More

    ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ 15 ದಿನಗಳ ಗಡುವು ನೀಡಿದ ಸುಪ್ರೀಂಕೋರ್ಟ್…

    ನವದೆಹಲಿ: ಲಾಕ್​ಡೌನ್​​ನಿಂದಾಗಿ ತೀವ್ರ ಸಂಕಷ್ಟಕ್ಕೀಡಾದವರು ವಲಸೆ ಕಾರ್ಮಿಕರು. ವಲಸೆ ಹೋದ ಜಾಗದಲ್ಲಿ ಕೆಲಸವಿಲ್ಲದೆ, ತಿರುಗಿ ತಮ್ಮ ಊರಿಗೆ ಬರಲಾಗದೆ ಪರಿತಪಿಸಿದವರು ಅದೆಷ್ಟೋ ಮಂದಿ. ಈಗ ಕೇಂದ್ರ ಸರ್ಕಾರ ಆಯಾ ರಾಜ್ಯ ಸರ್ಕಾರಗಳೊಂದಿಗೆ ಜಂಟಿಯಾಗಿ ವಲಸೆ ಕಾರ್ಮಿಕರ ಸ್ಥಳಾಂತರ ಕಾರ್ಯಾಚರನೆ ನಡೆಸುತ್ತಿದೆ. ಅದಕ್ಕೆಂದೇ ಶ್ರಮಿಕ್​ ವಿಶೇಷ ರೈಲು ವ್ಯವಸ್ಥೆಯನ್ನೂ ಮಾಡಿದೆ.

    ವಲಸೆ ಕಾರ್ಮಿಕರನ್ನು ಅವರ ರಾಜ್ಯಗಳಿಗೆ, ಊರುಗಳಿಗೆ ಕಳಿಸುವ ಪ್ರಕ್ರಿಯೆ ಇನ್ನು 15ದಿನಗಳಲ್ಲಿ ಮುಗಿಯಬೇಕು ಎಂದು ಇಂದು ಸುಪ್ರೀಂಕೋರ್ಟ್​ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.

    ಇದನ್ನೂ ಓದಿ: VIDEO: ಯಡಿಯೂರು ಸ್ವಾಮಿಗೆ 10 ಕೋಟಿ ರೂ.ಮೌಲ್ಯದ ಚಿನ್ನದ ರಥ ಅರ್ಪಿಸಿದ ಬಂಗಾರದಂಥ ಭಕ್ತ …

    ದೇಶದಲ್ಲಿ ಕಾರ್ಮಿಕರು ಪಡುತ್ತಿರುವ ಕಷ್ಟ, ಅವರಿಗೆ ಎದುರಾದ ಅವ್ಯವಸ್ಥೆ ಬಗೆಗಿನ ಸುಮೊಟೊ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​, ವಲಸೆ ಕಾರ್ಮಿಕರನ್ನು ಅವರ ಹುಟ್ಟೂರಿಗೆ ಕಳಿಸಲು ಇನ್ನು 15 ದಿನ ಸಾಕಾಗುತ್ತದೆ ಎಂದು ಇಂದು ತಿಳಿಸಿದೆ. ಈ ಅರ್ಜಿವಿಚಾರಣೆಯ ಸಂಪೂರ್ಣ ತೀರ್ಪನ್ನು ಮಂಗಳವಾರ ನೀಡಲಿದೆ.

    ನ್ಯಾಯಮೂರ್ತಿಗಳಾದ ಅಶೋಕ್​ ಭೂಷಣ್​, ಎಸ್​.ಕೆ.ಕೌಲ್​ ಮತ್ತು ಎಂ.ಆರ್.ಶಾ ಅವರನ್ನೊಳಗೊಂಡ ಪೀಠ ಕಾರ್ಮಿಕರಿಗೆ ಉಂಟಾದ ಅವ್ಯವಸ್ಥೆಯ ಬಗೆಗಿನ ಪಿಐಎಲ್​ ವಿಚಾರಣೆ ನಡೆಸಿತ್ತು.

    ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ಕಳಿಸುವ ಕೆಲಸಕ್ಕೆ ಇನ್ನು 15 ದಿನಗಳ ಗಡುವು ಕೊಡುತ್ತಿದ್ದೇವೆ. ಹೀಗೆ ಮರಳಿ ತಮ್ಮ ರಾಜ್ಯಗಳಿಗೆ ಹೋದ ವಲಸೆ ಕಾರ್ಮಿಕರಿಗೆ ಆಯಾ ರಾಜ್ಯ ಸರ್ಕಾರಗಳು ಹೇಗೆ ಉದ್ಯೋಗ ಸೇರಿ ಮತ್ತಿತರ ವ್ಯವಸ್ಥೆ, ನೆರವು ನೀಡಿವೆ ಎಂಬುದಕ್ಕೆ ದಾಖಲೆ ನೀಡಬೇಕು. ವಲಸಿಗರ ನೋಂದಣಿ ಕಡ್ಡಾಯವಾಗಿ ಆಗಲೇಬೇಕು ಎಂದು ಸುಪ್ರೀಂಕೋರ್ಟ್​ ಹೇಳಿದೆ.

    ಇದನ್ನೂ ಓದಿ: VIDEO: ದೈಹಿಕವಾಗಿ ಬಳಸಿಕೊಂಡು, ಮದುವೆಯಾಗಲ್ಲ ಎಂದ ಪ್ರಿಯಕರ; ಸೆಲ್ಫಿ ವಿಡಿಯೋ ಮಾಡಿ ನಟಿ ಆತ್ಮಹತ್ಯೆ

    ವಿಚಾರಣೆ ವೇಳೆ ಸರ್ಕಾರದ ಪರ ಕೋರ್ಟ್​ಗೆ ಮಾಹಿತಿ ನೀಡಿದ ಸಾಲಿಸಿಟರ್ ಜನರಲ್​ ತುಷಾರ್​ ಮೆಹ್ತಾ ಅವರು, ಇದುವರೆಗೆ ಕೇಂದ್ರ ಸರ್ಕಾರ ಸುಮಾರು 1 ಕೋಟಿ ಕಾರ್ಮಿಕರನ್ನು ಅವರ ಊರುಗಳಿಗೆ ಕಳಿಸಿದೆ ಎಂದು ತಿಳಿಸಿದ್ದಾರೆ.

    ರಸ್ತೆ ಮಾರ್ಗವಾಗಿ 41 ಲಕ್ಷ ಕಾರ್ಮಿಕರನ್ನು, 57 ಲಕ್ಷ ಕಾರ್ಮಿಕರನ್ನು ರೈಲುಗಳ ಮೂಲಕ ಸ್ಥಳಾಂತರ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿ: ಅಣ್ಣನನ್ನು ಕೊಂದ ಯುವತಿ ಸೀದಾ ಠಾಣೆಗೆ ಹೋದಳು…ಆಕೆ ಹೇಳಿದ ಕತೆ ಕೇಳಿ ಪೊಲೀಸರಿಗೆ ಶಾಕ್​…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts