More

    ಕೊನೆಗೂ ಈಡೇರಲಿಲ್ಲ ಸುಶಾಂತ್​ ಸಿಂಗ್​ ರಾಜಪೂತ್​ ಅವರ 50 ಬಯಕೆಗಳು!

    ಮುಂಬೈ: ಜೀವನದಲ್ಲಿ ಅದನ್ನು ಮಾಡಬೇಕು, ಇದನ್ನು ಮಾಡಬೇಕು ಎಂದು ಎಲ್ಲರೂ ಆಗಾಗ ಅಂದುಕೊಳ್ಳುತ್ತಾರೆ. ಕೆಲವರು ತಾವು ಅಂದುಕೊಂಡಿದ್ದೆಲ್ಲವನ್ನೂ ಬರೆದಿಟ್ಟುಕೊಂಡು ಒಂದೊಂದಾಗಿ ಎಲ್ಲವನ್ನೂ ಸಾಧಿಸುತ್ತಾ ಪ್ರವರ್ಧಮಾನಕ್ಕೆ ಬರುತ್ತಾರೆ.

    ಭಾನುವಾರ ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಾಜಪೂತ್​ ಕೂಡ ಎಲ್ಲರಂತೆ ಹಲವು ಕನಸುಗಳನ್ನು ಹೊಂದಿದ್ದರು. ತಮ್ಮೆಲ್ಲ ಕನಸುಗಳನ್ನು ಪಟ್ಟಿ ಮಾಡಿ ಟ್ವೀಟ್​ ಮಾಡಿದ್ದರು. ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದಲ್ಲಿ ಬಾಹ್ಯಾಕಾಶಯಾನದ ತರಬೇತಿ ಪಡೆಯುವುದು, 100 ಮಕ್ಕಳನ್ನು ನಾಸಾದ ಕಾರ್ಯಾಗಾರಕ್ಕೆ ಕಳುಹಿಸುವುದು, 100 ತಾಯಂದಿರ ಬಯಕೆಗಳನ್ನು ಈಡೇರಿಸುವುದು, ಚಂದ್ರನ ಒಂದು ಭಾಗವನ್ನು ತಮ್ಮದಾಗಿಸಿಕೊಳ್ಳುವುದು, ಸ್ಮಶಾನದಲ್ಲಿ ಒಂದು ರಾತ್ರಿ ಕಳೆಯುವುದು, ಐಷಾರಾಮಿ ಲ್ಯಾಂಬೋರ್​ಘಿನಿ ಕಾರನ್ನು ಖರೀದಿಸುವುದು ಸೇರಿ ಒಟ್ಟು 50ಕ್ಕೂ ಹೆಚ್ಚು ಬಯಕೆಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.

    ಇದನ್ನೂ ಓದಿ: ಸುಶಾಂತ್​ ಸಿಂಗ್​ ಆತ್ಮಹತ್ಯೆಗೆ ಹಣಕಾಸು ವ್ಯವಹಾರ ಅಥವಾ ವೈಯಕ್ತಿಕ ಕಾರಣದ ಕುರಿತು ತನಿಖೆ

    ಎಲ್ಲಕ್ಕಿಂತ ಮುಖ್ಯವಾಗಿ ಇಂಜಿನಿಯರಿಂಗ್​ ಪದವಿ ವ್ಯಾಸಂಗವನ್ನು ಬಿಟ್ಟು ನಟನಾಗಲು ಮುಂದಾಗಿದ್ದ ಅವರು ತಾವು ಓದುತ್ತಿದ್ದ ದೆಹಲಿಯ ಇಂಜಿನಿಯರಿಂಗ್​ ಕಾಲೇಜಿನ ವಿದ್ಯಾರ್ಥಿನಿಲಯದಲ್ಲಿ ತಾವು ಇರುತ್ತಿದ್ದ ಬಿಎಂಎಚ್​-131 ಕೊಠಡಿಯಲ್ಲಿ ಒಂದು ಇಡೀ ದಿನ ಮತ್ತು ರಾತ್ರಿ ಕಳೆಯುವುದು, ಯಾವುದೇ ಪರೀಕ್ಷೆಗೂ ಹಾಜರಾಗದೆ ಪದವಿ ಪ್ರಮಾಣಪತ್ರ ಪಡೆದುಕೊಳ್ಳುವ ಬಯಕೆಯಗಳನ್ನೂ ಹೊಂದಿದ್ದರು.
    ಸಮುದ್ರದಲ್ಲಿ ಮುಳುಗಿರುವ ಪುರಾತನ ದ್ವಾರಕ ನಗರದ ಅಧ್ಯಯನಕ್ಕಾಗಿ ಡೈವಿಂಗ್​ ಮಾಡುವುದು, ವೇದಗಳನ್ನು ಸ್ವತಃ ಓದಿ, ಅರ್ಥ ಮಾಡಿಕೊಳ್ಳುವುದು, ಒಂದು ಶತಕೋಟಿ ಜನರನ್ನು ಸಬಲೀಕರಣಗೊಳಿಸಲು ಸಮರ್ಪಕವಾದ ಯೋಜನೆ ರೂಪಿಸಿ ಅನುಷ್ಠಾನಗೊಳಿಸುವ ಕನಸೂ ಅವರದ್ದಾಗಿತ್ತು.

    ಇದನ್ನೂ ಓದಿ: ಅಭಿಮಾನಿಯ ಕೋರಿಕೆಗೆ ಸ್ಪಂದಿಸಿ 1 ಕೋಟಿ ರೂಪಾಯಿ ದೇಣಿಗೆ ನೀಡಿದ್ದ ಸುಶಾಂತ್​

    ಆದರೆ ಇಷ್ಟೆಲ್ಲ ಕನಸುಗಳನ್ನು ನನಸು ಮಾಡಿಕೊಳ್ಳುವ ಮುನ್ನವೇ ಮಹೇಂದ್ರ ಸಿಂಗ್​ ಧೋನಿಯವರ ಜೀವನಾಧಾರಿತ ಚಿತ್ರದ ನಟ ತಮ್ಮ 34ನೇ ವಯಸ್ಸಿನಲ್ಲೇ ಇಹಲೋಕದಿಂದ ನಿವೃತ್ತಿ ಹೊಂದಿದ್ದಾರೆ.

    ಅಭಿಮಾನಿಗಳು ಅವರ ಈ ಎಲ್ಲ ಕನಸುಗಳನ್ನು ಟ್ವಿಟರ್​ನಲ್ಲಿ ಹಂಚಿಕೊಂಡು, ಇಷ್ಟೊಂದು ಕನಸುಗಳನ್ನು ಈಡೇರಿಸಿಕೊಳ್ಳುವ ಮುನ್ನವೇ ಬಾರದ ಲೋಕಕ್ಕೆ ಹೋಗಿದ್ದಕ್ಕಾಗಿ ದುಃಖ ಮತ್ತು ಬೇಸರವನ್ನು ವ್ಯಕ್ತಪಡಿಸಿದ್ದಾರೆ.

    ಭಾರತ-ನೇಪಾಳ ಗಡಿಯಲ್ಲಿ ಗಡಿ ಗುರುತಿಸುವ ಪಿಲ್ಲರ್​ಗಳು ಮಾಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts