More

    ಸಾವಿಗೂ ಮುನ್ನ ಕೊನೆ 2 ಗಂಟೆಯವರೆಗೆ ಸುಶಾಂತ್​ ಮಾಡಿದ್ದೇನು?: ಪೊಲೀಸ್​ ಆಯುಕ್ತರ ಕುತೂಹಲಕಾರಿ ಹೇಳಿಕೆ!

    ಮುಂಬೈ: ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸ್​ ಆಯುಕ್ತ ಸಂಜಯ್​ಬಾರ್ವೆ ಅವರು ಅನೇಕ ಸಂಗತಿಗಳನ್ನು ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಹಂಚಿಕೊಂಡಿದ್ದು, ಬಿಹಾರ ಪೊಲೀಸ್​ ಹಾಗೂ ಮುಂಬೈ ಪೊಲೀಸರ ನಡುವಿನ ಜಿದ್ದಾಜಿದ್ದಿ ವಿವಾದಕ್ಕೂ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

    ಬಾರ್ವೆ ಮಾತನಾಡಿ, ಮಾಜಿ ಮ್ಯಾನೇಜರ್​ ದಿಶಾ ಸಾಲಿಯಾನ್​ ಆತ್ಮಹತ್ಯೆಯಲ್ಲಿ ತಮ್ಮ ಹೆಸರು ಕೇಳಿಬಂದಿದ್ದರಿಂದ ಸುಶಾಂತ್​ ತುಂಬಾ ವಿಚಲಿತರಾಗಿದ್ದರು. ಸುಶಾಂತ್​ ಸಾವಿಗೂ 5 ದಿನಗಳ ಮುಂಚೆ ದಿಶಾ ಆತ್ಮಹತ್ಯೆಗೆ ಶರಣಾಗಿದ್ದರು. ಅದೊಂದು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಲಾಗಿತ್ತು. ತನ್ನ ಬಗ್ಗೆ ಏನು ಬರೆದಿದ್ದಾರೆ ಎಂದು ತಿಳಿದುಕೊಳ್ಳಲು ಸುಶಾಂತ್​ ಗೂಗಲ್​ನಲ್ಲಿ ಸಾಕಷ್ಟು ಹುಡುಕಾಟ ನಡೆಸಿದ್ದಾರೆ. ಅವರು ಸ್ಕಿಜೋಫ್ರೇನಿಯಾ ಮತ್ತು ಬೈಪೋಲಾರ್ ಡಿಸಾರ್ಡರ್ ಮನೋವ್ಯಾಧಿ ಕುರಿತು ಗೂಗಲ್​ನಲ್ಲಿ ಹುಡುಕಾಟ ನಡೆಸಿದ್ದಾರೆಂದು ತಿಳಿಸಿದ್ದಾರೆ.

    ಇದನ್ನೂ ಓದಿ: ಇದೇನು ಗೂಂಡಾ ರಾಜ್ಯನಾ? ಟೀಮ್​ ಕಂಗನಾ ಪ್ರಶ್ನೆ

    ಅಂದು ರಾತ್ರಿ ಸಾವಿಗೂ ಮುನ್ನಾ ಎರಡು ಗಂಟೆಗಳ ಕಾಲ ಸುಶಾಂತ್​ ಗೂಗಲ್​ನಲ್ಲಿ ತಮ್ಮ ಹೆಸರನ್ನು ಹುಡುಕಾಡಿದ್ದಾರೆ. ಅಲ್ಲದೆ, ನೋವಿಲ್ಲದೇ ಸಾಯುವುದು ಹೇಗೆ ಎಂತಲೂ ಸರ್ಚ್​ ಮಾಡಿದ್ದಾರೆಂದು ಬಾರ್ವೆ ಹೇಳಿದರು.

    ದಿಶಾ ಸಾಯುವ ದಿನದ ರಾತ್ರಿ ಆಕೆಯ ಗಂಡನ ಮನೆಯಲ್ಲಿ ಪಾರ್ಟಿ ಆಯೋಜನೆ ಮಾಡಲಾಗಿತ್ತು. ದಿಶಾ ಮುಂಜಾನೆ 3 ಗಂಟೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಗಂಡ ಸೇರಿ ಪಾರ್ಟಿಯಲ್ಲಿ ಒಟ್ಟು ಐದು ಮಂದಿ ಇದ್ದರು. ಆದರೆ, ಆ ನಾಲ್ವರು ರಾಜಕೀಯ ವ್ಯಕ್ತಿಗಳಲ್ಲ ಎಂದು ಹರಿದಾಡುತ್ತಿರುವ ವದಂತಿಗಳಿಗೆ ಪೊಲೀಸ್​ ಆಯುಕ್ತರು ತೆರೆ ಎಳೆದರು.

    ಈ ಪ್ರಕರಣದ ತನಿಖೆ ಮಾಡಲು ಇದು ಬಿಹಾರ ಪೊಲೀಸರ ವ್ಯಾಪ್ತಿಯಲ್ಲಿಲ್ಲ. ಈ ಬಗ್ಗೆ ನಾವು ಕಾನೂನು ಅಭಿಪ್ರಾಯವನ್ನು ಎದುರು ನೋಡುತ್ತಿದ್ದೇವೆ. ಪ್ರಕರಣದಲ್ಲಿ ಯಾರೊಬ್ಬರಿಗೂ ನಾವು ಕ್ಲಿನ್​ಚಿಟ್​ ನೀಡುವುದಿಲ್ಲ. ಆದರೆ, ದೂರುದಾರ ನಮ್ಮ ಬಳಿಯೇ ಬಂದಿಲ್ಲ ಎಂದು ಸುಶಾಂತ್​ ತಂದೆಯನ್ನು ಉದ್ದೇಶಿಸಿ ಬಾರ್ವೆ ಮಾತನಾಡಿದರು. ಇದೇ ವೇಳೆ ಬಿಹಾರ ಐಪಿಎಸ್​ ಅಧಿಕಾರಿ ವಿನಯ್​ ತಿವಾರಿ ಅವರನ್ನು ಬಲವಂತವಾಗಿ ಕ್ವಾರಂಟೈನ್​ ಮಾಡಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಯಾವುದೇ ಅಧಿಕಾರಿಯನ್ನು ಕ್ವಾರಂಟೈನ್​ ಮಾಡಿರುವುದರಲ್ಲಿ ನಮ್ಮ ಪಾತ್ರವೇನಿಲ್ಲ. ಇದು ಬೃಹನ್​ ಮುಂಬೈ ಮುನ್ಶಿಪಲ್​ ಕಾರ್ಪೋರೇಷನ್ (ಬಿಎಂಸಿ) ​ಗೆ ಸೇರಿದ್ದು ಎಂದು ಸ್ಪಷ್ಟನೆ ನೀಡಿದರು.

    ಇದನ್ನೂ ಓದಿ: ಕರೊನಾ ನೆಗಡಿಗಿಂತಲೂ ಡಮ್ಮಿನಾ?: ಆಸ್ಪತ್ರೆಯಲ್ಲೇ ಸಾವಿನ ಸಂಖ್ಯೆ ಹೆಚ್ಚೆಂದು ಡಾ. ಬಿಸ್ವರೂಪ್​ ಹೇಳಿದ್ದೇಕೆ?

    ಇನ್ನು ಬಿಹಾರದ ಪಟನಾದಲ್ಲಿ ಸುಶಾಂತ್​ ಕುಟುಂಬ ಎಫ್​ಐಆರ್​ ದಾಖಲಿಸಿರುವ ಬಗ್ಗೆ ಮಾತನಾಡಿದ ಪೊಲೀಸ್​ ಆಯುಕ್ತರು, ಜೂನ್​ 16ರಂದು ಸುಶಾಂತ್​ ಕುಟುಂಬ ನಮಗೆ ನೀಡಿರುವ ಹೇಳಿಕೆಯಲ್ಲಿ ಯಾರ ಮೇಲೆಯೂ ಸಂಶಯವಿಲ್ಲ ಎಂದಿದ್ದಾರೆ. ಅವರ ಹಸ್ತಾಕ್ಷರವೂ ಇದೆ ಎಂದು ತಿಳಿಸಿದರು.

    ರಿಯಾ ಚಕ್ರವರ್ತಿ ವಿರುದ್ಧ ಕೇಳಿಬಂದಿರುವ ಆರೋಪಕ್ಕೆ ಪ್ರತಿಕ್ರಿಯಿಸಿ, ಸುಶಾಂತ್​ ಸಾಯುವ ಆರು ದಿನಗಳಿಗೂ ಮುಂಚೆ ಜೂನ್​ 8ರಂದು ರಿಯಾ ಸುಶಾಂತ್​ ಮನೆ ಬಿಟ್ಟು ಹೋಗಿದ್ದರು. ಏಕೆಂದರೆ ಆಕೆಯು ಸಹ ಖಿನ್ನಳಾಗಿದ್ದಳು. ಅವಳ ಮನಸ್ಥಿತಿ ಸರಿಯಿರಲಿಲ್ಲ. ರಿಯಾ ನಂತರ ಸುಶಾಂತ್​ ಮನೆಗೆ ಬಂದಿದ್ದ ಆತನ ಸಹೋದರಿ ಜೂನ್​ 13ರಂದು ಮನೆ ಬಿಟ್ಟಿದ್ದಳು. ಏಕೆಂದರೆ ಅವರ ಮಗಳಿಗೆ ಪರೀಕ್ಷೆ ಇರುವುದರಿಂದ ಮನೆ ಬಿಟ್ಟಿದ್ದರು. ಹೀಗಂತೆ ಅವರು ಹೇಳಿಕೆ ನೀಡಿದ್ದಾರೆ ಎಂದು ಬಾರ್ವೆ ತಿಳಿಸಿದರು.

    ರಿಯಾ ಹಾಗೂ ಸುಶಾಂತ್​ ನಡುವಿನ ಸಂಬಂಧದ ಬಗ್ಗೆ ಪರಿಶೀಲಿಸಲಾಗುತ್ತಿದೆ. ರಿಯಾ, ಸುಶಾಂತ್​ ಕುಟುಂಬದೊಂದಿಗೆ ಮನಸ್ತಾಪವನ್ನು ಹೊಂದಿದ್ದರು. ಎರಡು ಬಾರಿ ರಿಯಾ ಹೇಳಿಕೆ ದಾಖಲಿಸಿಕೊಂಡಿದ್ದೇವೆ. ಇಬ್ಬರ ನಡುವಿನ ಸಂಬಂಧ, ಮಾನಸಿಕ ಸ್ಥಿತಿ ಸೇರಿದಂತೆ ಎಲ್ಲದರ ಬಗ್ಗೆ ಪ್ರಶ್ನಿಸಿದ್ದೇವೆ. ಇದಕ್ಕೆ ರಿಯಾ ನೀಡಿರುವ ಹೇಳಿಕೆಗಳನ್ನು ಪರಿಶೀಲಿಸುತ್ತಿದ್ದೇವೆ. ಸುಶಾಂತ್​ ಕುಟುಂಬದ ಜತೆ ಮಾತನಾಡಲು ಪ್ರಯತ್ನಿಸುತ್ತಿದ್ದೇವೆ. ಆದರೆ, ಅವರು ನಮಗೆ ಲಭ್ಯವಾಗುತ್ತಿಲ್ಲ ಎಂದಿದ್ದಾರೆ. (ಏಜೆನ್ಸೀಸ್)

    ಇದನ್ನೂ ಓದಿ: VIDEO| ಆಗಸದಲ್ಲೇ ಇಂಧನ ತುಂಬುವ ವಿಡಿಯೋ ರಫೇಲ್​ಗೆ ಸಂಬಂಧಿಸಿದ್ದಲ್ಲ, ಸತ್ಯಾಂಶವೇ ಬೇರೆ!

    ಸುಶಾಂತ್​ ಪ್ರಕರಣದ ತನಿಖೆಗೆ ಆಗಮಿಸಿದ ಬಿಹಾರದ ಐಪಿಎಸ್​ ಅಧಿಕಾರಿಗೆ ಶಾಕ್ ಕೊಟ್ಟ ಮುಂಬೈ ಅಧಿಕಾರಿಗಳು!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts