More

    ಕೋಲಾರ ಕೇಂದ್ರಸ್ಥಾನದಲ್ಲಿರುವ ತಾಲ್ಲೂಕು ಪಂಚಾಯಿತಿ ಸಭಾಂಗಣ ಸೋರುತ್ತಿದೆ/ ಹೊಸ ಆಡಳಿತ ಮಂಡಳಿ ರಚನೆಗೂ ಮುನ್ನಾ ದುರಸ್ಥಿ ಕಾಣಲಿ/ಜನರ ಆಗ್ರಹ

    ವಿಜಯವಾಣಿ ಸುದ್ದಿಜಾಲ ಕೋಲಾರ
    ಅಧಿಕಾರ ವಿಕೇಂದ್ರೀಕರಣದ ತಾಲ್ಲೂಕಿನ ಕೇಂದ್ರ ಸ್ಥಾನವಾಗಿರುವ ತಾಲ್ಲೂಕು ಪಂಚಾಯಿತಿ ಸಭಾಂಗಣ ಸೋರುತ್ತಿದ್ದು, ತಾಪಂ ಚುನಾವಣೆ ನಡೆದು ಹೊಸ ಆಡಳಿತ ಮಂಡಳಿ ಅಧಿಕಾರಕ್ಕೆ ಬರುವ ಮುನ್ನವೆ ಸುಸಜ್ಜಿತ ಸಭಾಂಗಣ ನಿರ್ಮಾಣವಾಗಿ ಗ್ರಾಮೀಣರ ಆಶೋತ್ತರಗಳಿಗೆ ಸ್ಪಂದಿಸುವ ತಾಣವಾಗಲಿ ಎಂಬುದು ಅಧಿಕಾರಿಗಳು ಮತ್ತು ಜನತೆಯ ಆಶಯವಾಗಿದೆ.

    ಅಧಿಕಾರ ವಿಕೇಂದ್ರೀಕರಣದಡಿ ಜಿಲ್ಲಾಮಟ್ಟದಲ್ಲಿ ಜಿಪಂ ಇರುವಂತೆ ತಾಲ್ಲೂಕು ಮಟ್ಟದಲ್ಲಿ ಯೋಜನೆಗಳ ಜಾರಿಯ ಜವಾಬ್ದಾರಿ ಹೊತ್ತಿರುವ ತಾಲ್ಲೂಕು ಪಂಚಾಯಿತಿ ಗ್ರಾಮೀಣ ಜನಪ್ರತಿನಿಧಿಗಳ ಧ್ವನಿಯಾಗಿ ಕೆಲಸ ಮಾಡುತ್ತಿದ್ದು, ತಾಲ್ಲೂಕಿನಾದ್ಯಂತ ೨೩ ಸದಸ್ಯರ ಆಯ್ಕೆಯೊಂದಿಗೆ ೩೪ ಗ್ರಾಮ ಪಂಚಾಯಿತಿಗಳ ಕಾರ್ಯವೈಖರಿಯ ಉಸ್ತುವಾರಿಯನ್ನು ಹೊಂದಿದೆ.

    ೩ಶಾಸಕರಿಗೂ ಕೇಂದ್ರ ಸ್ಥಾನ:
    ಜಿಲ್ಲಾ ಕೇಂದ್ರವಾಗಿರುವ ಇಲ್ಲಿ ಕೋಲಾರ, ಶ್ರೀನಿವಾಸಪುರ, ಬಂಗಾರಪೇಟೆ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯನ್ನು ಹೊಂದಿರುವುದರಿAದ ಆಯಾ ಕ್ಷೇತ್ರ ವ್ಯಾಪ್ತಿಯ ಹೋಬಳಿಗಳ ಪ್ರಗತಿ ಪರಿಶೀಲನೆಯನ್ನು ಆ ಮೂರು ಶಾಸಕರು ಇದೇ ಸಭಾಂಗಣದಲ್ಲಿ ನಡೆಸುವುದು ವಿಶೇಷವಾಗಿದೆ.

    ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರಿರುವ ಕೋಲಾರ ತಾಲ್ಲೂಕಿನ ಹೋಳೂರು, ಸುಗಟೂರು ಹೋಬಳಿಗಳ ಪ್ರಗರಿಪರಿಶೀಲನೆ ಅಲ್ಲಿನ ಶಾಸಕರ ಅಧ್ಯಕ್ಷತೆಯಲ್ಲಿ ಇದೇ ಸಭಾಂಗಣದಲ್ಲಿ ನಡೆಯುತ್ತದೆ.

    ಅದೇ ರೀತಿ ಬಂಗಾರಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಸಬಾ, ಹುತ್ತೂರು ಹೋಬಳಿಗಳ ಪ್ರಗತಿ ಪರಿಶೀಲನೆಯೂ ಅಲ್ಲಿನ ಶಾಸಕರಿಂದ ಇದೇ ಕೋಲಾರ ತಾಪಂ ಸಭಾಂಗಣದಲ್ಲಿ ನಡೆಯುತ್ತದೆ. ಉಳಿದಂತೆ ಕೋಲಾರ ತಾಲ್ಲೂಕಿನ ಉಳಿದ ಹೋಬಳಿಗಳ ಪ್ರಗತಿಪರಿಶೀಲನೆ, ತಾಪಂ ಸಾಮಾನ್ಯಸಭೆ, ತ್ರೆöÊಮಾಸಿಕ ಪ್ರಗತಿಪರಿಶೀಲನೆ ಇದೇ ಸಭಾಂಗಣದಲ್ಲಿ ನಡೆಯುತ್ತದೆ.

    ಸೋರುವ ಮಾಳಿಗೆ ಕೂರಲು ಇಕ್ಕಟ್ಟು:
    ಮೂರು ಶಾಸಕರ ಸಭೆಗಳು ನಡೆಯುವ ಕೋಲಾರ ತಾಪಂ ಸಭಾಂಗಣ ಸೋರುತ್ತಿದೆ. ಸಾಮಾನ್ಯಸಭೆ, ಪ್ರಗತಿಪರಿಶೀಲನಾ ಸಭೆಗೆ ೨೩ ಸದಸ್ಯರು, ತಾಲ್ಲೂಕಿನ ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯ ೨೮ ಇಲಾಖೆಗಳ ಅಧಿಕಾರಿಗಳು ಭಾಗವಹಿಸುವ ಸಭಾಂಗಣದಲ್ಲಿ ಇರುವುದು ೪೦ ಜನ ಕೂರಲು ಮಾತ್ರವೇ ಸ್ಥಳಾವಕಾಶ.

    ಅತಿ ಇಕ್ಕಟ್ಟಿನಲ್ಲಿ ಸಭೆಗಳು ನಡೆಯುತ್ತಿದ್ದು, ಜಿಲ್ಲಾಕೇಂದ್ರವಾದ ತಾಲ್ಲೂಕಿಗೆ ಒಂದು ಸುಂದರ ಹಾಗೂ ಸುಸಜ್ಜಿತ ಸಭಾಂಗಣದ ತುರ್ತು ಅಗತ್ಯವಿದ್ದು, ಸುಸಜ್ಜಿತ ಸಭಾಂಗಣ ನಿರ್ಮಾಣವಾಗ ಬೇಕಾಗಿದೆ.

    ಪ್ರಸ್ತಾವನೆ ಜಿಪಂಗೆ ಅನುಮೋದನೆ ಬಾಕಿ:
    ಹಿಂದಿನ ತಾಪಂ ಇಒ ಆಗಿದ್ದ ಮುನಿಯಪ್ಪ ಅವರು ತಮ್ಮ ಅವಧಿಯಲ್ಲಿ ತಾಪಂ ಸಭಾಂಗಣ ನವೀಕರಣ, ಕೊಳವೆ ಬಾವಿ ತೋಡಲು, ಇಓ ವಸತಿ ನಿರ್ಮಾಣ ಮತ್ತಿತರ ಮೂಲಸೌಲಭ್ಯಗಳಿಗಾಗಿ ಸ್ಟಾಂಪ್ ಡ್ಯೂಟಿ ಅಥವಾ ಅಧಿಭಾರ ಶುಲ್ಕದಡಿ ಇದ್ದ ೬೨ ಲಕ್ಷರೂ ಕ್ರಿಯಾಯೋಜನೆ ತಯಾರಿಸಿ ಜಿಪಂಗೆ ಅನುಮೋದನೆಗಾಗಿ ಕಳುಹಿಸಿದ್ದಾರೆ.

    ಆದರೆ ಕಡತ ಕಳುಹಿಸಿ ಆರೇಳು ತಿಂಗಳಾದರೂ ಇನ್ನೂ ಅನುಮೋದನೆ ಸಿಕ್ಕಿಲ್ಲ ಎಂಬುದು ತಾಪಂ ಮಾಜಿ ಸದಸ್ಯರ ಆರೋಪವಾಗಿದ್ದು, ಅತಿಶೀಘ್ರ ಸಭಾಂಗಣ ನಿರ್ಮಾಣಕ್ಕೆ ಅವಕಾಶ ಸಿಗಲಿ ಎಂಬುದು ಒತ್ತಾಯವಾಗಿದೆ.

    ಜಿಲ್ಲಾ ಕೇಂದ್ರದ ಘನತೆಗೆ ತಕ್ಕಂತೆ ಒಂದು ಸುಂದರ ಹಾಗೂ ಸುಸಜ್ಜಿತ ಸಭಾಂಗಣ ನಿರ್ಮಾಣಕ್ಕೆ ಸ್ಟಾಂಪ್ ಡ್ಯೂಟಿ ಅನುದಾನ ಸಾಕಾಗದಿದ್ದರೆ ಇದೇ ಸಭಾಂಗಣದಲ್ಲಿ ವರ್ಷಪೂರ್ತಿ ತಮ್ಮ ವ್ಯಾಪ್ತಿಯ ಪ್ರಗತಿ ಪರಿಶೀಲನೆ ನಡೆಸುವ ಮೂವರು ಶಾಸಕರು ತಮ್ಮ ಶಾಸಕರ ಪ್ರದೇಶಾಭಿವೃದ್ದಿ ನಿಧಿಯಲ್ಲಿ ಒಂದಿಷ್ಟು ಅನುದಾನ ನೀಡುವ ಮೂಲಕ ನೆರವಾಗಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

    ತಾಪಂ ಇಒಗೂ ವಸತಿ ಅಗತ್ಯ:
    ವಿವಿಧ ಇಲಾಖೆಗಳ ಮುಖ್ಯಸ್ಥರಿಗೆ ಇರುವಂತೆ ತಾಪಂ ಇಒ ಅವರಿಗೂ ಕ್ವಾಟ್ರಸ್ ಅಗತ್ಯವಿದೆ, ಅದಕ್ಕಾಗಿಯೇ ತಾಪಂ ಹೆಸರಿನಲ್ಲಿ ಪಿಸಿ ಬಡಾವಣೆಯಲ್ಲಿ ನಿವೇಶನವಿದ್ದು, ಅಲ್ಲಿ ಕಟ್ಟಡ ಕಟ್ಟುವ ಮೂಲಕ ಅತಿಕ್ರಮಣ ಮತ್ತು ಒತ್ತುವರಿ ತಡೆದು ತಾಪಂ ಆಸ್ತಿ ಉಳಿಸಿಕೊಳ್ಳುವ ಕೆಲಸವೂ ಆಗಬೇಕಾಗಿದೆ ಎನ್ನುತ್ತಾರೆ. ತಾಪಂ ಹಿಂದಿನ ಇಒ ಆಗಿದ್ದು, ಸ್ಥಳೀಯರಾದಕಾರಣ ಚುನಾವಣೆ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ಕರ್ತವ್ಯದಿಂದ ಬಿಡುಗಡೆಯಾಗಿ ನೀತಿ ಸಂಹಿತೆ ನಂತರ ಮತ್ತೆ ಇಒ ಆಗಲಿರುವ ಮುನಿಯಪ್ಪ ಅವರು.

    ಕೋಲಾರ ಕೇಂದ್ರಸ್ಥಾನದಲ್ಲಿರುವ ತಾಲ್ಲೂಕು ಪಂಚಾಯಿತಿ ಸಭಾಂಗಣ ಸೋರುತ್ತಿದೆ/ ಹೊಸ ಆಡಳಿತ ಮಂಡಳಿ ರಚನೆಗೂ ಮುನ್ನಾ ದುರಸ್ಥಿ ಕಾಣಲಿ/ಜನರ ಆಗ್ರಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts