More

    ಸುಶಾಂತ್​ ಸೇರಿ ಪ್ರತಿಭಾನ್ವಿತರನ್ನು ತುಳಿಯಲಾಗುತ್ತಿದೆ; ಬಾಲಿವುಡ್​ನಲ್ಲಿದೆ ಅಂಥದ್ದೊಂದು ಮಾಫಿಯಾ!?

    ಬಾಲಿವುಡ್​ನಲ್ಲಿ ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಬೇರೆ ಬೇರೆ ರೀತಿಯ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈಗಾಗಲೇ ಪೊಲೀಸ್​ ವರದಿ ಪ್ರಕಾರ ಆತ್ಮಹತ್ಯೆ ಎಂದು ಸಾಬೀತಾದರೂ, ಆ ಆತ್ಮಹತ್ಯೆಗೆ ಕಾರಣವಾಗಿದ್ದೇನು ಎಂಬುದಕ್ಕೆ ಪೊಲೀಸ್​ ಇಲಾಖೆ ತನಿಖೆ ನಡೆಸುತ್ತಿದೆ. ಮತ್ತೆ ಕೆಲವರು ಬಾಲಿವುಡ್​ನಲ್ಲಿನ ವ್ಯವಸ್ಥೆಯೇ ಯುವ ಪ್ರತಿಭೆಗಳಿಗೆ ಮಗ್ಗುಲು ಮುಳ್ಳಾಗಿದೆ ಎಂದೂ ಆರೋಪಿಸುತ್ತಿದ್ದಾರೆ.

    ಇದನ್ನೂ ಓದಿ: ಬುಲ್‌ಬುಲ್ ಸಿನಿಮಾ ವಿಮರ್ಶೆ ಬರೆದ ವಿರಾಟ್ ಕೊಹ್ಲಿ!

    ‘ಸುಶಾಂತ್​ ಆತ್ಮಹತ್ಯೆಗೂ ಮುನ್ನ ಪಾರ್ಟಿ ಮಾಡಿದ್ದ. ಅಂಥ ವ್ಯಕ್ತಿ ಒಮ್ಮಿಂದೊಮ್ಮೆ ಆತ್ಮಹತ್ಯೆ ಅನ್ನೋ ನಿರ್ಧಾರ ಏತಕ್ಕೆ ಮಾಡುತ್ತಾನೆ’ ಎಂದು ಬಾಲಿವುಡ್​ನ ಹಿರಿಯ ನಟ ಶೇಖರ್​ ಸುಮನ್​ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ‘ಸುಶಾಂತ್​ ಆತ್ಮಹತ್ಯೆ ಹಿಂದೆ, ಬಾಲಿವುಡ್​ನ ಬಹುದೊಡ್ಡ ಮಾಫಿಯಾ ಕೈವಾಡವಿದೆ. ಆತನ ಸಾವಿಗೆ ಕೆಲವೊಂದಿಷ್ಟು ಮಂದಿ ಫೇಕ್​ ಕಣ್ಣೀರು ಸುರಿಸುತ್ತಿದ್ದಾರೆ. ಆ ಒಂದು ಸಮೂಹ, ಪ್ರತಿಭಾನ್ವಿತ ಯುವ ಕಲಾವಿದರನ್ನು ತುಳಿಯುವ ಕೆಲಸ ಮಾಡುತ್ತಿದೆ’ ಎಂದಿದ್ದಾರೆ.

    ಇದನ್ನೂ ಓದಿ: ಸಂತ್ರಸ್ತರಿಗಾಗಿ ಮಿಡಿದ ಈ ನಟರಿಗೆ ‘ಭಾರತ ರತ್ನ’ ಸಿಗಲಿ: ಅಭಿಯಾನ ಶುರು

    ಇನ್ನು ಈಗಾಗಲೇ ಆತ್ಮಹತ್ಯೆ ಎಂದು ವರದಿ ಬಂದರೂ, ಆ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವ ಶೇಖರ್​, ‘ಸುಶಾಂತ್​ ಸಿಂಗ್​ ನೇಣಿಗೆ ಬಳಸಿದ ಬಟ್ಟೆ, ಕುತ್ತಿಗೆ ಮೇಲಿನ ಮಾರ್ಕ್​ ಬೇರೆ ಏನೋ ನಡೆದಿದೆ ಎಂದು ತೋರಿಸುತ್ತದೆ. ನಾನು ಆ ವಿಚಾರದಲ್ಲಿ ಪರಿಣಿತನಲ್ಲದಿದ್ದರೂ, ಈ ಪ್ರಕರಣವನ್ನು ಸಿಬಿಐನವರು ವಹಿಸಿಕೊಳ್ಳಬೇಕೆಂದು ನಾನು ಕೋರಿಕೊಳ್ಳುತ್ತೇನೆ’ ಎಂದು ಸಹನಟನ ಬಗ್ಗೆ ಮೌನಮುರಿದಿದ್ದಾರೆ ಶೇಖರ್​.

    ಇದನ್ನೂ ಓದಿ: ನಟಿ ಮಹಿರಾ ಜತೆ ಶೋಯಿಬ್ ಮಲಿಕ್ ಫ್ಲರ್ಟ್, ಸಾನಿಯಾ ಗರಂ!

    ಇನ್ನು ಸುಶಾಂತ್​ ಕುಟುಂಬದ ಆಪ್ತರೂ ಸಹ ಸಾವಿನ ಬಗ್ಗೆ ಬೇರೆ ಬೇರೆ ಮಾಹಿತಿ ನೀಡುತ್ತಿದ್ದಾರೆ. ‘ಸುಶಾಂತ್​ ಸಿನಿಮಾ ಕರಿಯರ್​ ಹಾಳು ಮಾಡಬೇಕೆಂಬ ಉದ್ದೇಶದಿಂದ ಅವರಿಗೆ ಪರೋಕ್ಷವಾಗಿ ಕಿರುಕುಳ ನೀಡಲಾಗುತ್ತಿತ್ತು. ಅವರ ಇಮೇಜ್​ಗೆ ದಕ್ಕೆ ತರುವ ಕೆಲಸ ಮಾಡಲಾಗುತ್ತಿತ್ತು. ಅಷ್ಟೇ ಅಲ್ಲ ಅವರ ಬೆಳವಣಿಗೆ ಸಹಿಸಲಾಗದೇ, ವೃತ್ತಿಜೀವನ ಹಾಳು ಮಾಡಲು ಸಂಚು ರೂಪಿಸಲಾಗಿತ್ತು ಎಂದು ಸುಶಾಂತ್​ ಆಪ್ತರ ಮಾತುಗಳನ್ನು ತನಿಖಾ ತಂಡ ಮಾಹಿತಿ ಕಲೆಹಾಕಿದೆ. (ಏಜೆನ್ಸೀಸ್​)

    ಸುಶಾಂತ್​ ಕರಿಯರ್​ಗೆ ಮಸಿ ಬಳಿಯುವ ಹುನ್ನಾರ!; ತನಿಖೆಯಲ್ಲಿ ಬಯಲಾಯ್ತು ಅಸಲಿ ಕಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts