More

    ಕರೊನಾ ನೆಗಡಿಗಿಂತಲೂ ಡಮ್ಮಿನಾ?: ಆಸ್ಪತ್ರೆಯಲ್ಲೇ ಸಾವಿನ ಸಂಖ್ಯೆ ಹೆಚ್ಚೆಂದು ಡಾ. ಬಿಸ್ವರೂಪ್​ ಹೇಳಿದ್ದೇಕೆ?

    ಬೆಂಗಳೂರು: ಜಗತ್ತನೇ ತಲ್ಲಣಗೊಳಿಸಿ, ಭಯದ ವಾತಾವರಣ ಸೃಷ್ಟಿಸಿರುವ ಮಹಾಮಾರಿ ಕರೊನಾ ವೈರಸ್​ ಕುರಿತು ಈಗಾಗಲೇ ಅನೇಕ ತಜ್ಞರು ಹಲವಾರು ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ. ಕರೊನಾ ಬಂದರೆ ಹೆದರುವ ಅಗತ್ಯವಿಲ್ಲ. ಅದೇನು ತುಂಬಾ ಅಪಾಯಕಾರಿಯೇನಲ್ಲ ಎಂದು ಅನೇಕರು ಧೈರ್ಯ ತುಂಬಿದ್ದು, ಇದನ್ನೇ ಡಾ. ಬಿಸ್ವರೂಪ್​ ರಾಯ್​ ಎಂಬುವರು ಸಹ ಪುನರುಚ್ಛರಿಸಿದ್ದಾರೆ.

    ಕರೊನಾ ವೈರಸ್​ ಬಗ್ಗೆ ಮಾತನಾಡಿರುವ ಬಿಸ್ವರೂಪ್​ ರಾಯ್​, ಕರೊನಾ ಸಾಮಾನ್ಯ ಜ್ವರದ ಕುಟುಂಬಕ್ಕೆ ಸೇರಿದ್ದಾಗಿದೆ. ಅದರಲ್ಲಿ ಹೊಸದಾದ ಮಾತೇನಿಲ್ಲ. ಜನರು ಆಸ್ಪತ್ರೆಗೆ ಹೋದ ಬಳಿಕ ಸಾಯುತ್ತಿದ್ದಾರೆ. ಅಸಲಿಗೆ ಕರೊನಾಗೆ ಸದ್ಯ ನೀಡಲಾಗುತ್ತಿರುವ ಚಿಕಿತ್ಸಾ ವಿಧಾನವೇ ಪ್ರಯೋಗಿಕವಾದದ್ದು, ಇದನ್ನು ಪ್ರಾಣಿಗಳಿಗೆ ನೀಡಿದ್ರೆ ಅವೂ ಸಹ ಸಾಯುತ್ತಿದ್ದವು. ಇದೀಗ ಮನುಷ್ಯರಿಗೆ ನೀಡಿದ್ದೇವೆ. ಅವರಲ್ಲಿ ಕೆಲವರು ಸಾಯುತ್ತಿದ್ದಾರೆ ಎಂದು ತಿಳಿಸಿದರು.

    ಇದನ್ನೂ ಓದಿ: VIDEO| ಆಗಸದಲ್ಲೇ ಇಂಧನ ತುಂಬುವ ವಿಡಿಯೋ ರಫೇಲ್​ಗೆ ಸಂಬಂಧಿಸಿದ್ದಲ್ಲ, ಸತ್ಯಾಂಶವೇ ಬೇರೆ!

    ಮೊದಲ ದಿನ 7-8 ಗ್ಲಾಸ್​ ಎಳನೀರು ಅಥವಾ ಪೈನಾಪಲ್​ ಅಥವಾ ಮೂಸಂಬಿ ಜ್ಯೂಸ್​ ಕುಡಿಯಿರಿ. ಈಗಾಗಲೇ ಎಲ್ಲೆಲ್ಲಿ ಟೆಸ್ಟ್​ ಮಾಡಲಾಗಿದೆ. ಅಲ್ಲೆಲ್ಲ ಸಾಕಷ್ಟು ಬದಲಾವಣೆಗಳು ಹಾಗೂ ಗೊಂದಲಗಳಾಗಿವೆ. ಹೀಗಾಗಿ ಟೆಸ್ಟ್​ ಮಾಡಿಸಲೇಬೇಡಿ. ಕರೊನಾವೇನು ಭೀಕರ ವೈರಸ್​ ಅಲ್ಲವೆಂದು ಹೇಳಿದ್ದಾರೆ.

    ನಮ್ಮ ದೇಹದಲ್ಲೇ ಹಲವಾರು ರೀತಿಯ ವೈರಸ್​ ಇದೆ. ಅದರಲ್ಲಿ ಕರೊನಾ ಕೂಡ ಒಂದು. ಎಚ್​ 1 ಎನ್​ 1 ಹೇಗೆ ಜ್ವರವೋ ಅದೇ ರೀತಿ ಇದು ಕೂಡ. ಕರೊನಾ ವೈರಸ್​ ಹೊಸದೇನಲ್ಲ. ಇದು ಹೊಸದು ಎಂದು ಹೇಳುವ ಒಂದೇ ಒಂದು ವಿಚಾರವೂ ಸಹ ಅದರಲ್ಲಿ ಇಲ್ಲ. ಆಘಾತಕಾರಿಯೆಂದರೆ ಜನರು ಆಸ್ಪತ್ರೆಗೆ ಹೋದ ಬಳಿಕ ಸಾಯುತ್ತಿದ್ದಾರೆ. ವಿಶ್ವಸಂಸ್ಥೆಯ ನಿಯಮಾವಳಿಗಳ ಪ್ರಕಾರ ಕರೊನಾ ರೋಗಿಗಳಿಗೆ ಏನು ಚಿಕಿತ್ಸೆ ಕೊಡಲಾಗುತ್ತಿದೆ. ಆ ಚಿಕಿತ್ಸೆಯೇ ಪ್ರಾಯೋಗಿಕ. ಇದನ್ನು ಪ್ರಾಣಿಗಳ ಮೇಲೂ ಪ್ರಯೋಗ ಮಾಡಿದ್ದರು ಸಾಯುತ್ತಿದ್ದವು ಎಂದಿದ್ದಾರೆ.

    ಬಾಲ್ಯದಿಂದಲೂ ನಿಮಗೆ ಸಾವಿರಾರು ಬಾರಿ ಜ್ವರ ಬಂದಿರುತ್ತದೆ. ವಯಸ್ಕರಿಗೆ ಪ್ರತಿ ವರ್ಷಕ್ಕೊಮ್ಮೆ ಜ್ವರ ಬರಲೇಬೇಕು. ಮಕ್ಕಳಿಗೆ ತಿಂಗಳಲ್ಲಿ ಒಂದರಿಂದ ಎರಡು ಬಾರಿ ಜ್ವರ ಬರುತ್ತದೆ. ಇದ ದೇಹದ ಸಹಜ ಪ್ರಕ್ರಿಯೆ. ಇದು ಆರೋಗ್ಯ ಸ್ಥಿತಿಯ ಕೂಡ ಹೌದು. ಜ್ವರ ಬಂದವರು ಇದುವರೆಗೂ ಅವರಾಗಿಯೇ ಗುಣಮುಖರಾಗಿಲ್ಲವೇ? ನಾವೇನು ಮಾಡಬೇಕಿಲ್ಲ. ನಮ್ಮ ದೇಹದ ರೋಗ ನಿರೋಧಕ ಶಕ್ತಿ ಇದನೆಲ್ಲಾ ಮಾಡುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಸಿಕೊಂಡರೆ ಸಾಕು ಎನ್ನುತ್ತಾರೆ ಬಿಸ್ವರೂಪ್​ ರಾಯ್​.

    ಇದನ್ನೂ ಓದಿ: ಬೆಳಗಾವಿಗೂ ಶ್ರೀರಾಮ ಜನ್ಮಭೂಮಿ ಅಯೋಧ್ಯೆಗೂ ಇದೆ ಅವಿನಾಭಾವ ಸಂಬಂಧ: ಇಲ್ಲಿದೆ ಕುತೂಹಲಕಾರಿ ಸಂಗತಿ!

    ಮೊದಲ ದಿನ 7-8 ಗ್ಲಾಸ್​ ಎಳನೀರು ಅಥವಾ ಪೈನಾಪಲ್​ ಅಥವಾ ಮೂಸಂಬಿ ಜ್ಯೂಸ್​ ಕುಡಿಯಿರಿ. ಇದರ ಹೊರತಾಗಿ ಏನನ್ನೂ ಸೇವಿಸಬೇಡಿ. ಎರಡನೇ ದಿನ ಅರ್ಧದಷ್ಟು ಅಂದರೆ 4 ಗ್ಲಾಸ್​ ಎಳನೀರು ಮತ್ತು 4 ಗ್ಲಾಸ್​ ಪೈನಾಪಲ್​ ಅಥವಾ ಮೂಸಂಬಿ ಜ್ಯೂಸ್​ ಸೇವಿಸಿ. ಇದರ ಜತೆಗೆ 300 ಗ್ರಾಂನಷ್ಟು ಟೊಮ್ಯಾಟೋದಿಂದ ತಯಾರಿಸಿದ ಪದಾರ್ಥ ಸೇವಿಸಿ. ಮೂರನೇ ದಿನ 12 ಗಂಟೆಯವರೆಗೆ 2 ಗ್ಲಾಸ್​ ಎಳನೀರು, 2 ಗ್ಲಾಸ್​ ಪೈನಾಪಲ್​ ಜ್ಯೂಸ್​ ಕುಡಿಯಿರಿ. ಊಟಕ್ಕೆ 300 ಗ್ರಾಂ ಟೊಮ್ಯಾಟೋ ಕೀರಾ ಸೇವಿಸಿ. ಅಲ್ಲಿಗೆ ಎಲ್ಲವೂ ಸರಿಹೋಗುತ್ತದೆ. ಉಷ್ಣಾಂಶವೂ ಏರೋದಿಲ್ಲ. ಇದೆಲ್ಲದರ ನಡುವೆ ಸಾಮಾನ್ಯ ಸಸ್ಯಹಾರವನ್ನು ಸೇವಿಸಿ ಎಂದರು.

    ವಿಯೆಟ್ನಾಂನ ಕರೊಲಾ ಸೋಂಕಿನ ಚಿತ್ರಣ ತೆಗೆದುಕೊಳ್ಳಿ. ಅಲ್ಲಿ ಕರೊನಾದಿಂದ ಸಾವು ಸಂಭವಿಸಿಲ್ಲ. ಅದರಲ್ಲೂ ಅಲ್ಲಿ ಚೀನಾದ ಅನೇಕ ಜನರು ಕೆಲಸ ಮಾಡುತ್ತಾರೆ. ಅಲ್ಲಿ ಜನವರಿಯಲ್ಲೇ ಕರೊನಾ ಕಾಣಿಸಿಕೊಂಡಿತ್ತು. ಅವರು ಮಾಸ್ಕ್​ ಸಹ ಹಾಕೋದಿಲ್ಲ. ಅಲ್ಲದೆ, 15 ಕೋಟಿ ಜನಸಂಖ್ಯೆ ಇದೆ. ಟೆಸ್ಟ್​ ಸಹ ನಡೆಯೋದು ಇಲ್ಲ. ತಾಂಜಾನಿಯಾ ಕೂಡ ಇದೇ ರೀತಿ. ಬಡ ರಾಷ್ಟ್ರವಾದರೂ ಅಲ್ಲಿ ಕೇವಲ 21 ಸಾವು. ಹೀಗಾಗಿ ಕರೊನಾವೇನು ಗಂಭೀರವಲ್ಲ ಎನ್ನುತ್ತಾರೆ ಬಿಸ್ವರೂಪ್​ ರಾಯ್​.

    ಇದನ್ನೂ ಓದಿ: 100 ಕೋಟಿಯಾಗಲಿ, 15 ಕೋಟಿ ಬಜೆಟ್​ನ ಸಿನಿಮಾನೇ ಆಗಲಿ ನೋಡುಗ ವರ್ಗ ಮಾತ್ರ ಒಂದೇ; ಸಿದ್ಧೀಕಿ​

    ಕೇಂದ್ರ ಸಚಿವ ಹರ್ಷವರ್ಧನ್​ ಅವರನ್ನು ಮಾರ್ಚ್​ 3ರಂದು ಬಿಸ್ವರೂಪ್​ ರಾಯ್​ ಭೇಟಿ ಮಾಡಿ ಚರ್ಚಿಸಿದ್ದರಂತೆ. ವಿಶ್ವ ಆರೋಗ್ಯ ಸಂಸ್ಥೆಯ ಬಗ್ಗೆ ಗಂಭೀರ ಆರೋಪ ಮಾಡಿರುವ ಅವರು ಅದೊಂದು ಕಳ್ಳರ ಸಂತೆ. ಎಚ್​1 ಎನ್​ 1 ಬಂದಾಗಲೂ ಮಾಸ್ಕ್​ ಧರಿಸಿ ಎಂದು ಹೇಳಿದ್ದರು. ಡಬ್ಲ್ಯುಎಚ್​ಒ ಕೆಲ ದೇಶಗಳು ಮತ್ತು ಫಾರ್ಮಾಸುಟಿಕಲ್​ ಸಂಸ್ಥೆಗಳ ಮುಖವಾಣಿಯಾಗಿದೆ.

    ಇನ್ನು ಡಾ. ಬಿಸ್ವರೂಪ್​ ರಾಯ್​ ಅವರ ಮಾತಿಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ವೈರಸ್​ ಬಗ್ಗೆ ನಿರ್ಲಕ್ಷ್ಯವಾಗಿ ಮಾತನಾಡಬಾರದು. ಜನರಿಗೆ ತಿಳುವಳಿಕೆ ಮೂಡಿಸಬೇಕು. ಅವರು ಹೇಳಿದಂತೆ ಕರೊನಾ ಹೆಚ್ಚಿಗೆ ಪರಿಣಾಮ ಬೀರಲ್ಲ. ಆದರೆ, ವಯಸ್ಸಾದವರಿಗೆ ಹಾಗೂ ಈಗಾಗಲೇ ಕಾಯಿಲೆಗಳಿಂದ ನರಳುತ್ತಿರುವವರಿಗೆ ಕರೊನಾ ಹೆಚ್ಚಿನ ಪ್ರಭಾವ ಬೀರುತ್ತಿದೆ ಎಂದು ಕೆಲ ತಜ್ಞ ವೈದ್ಯರು ಎಚ್ಚರಿಕೆಯನ್ನು ಸಹ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts