More

    ರಾಜ್ಯಸಭೆ ಚುನಾವಣೆ: ನಾಮಪತ್ರ ಸಲ್ಲಿಸಿದ್ರು ಬಿಹಾರದ ಮಾಜಿ ಡಿಸಿಎಂ

    ಪಟನಾ: ಬಿಹಾರದಲ್ಲಿ ನಿತೀಶ್ ಕುಮಾರ್​ ನೇತೃತ್ವದ ಸಚಿವ ಸಂಪುಟದಿಂದ ಹೊರಗೆ ಉಳಿದಿದ್ದ ಹಿರಿಯ ಬಿಜೆಪಿ ನಾಯಕ ಮಾಜಿ ಡಿಸಿಎಂ ಸುಶೀಲ್ ಕುಮಾರ್ ಮೋದಿ ಇಂದು ರಾಜ್ಯಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಪಕ್ಷದ ರಾಜ್ಯ ಅಧ್ಯಕ್ಷ ಸಂಜಯ್ ಜೈಸ್ವಾಲ್​, ಡಿಸಿಎಂ ತಾರ್​ಕಿಶೋರ್ ಪ್ರಸಾದ್ ಹಾಗೂ ಅಚ್ಚರಿ ಎಂಬಂತೆ ಸಿಎಂ ನಿತೀಶ್ ಕುಮಾರ್​, ಜೆಡಿಯು ನಾಯಕ ಶ್ರವಣ್ ಕುಮಾರ್​ ಜತೆಗಿದ್ದರು.

    ಸುಶೀಲ್ ಕುಮಾರ್ ಮೋದಿ ಅವರನ್ನು ಅಭಿನಂದಿಸುವ ಸಲುವಾಗಿ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಜತೆಗೆ ಆಗಮಿಸಿರುವೆ ಎಂದು ಸಿಎಂ ನಿತೀಶ್ ಕುಮಾರ್​ ಹೇಳಿದ್ರು. ಜೆಡಿಯು ನಾಯಕ ಶ್ರವಣ್ ಕುಮಾರ್ ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ್ದು, ಸುಶೀಲ್ ಮೋದಿ ಅವರ ವಿಜಯ ನಿಶ್ಚಿತವಾಗಿದೆ. ಬಹುಮತ ನಮ್ಮದಾಗಿರುವಾಗ ಮಹಾಗಟಬಂಧನದ ಅಭ್ಯರ್ಥಿ ಗೆಲ್ಲೋದಿಲ್ಲ. ಅವರು ಅಭ್ಯರ್ಥಿಯನ್ನು ಕಣಕ್ಕಿಳಿಸದ ಕಾರಣ ಸುಶೀಲ್ ಕುಮಾರ್ ಮೋದಿ ಅವಿರೋಧ ಆಯ್ಕೆ ಆಗುತ್ತಾರೆ ಎಂದು ಹೇಳಿದ್ರು.

    ಇದನ್ನೂ ಓದಿ: ಲವ್ ಜಿಹಾದಿಗಳ​ ನಂತರ ಇದೀಗ ವಿವಾಹಿತರಿಗೆ ಮತ್ತೊಂದು ಶಾಕ್​ ನೀಡಿದ ಯೋಗಿ ಸರ್ಕಾರ

    ಲೋಕ ಜನಶಕ್ತಿ ಪಾರ್ಟಿ ನೇತಾರ ರಾಮ ವಿಲಾಸ್ ಪಾಸ್ವಾನ್ ಅವರ ನಿಧನದಿಂದ ತೆರವಾಗಿದ್ದ ರಾಜ್ಯಸಭಾ ಸ್ಥಾನ ಇದಾಗಿದೆ. ಪಾಸ್ವಾನ್ ಅವರು ಕೇಂದ್ರ ಸಚಿವರಾಗಿದ್ದರು. ಸುಶೀಲ್ ಕುಮಾರ್ ಮೋದಿ ಕೂಡ ಕೇಂದ್ರ ಸಚಿವ ಸಂಪುಟ ಸೇರಲಿದ್ದಾರೆಯೇ ಎಂಬ ಕುತೂಹಲ, ನಿರೀಕ್ಷೆ ವ್ಯಕ್ತವಾಗಿದೆ. (ಏಜೆನ್ಸೀಸ್)

    ಲ್ಯಾಬ್​​ನಲ್ಲಿ ಅಭಿವೃದ್ಧಿ ಪಡಿಸಿದ ಮಾಂಸ ಸೇವನೆಗೆ ಅನುಮತಿ ನೀಡಿತು ಸಿಂಗಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts