More

    ಬಿಜೆಪಿ ವಿರುದ್ಧ ಶಾಸಕರ ಮಾರಾಟ ಮತ್ತು ಖರೀದಿಯ ಆರೋಪ

    ಜೈಪುರ: ರಾಜಸ್ಥಾನದಲ್ಲಿ ಜೂ.19ರಂದು ರಾಜಸಭೆ ಚುನಾವಣೆ ನಿಗದಿಯಾಗಿದ್ದು, ಬಿಜೆಪಿ ಶಾಸಕರ ಮಾರಾಟ ಮತ್ತು ಖರೀದಿ ಪ್ರಕ್ರಿಯೆಯಲ್ಲಿ ತೊಡಗಿರುವುದಾಗಿ ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್​ ಆರೋಪಿಸಿದ್ದಾರೆ.

    ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಶಾಸಕರ ಮಾರಾಟ ಮತ್ತು ಖರೀದಿ ಪ್ರಕ್ರಿಯೆಗೆ ಅನುಕೂಲವಾಗಲೆಂದೇ ಬಿಜೆಪಿ ರಾಜ್ಯಸಭೆ ಚುನಾವಣೆಗಳನ್ನು ಬೇಕೆಂದೇ ಎರಡು ತಿಂಗಳು ವಿಳಂಬ ಮಾಡಿತ್ತು ಎಂದು ದೂರಿದರು.

    ರಾಜ್ಯಸಭೆ ಚುನಾವಣೆಗಳು ಕೊನೆಗೂ ನಿಗದಿಯಾಗಿದೆ. ಈ ಚುನಾವಣೆಗಳು ಎರಡು ತಿಂಗಳ ಹಿಂದೆಯೇ ಆಗಬೇಕಿತ್ತು. ಆದರೆ, ಶಾಸಕರ ಖರೀದಿ ಪ್ರಕ್ರಿಯೆ ಹಿನ್ನೆಲೆಯಲ್ಲಿ ಬಿಜೆಪಿ ಅದನ್ನು ಬೇಕೆಂದೇ ವಿಳಂಬ ಮಾಡಿತ್ತು ಎಂದು ಹೇಳಿದರು.

    ಬಿಜೆಪಿಗೆ ಕಾದಿದೆ ಭಾರಿ ಆಘಾತ: ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಆಘಾತ ಕಾದಿದೆ. ಈ ಆಘಾತ ನೀಡಲು ಕಾಂಗ್ರೆಸ್​ ಸಕಲ ರೀತಿಯಲ್ಲೂ ಸಜ್ಜಾಗಿದೆ ಎಂದು ಅಶೋಕ್​ ಗೆಹ್ಲೋಟ್​ ತಿಳಿಸಿದರು.

    ಇದನ್ನೂ ಓದಿ: ಖಾಲಿ ಕ್ರೀಡಾಂಗಣಗಳಲ್ಲಿ ನಡೆಯಲಿದೆ ಐಪಿಎಲ್​; ರಾಜ್ಯ ಕ್ರಿಕೆಟ್​ ಮಂಡಳಿಗಳಿಗೆ ಗಂಗೂಲಿ ಪತ್ರ

    ಕಾಂಗ್ರೆಸ್​ನ ಎಲ್ಲ ಶಾಸಕರು ಒಗ್ಗಟ್ಟಾಗಿದ್ದಾರೆ. ಯಾವುದೇ ಕಾರಣಕ್ಕೂ ಮಾರಾಟವಾಗದಿರಲು ನಿರ್ಧರಿಸಿದ್ದು, ಚುನಾವಣೆಯಲ್ಲಿ ಪಕ್ಷದ ವಿಪ್​ ಅನ್ನು ಆನೂಚಾನವಾಗಿ ಪಾಲಿಸಲಿದ್ದಾರೆ ಎಂದು ಹೇಳಿದರು.

    ಕುದುರೆ ವ್ಯಾಪಾರ ಎಷ್ಟು ಕಾಲ ನಡೆಯಲು ಸಾಧ್ಯ? ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್​ ಶಾಸಕರು ಬಿಜೆಪಿಗೆ ಆಘಾತ ನೀಡುವುದು ಶತಃಸಿದ್ಧ. ನಾವೆಲ್ಲರೂ ಒಂದಾಗಿದ್ದೇವೆ. ಇಂದಿನ ಸಭೆಯಲ್ಲಿ ಇದೇ ಮನೋಭಾವ ವ್ಯಕ್ತವಾಗಿದೆ. ನಾಳೆಯೂ ಸಭೆ ಸೇರಲಿದ್ದೇವೆ ಎಂದು ತಿಳಿಸಿದರು.

    3 ಶಾಸಕರು ಗುಜರಾತ್​ಗೆ: ಶಾಸಕರು ಬಿಜೆಪಿಗೆ ಮಾರಾಟವಾಗುವ ಭೀತಿಯಲ್ಲಿ ಗುಜರಾತ್​ ಕಾಂಗ್ರೆಸ್​ ತನ್ನ 22 ಶಾಸಕರನ್ನು ರಾಜಸ್ಥಾನದ ಮೌಂಟ್​ ಅಬುನಲ್ಲಿರುವ ರೆಸಾರ್ಟ್​ನಲ್ಲಿ ಇರಿಸಿತ್ತು. ಇವರಲ್ಲಿ ಪ್ರಾರ್ಥನೆ ಸಲ್ಲಿಸಿಬರುವುದಾಗಿ ಹೇಳಿ ರೆಸಾರ್ಟ್​ನಿಂದ ಹೊರಬಂದಿದ್ದ ಮೂವರು ಶಾಸಕರು ಗುಜರಾತ್​ಗೆ ಮರಳಿದ್ದಾರೆ. ಹಣದ ಆಮಿಷ ಒಡ್ಡಿ ಬಿಜೆಪಿ ಇವರನ್ನು ತನ್ನೆಡೆಗೆ ಸೆಳೆದುಕೊಂಡಿದೆ ಎಂದು ಕಾಂಗ್ರೆಸ್​ ಆರೋಪಿಸಿದೆ.

    ಪಾಕ್​ನ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಒಬ್ಬ ಯೋಧ ಹುತಾತ್ಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts