More

    ಮೇರಿಹಿಲ್ ಹೆಲಿಪ್ಯಾಡ್ ಎದುರು ಮುಖ್ಯ ರಸ್ತೆಯಲ್ಲಿ ಮಳೆ ನೀರು ಸಂಗ್ರಹ ಸಂಚಾರ ದುಸ್ತರ


    ಹರೀಶ್ ಮೋಟುಕಾನ
    ಮಂಗಳೂರು: ಮೇರಿಹಿಲ್‌ನ ಹೆಲಿಪ್ಯಾಡ್ ಎದುರು ರಸ್ತೆಯಲ್ಲಿ ಮಳೆ ನೀರು ಸಂಗ್ರಹವಾಗುತ್ತಿದ್ದು, ಇದರಿಂದ ಸಂಚಾರಕ್ಕೆ ಅಡಚಣೆಯಾಗಿದೆ.


    ರಸ್ತೆಯ ಬದಿ ಎರಡೂ ಬದಿಗಳಲ್ಲಿ ರಸ್ತೆಯಿಂದ ಎತ್ತರವಾಗಿ ಮಣ್ಣು ಹಾಕಿ ಸಮತಟ್ಟು ಮಾಡಿರುವುದರಿಂದ ಮಳೆ ನೀರು ರಸ್ತೆಯಲ್ಲೇ ಸಂಗ್ರಹವಾಗುತ್ತಿದೆ. ಮೇರಿಹಿಲ್‌ನಿಂದ ಕಾವೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಂಪರ್ಕಿಸುವ ಈ ರಸ್ತೆಯಲ್ಲಿ ನಿರಂತರವಾಗಿ ವಾಹನಗಳು ಸಂಚರಿಸುತ್ತಲೇ ಇವೆ.


    ಶಾಲೆ ಆರಂಭವಾಗಲು ಕೆಲವೇ ದಿನಗಳು ಬಾಕಿ ಇದ್ದು, ಈ ಸಂದರ್ಭ ಇಲ್ಲಿ ಬೆಳಗ್ಗೆ ಹಾಗೂ ಸಂಜೆ ಏಕಕಾಲದಲ್ಲಿ ನೂರಾರು ವಾಹನಗಳು ಬರುವುದರಿಂದ ಇಲ್ಲಿ ದಟ್ಟಣೆ ಆಗುವ ಸಾಧ್ಯತೆ ಇದೆ. ಪಾದಚಾರಿಗಳು ಈ ಕೆಸರು ನೀರಿನಲ್ಲೇ ದಾಟುವ ಸ್ಥಿತಿ ಇದೆ. ಈ ಸಂದರ್ಭ ವಾಹನಗಳು ಬಂದರೆ ಕೆಸರಿನ ಸಿಂಚನವಾಗುತ್ತಿದೆ.


    ರಸ್ತೆ ಬದಿಯಲ್ಲಿ ಮಣ್ಣು ಅಗೆದು ಸರಾಗವಾಗಿ ನೀರು ಹರಿದು ಹೋಗುವಂತೆ ವ್ಯವಸ್ಥೆ ಕಲ್ಪಿಸಿದರೆ ಈ ಸಮಸ್ಯೆ ಪರಿಹಾರವಾಗಲಿದೆ. ಕಳೆದ ಬಾರಿಯೂ ಮಳೆಗಾಲದಲ್ಲಿ ಇಲ್ಲಿ ಸಮಸ್ಯೆ ಉಂಟಾಗಿತ್ತು. ಬಳಿಕ ಪಾಲಿಕೆ ಸದಸ್ಯೆ ಗಾಯತ್ರಿ ರಾವ್ ಅವರ ಗಮನಕ್ಕೆ ಬಂದು ರಸ್ತೆಯಲ್ಲಿ ನೀರು ನಿಲ್ಲದಂತೆ ವ್ಯವಸ್ಥೆ ಕಲ್ಪಿಸಿದ್ದರು.


    ಹೆಲಿಪ್ಯಾಡ್ ಎದುರಿನ ರಸ್ತೆಯಲ್ಲಿ ಸಣ್ಣ ಮಳೆಯಾದರೆ ಸಾಕು ನೀರು ಹರಿದು ಹೋಗದೆ ಅಲ್ಲಿಯೇ ನಿಂತು ಸಂಚರಿಸುವವರಿಗೆ ಸಮಸ್ಯೆಯಾಗುತ್ತಿದೆ. ಆದಷ್ಟು ಶೀಘ್ರ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕು ಎಂದು ಅಶ್ವಿನಿ ಕಿರಣ್ ಒತ್ತಾಯಿಸಿದ್ದಾರೆ.

    ಹೆಲಿಪ್ಯಾಡ್ ಎದುರು ರಸ್ತೆಯಲ್ಲಿ ನೀರು ನಿಲ್ಲದಂತೆ ರಸ್ತೆ ಬದಿಯಲ್ಲಿ ಮಣ್ಣು ತೆರವು ಮಾಡಿ ಕೊಡಲಾಗುವುದು. ಸಾರ್ವಜನಿಕರು ಸಂಚರಿಸುವಾಗ ಯಾವುದೇ ಸಮಸ್ಯೆ ಆಗದಂತೆ ಎಚ್ಚರ ವಹಿಸಲಾಗುವುದು.
    ಗಾಯತ್ರಿ ಎ. ರಾವ್
    ಮನಪಾ ಸದಸ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts