More

    ಕೋವಿಡ್-19: ನೈಜ ಕಾರ್ಯಕರ್ತರನ್ನು ಶಿಕ್ಷಿಸಬೇಡಿ ಎಂದು ದೆಹಲಿ ಸರ್ಕಾರಕ್ಕೆ ಸುಪ್ರೀಂ ತಾಕೀತು

    ನವದೆಹಲಿ: ರಾಜಧಾನಿಯ ಸರ್ಕಾರಿ ಆಸ್ಪತ್ರೆಗಳ ನೈಜ ಚಿತ್ರಣವನ್ನು ಹೊರತರುವಲ್ಲಿ ಸಂದೇಶವಾಹಕರಾಗಿ ಕಾರ್ಯನಿರ್ವಹಿಸಿದ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಂಡದ್ದಕ್ಕಾಗಿ ದೆಹಲಿ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಬಲವಾದ ನಿಗಾ ವಹಿಸಿದೆ.
    ಕೋವಿಡ್ ವಿರುದ್ಧ ಈ ಯುದ್ಧ ನಡೆಸುತ್ತಿರುವ ವೈದ್ಯರ ವಿರುದ್ಧ ಎಫ್‌ಐಆರ್ ದಾಖಲಿಸುವುದನ್ನು ನಿಲ್ಲಿಸಿ ಎಂದು ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠ ಹೇಳಿದೆ.

    ಇದನ್ನೂ ಓದಿ: ಮೈ ಜಿಂದಾ ಹೂಂ… ಪತ್ನಿಗೆ ಕರೆ ಮಾಡಿದ ‘ಹುತಾತ್ಮ’ ಯೋಧ!

    ವಜಾಗೊಳಿಸಿದ ವೈದ್ಯರನ್ನು ಪುನಃ ನೇಮಕ ಮಾಡಿದ್ದೀರಾ, ವೈದ್ಯರ ವಿರುದ್ಧ ದಾಖಲಿಸಲಾದ ಎಫ್‌ಐಆರ್ ಗಳನ್ನು ಹಿಂತೆಗೆದುಕೊಂಡಿದ್ದೀರಾ ಮತ್ತು ವೈದ್ಯಕೀಯ ಕಾರ್ಯಕರ್ತರಿಗೆ ಸಂಬಳ ಪಾವತಿಸಿದ್ದೀರಾ ಎಂಬುದರ ಬಗ್ಗೆ ಸೂಕ್ತ ಅಫಿಡವಿಟ್ ಸಲ್ಲಿಸುವಂತೆ ದೆಹಲಿ ಸರ್ಕಾರವನ್ನು ಕೇಳಿದೆ.
    ಕಳೆದ ವಾರ ಇಲ್ಲಿಯ ಸರ್ಕಾರಿ ಆಸ್ಪತ್ರೆಗಳಲ್ಲಿನ ಮೃತ ದೇಹಗಳ ವಿಲೇವಾರಿ ವ್ಯವಸ್ಥೆ ಮತ್ತು ಕಳಪೆ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಕೈಗೆತ್ತಿಕೊಂಡ ವಿಚಾರಣೆ ಹಿನ್ನೆಲೆ ಈ ಕ್ರಮ ಕೈಗೆತ್ತಿಕೊಳ್ಳಲಾಗಿದೆ.

    ಇದನ್ನೂ ಓದಿ: ‘ಗಾಲ್ವಾನ್ ಕಣಿವೆ ನಮ್ಮದು…ಭಾರತೀಯ ಯೋಧರು ಪ್ರಚೋದಿಸುವುದನ್ನು ನಿಲ್ಲಿಸಲಿ’- ಚೀನಾ ಸರ್ಕಾರ

    ಉನ್ನತ ನ್ಯಾಯಾಲಯವು ವಿಶೇಷವಾಗಿ ದೆಹಲಿ, ಮಹಾರಾಷ್ಟ್ರ, ಗುಜರಾತ್, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಿಂದ ಸ್ಥಿತಿಗತಿ ವರದಿಗಳನ್ನು ಕೇಳಿತ್ತು. ಇತರ ರಾಜ್ಯಗಳ ವರದಿಯನ್ನು ಸಹ ಶುಕ್ರವಾರ ಕೈಗೆತ್ತಿಕೊಳ್ಳಲಾಗುವುದು.

    ಓದು ಮತ್ತು ಕರ್ತವ್ಯದಲ್ಲಿ ಚಾಣಾಕ್ಷಮತಿ ಎಂದು ಹುತಾತ್ಮ ಯೋಧನನ್ನು ಹಾಡಿಹೊಗಳಿದ ತಂದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts