More

    ಪಾಕ್​ ಪರ ಘೋಷಣೆ ಕೂಗಿದವರಿಗೆ ಪರೋಕ್ಷ ನೆರವು; ಇನ್ಸ್​ಪೆಕ್ಟರ್ ಡಿಸೋಜಾ​ ಅಮಾನತು

    ಹುಬ್ಬಳ್ಳಿ: ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದ್ದ ಕಾಶ್ಮೀರಿ ವಿದ್ಯಾರ್ಥಿಗಳ ವಿಷಯದಲ್ಲಿ ಕರ್ತವ್ಯಲೋಪ ಎಸಗಿ ಸುಲಭದಲ್ಲಿ ಜಾಮೀನು ಸಿಗುವಂತೆ ಮಾಡಿರುವ ಹುಬ್ಬಳ್ಳಿಯ ಇನ್ಸ್‌ಪೆಕ್ಟರ್ ಜಾಕ್ಸನ್ ಡಿಸೋಜಾರನ್ನು ಅಮಾನತು ಮಾಡಲಾಗಿದೆ.

    ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ಅವರು ಹುಬ್ಬಳ್ಳಿ ಗ್ರಾಮೀಣ ಠಾಣೆಯ ಇನ್ಸ್‌ಪೆಕ್ಟರ್ ಜಾಕ್ಸನ್ ಡಿಸೋಜಾರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

    ಹುಬ್ಬಳ್ಳಿಯ ಕೆಎಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಈ ವಿದ್ಯಾರ್ಥಿಗಳು ಪಾಕಿಸ್ತಾನದ ಪರವಾಗಿ ಘೋಷಣೆ ಕೂಗುತ್ತಿದ್ದುದುರಿಂದ ಅವರನ್ನು ಬಂಧಿಸಲಾಗಿತ್ತು. ಇವರು ಜಾಮೀನು ಕೋರಿ ಕೋರ್ಟ್​ ಮೊರೆ ಹೋಗಿದ್ದರು. ಒಮ್ಮೆ ಆರೋಪಿಗಳು ಬಂಧಿತರಾದರೆ 90 ದಿನಗಳವರೆಗೆ ಚಾರ್ಜ್​ಷೀಟ್​ (ಆರೋಪಪಟ್ಟಿ) ಸಲ್ಲಿಕೆ ಮಾಡಬೇಕಾದುದು ನಿಯಮ. ಆದರೆ ಜಾಕ್ಸನ್​ ಡಿಸೋಜಾ ಹಾಗೆ ಮಾಡದೇ, ಕರ್ತವ್ಯಲೋಪ ಎಸಗಿದ್ದಾರೆ.

    ಇದನ್ನೂ ಓದಿ‘ಪಾಕಿಸ್ತಾನ್​ ಜಿಂದಾಬಾದ್’​ ಎಂದ ಅಮೂಲ್ಯಾಗೆ ಜೈಲೇ ಗತಿ: ಜಾಮೀನು ನಿರಾಕರಿಸಿದ ಕೋರ್ಟ್​

    ಇದನ್ನೇ ಆಧಾರವಾಗಿಟ್ಟುಕೊಂಡು ಈ ವಿದ್ಯಾರ್ಥಿಗಳ ಪರ ವಕೀಲರು ಕೋರ್ಟ್​ನಲ್ಲಿ ವಾದಿಸಿದ್ದರು. ಈ ಹಿನ್ನೆಲೆಯಲ್ಲಿ 2ನೇ ಜೆಎಂಎಫ್‍ಸಿ ನ್ಯಾಯಾಲಯ ಅನಿವಾರ್ಯವಾಗಿ ಜಾಮೀನು ನೀಡಬೇಕಾಯಿತು. ಈ ಬಗ್ಗೆ ವಿಚಾರಣೆ ನಡೆಸಿದಾಗ, ಡಿಸೋಜಾ ಕರ್ತವ್ಯಲೋಪ ಎಸಗಿರುವುದು ಬೆಳಕಿಗೆ ಬಂದಿದ್ದು, ಅವರನ್ನು ಅಮಾನತು ಮಾಡಲಾಗಿದೆ.

    ನಿನ್ನೆ (ಗುರುವಾರ) ಮೂವರು ಕಾಶ್ಮೀರಿ ವಿದ್ಯಾರ್ಥಿಗಳಿಗೆ ಜಾಮೀನು ಮಂಜೂರಾಗಿರುವ ಹಿನ್ನೆಲೆಯಲ್ಲಿ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

    ಪಾಕ್​ ಪರವಾಗಿ ಘೋಷಣೆ ಕೂಗಿದವರು ದೇಶದ್ರೋಹಿಗಳು. ಆದರೆ ಪೊಲೀಸರ ನಿರ್ಲಕ್ಷ್ಯದಿಂದ ಅವರಿಗೆ ಜಾಮೀನು ಸಿಕ್ಕಿದೆ ಎಂಬ ಆಕ್ರೋಶ ವ್ಯಕ್ತವಾಗಿತ್ತು. ಇದು ಪಾಕ್​ ಪರವಾಗಿ ಇರುವವರಿಗೆ ಪರೋಕ್ಷ ನೆರವು ನೀಡಿದಂತೆ. ಆದ್ದರಿಂದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯವೂ ಬಂದಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts