More

    ಲಾಕ್​ಡೌನ್​ ಅವಧಿಯಲ್ಲಿ ಕಾರ್ಮಿಕರಿಗೆ ವೇತನ ವಿಚಾರ: ಸುಪ್ರೀಂಕೋರ್ಟ್​ ಹೇಳಿದ್ದೇನು?

    ನವದೆಹಲಿ: ಲಾಕ್​ಡೌನ್​ ಅವಧಿಯಲ್ಲಿ ಎಷ್ಟೋ ಕಂಪನಿಗಳು ತನ್ನ ಸಿಬ್ಬಂದಿಗೆ ವರ್ಕ್​ ಫ್ರಂ ಹೋಂ ಕೆಲಸ ಕೊಟ್ಟರೆ, ಹೆಚ್ಚಿನ ಕಂಪನಿಗಳು ರಜಾ ಕೊಟ್ಟಿದ್ದವು. ಇದಕ್ಕೆ ಕಾರಣ, ವರ್ಕ್​ ಫ್ರಂ ಹೋಂ ಮಾಡುವ ಕೆಲಸ ಅದಲ್ಲದ ಕಾರಣ, ಕಚೇರಿಗಳಿಗೆ ಹೋಗಿಯೇ ಕೆಲಸ ಮಾಡುವುದು ಅನಿವಾರ್ಯ ಆಗಿರುವ ಹಿನ್ನೆಲೆಯಲ್ಲಿ, ಸುಮಾರು ಎರಡು ತಿಂಗಳು ರಜೆ ಘೋಷಿಸಿದ್ದವು.

    ಈ ಪೈಕಿ ಕೆಲವೇ ಕೆಲವು ಕಂಪನಿಗಳು ಮಾತ್ರ ತನ್ನ ಸಿಬ್ಬಂದಿಗೆ ಸಂಪೂರ್ಣ ವೇತನ ನೀಡಿವೆ. ಇನ್ನು ಹಲವು ವೇತನದಲ್ಲಿ ಕಡಿತಗೊಳಿಸಿವೆ. ಲಾಭವೇ ಇಲ್ಲದಿದ್ದರೆ ವೇತನ ಕೊಡುವುದು ಹೇಗೆ ಎಂದು ಹಲವು ಕಂಪನಿ ಮಾಲೀಕರು ಅವಲತ್ತುಕೊಂಡಿದ್ದಾರೆ.

    ಇದನ್ನೂ ಓದಿ: ಪ್ರೇಯಸಿಯನ್ನೇ ಕೊಂದ ಮಾಜಿ ಲವರ್​.. ಟ್ರೈಂಗಲ್​ ಲವ್​ ಸ್ಟೋರಿ ದುರಂತ ಅಂತ್ಯ ಕಂಡಿದ್ಹೇಗೆ?

    ಲಾಕ್​ಡೌನ್​ ಶುರುವಾದ ಆರಂಭದಲ್ಲಿ ಅಂದರೆ ಮಾರ್ಚ್ 29ರಂದು ‘ಲಾಕ್​ಡೌನ್ ಸಮಯದಲ್ಲಿ ಕೆಲಸಗಾರರಿಗೆ ಕಡ್ಡಾಯವಾಗಿ ಸಂಪೂರ್ಣ ವೇತನ ನೀಡಬೇಕು’ ಎಂದು ಕೇಂದ್ರ ಸರ್ಕಾರ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಕಂಪನಿ ಮಾಲೀಕರು ಸುಪ್ರೀಕೋರ್ಟ್​ ಮೊರೆ ಹೋಗಿದ್ದಾರೆ. ವೇತನ ನೀಡಲು ಕಷ್ಟವಾಗುತ್ತಿರುವ ಬಗ್ಗೆ ಅವರು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ.

    ಆದ್ದರಿಂದ ಅಂತಿಮವಾಗಿ ತೀರ್ಮಾನಕ್ಕೆ ಬರುವ ಮುನ್ನ ತಾತ್ಕಾಲಿಕ ಆದೇಶ ಹೊರಡಿಸಿರುವ ಸುಪ್ರೀಂಕೋರ್ಟ್​, ಸಂಪೂರ್ಣ ವೇತನ ನೀಡದಿರುವ ಕಂಪನಿಗಳ ಮಾಲೀಕರ ವಿರುದ್ಧ ಜುಲೈ ಕೊನೆಯವರೆಗೆ ಕಠಿಣ ಕ್ರಮ ತೆಗೆದುಕೊಳ್ಳಬಾರದು ಎಂದು ಸರ್ಕಾರಗಳಿಗೆ ಆದೇಶಿಸಿದೆ. ಈ ಮೂಲಕ ಖಾಸಗಿ ಕಂಪೆನಿಗಳ ಮಾಲೀಕರು ಸದ್ಯ ನಿರಾಳವಾಗಿ ಉಸಿರು ಬಿಡುವಂತಾಗಿದೆ.

    ಇದನ್ನೂ ಓದಿ: ಚಿರು ಯಾವತ್ತೂ ಚಿರಂಜೀವಿನೇ!; ಹರಿಪ್ರಿಯಾ ಬರೆದರು ಸುದೀರ್ಘ ಪತ್ರ …

    ವೇತನ ಪಾವತಿ ವಿಚಾರದಲ್ಲಿ ಕಂಪನಿ ಮಾಲೀಕರು ಮತ್ತು ಕೆಲಸಗಾರರ ಮಧ್ಯೆ ಹೊಂದಾಣಿಕೆಯ ಒಪ್ಪಂದವೇರ್ಪಡಲು ರಾಜ್ಯ ಸರ್ಕಾರಗಳು ಸಹಾಯ ಮಾಡಬೇಕಾಗಿದ್ದು ಸಂಬಂಧಪಟ್ಟ ಕಾರ್ಮಿಕ ಆಯುಕ್ತರಿಗೆ ವರದಿ ಸಲ್ಲಿಸಬೇಕು ಎಂದು ಕೋರ್ಟ್​ ಹೇಳಿದೆ. ಅದೇ ವೇಳೆ ತನ್ನ ಮಾರ್ಚ್​ 29ರ ಆದೇಶದ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಾಲ್ಕು ವಾರಗಳ ಕಾಲಾವಕಾಶವನ್ನು ನ್ಯಾಯಮೂರ್ತಿ ಅಶೋಕ್ ಭೂಷಣ್​ ನೇತೃತ್ವದ ಪೀಠ ನೀಡಿದೆ. ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜುಲೈ ಕೊನೆ ವಾರಕ್ಕೆ ಮುಂದೂಡಿದೆ.

    ಪಾಕ್​ ಪರ ಘೋಷಣೆ ಕೂಗಿದವರಿಗೆ ಪರೋಕ್ಷ ನೆರವು; ಇನ್ಸ್​ಪೆಕ್ಟರ್ ಡಿಸೋಜಾ​ ಅಮಾನತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts