ, ಶಿಫ್ಟ್​ನಲ್ಲಿ ಸಂಸಾರ: ವಾರದಲ್ಲಿ 3 ದಿನ ಆ ಪತ್ನಿಗೆ, ಇನ್ನು 3 ದಿನ ಈ ಪತ್ನಿಗೆ; ಭಾನುವಾರ ಮಾತ್ರ ಗಂಡ ಫ್ರೀ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts