More

    ಸುಳ್ಳು ಸುದ್ದಿ, ದ್ವೇಷ ಹರಡುವ ಟ್ವೀಟ್​ಗಳು : ಟ್ವಿಟರ್ ಮತ್ತು ಸರ್ಕಾರಕ್ಕೆ ಸುಪ್ರೀಂ ನೋಟೀಸು

    ನವದೆಹಲಿ: ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿ ಹರಡುವುದನ್ನು, ದ್ವೇಷ ಮತ್ತು ರಾಷ್ಟ್ರದ್ರೋಹದ ಸಂದೇಶಗಳನ್ನು ರವಾನಿಸುವುದನ್ನು ತಡೆಯಲು ಕಾರ್ಯತಂತ್ರ ರೂಪಿಸಲು ಕೋರಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೇಲೆ ಕೇಂದ್ರ ಸರ್ಕಾರಕ್ಕೆ ಮತ್ತು ಟ್ವಿಟರ್​ಗೆ ಸುಪ್ರೀಂ ಕೋರ್ಟ್ ನೋಟೀಸು ಜಾರಿಗೊಳಿಸಿದೆ.

    ಟ್ವಿಟರ್ ಮತ್ತಿತರ ಸಾಮಾಜಿಕ ಮಾಧ್ಯಮಗಳ ದುರ್ಬಳಕೆಯ ಬಗ್ಗೆ ಬಿಜೆಪಿ ನಾಯಕ ವಿನೀತ್ ಗೊಯೆಂಕಾ ಈ ಅರ್ಜಿ ಸಲ್ಲಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ.ರಾಮಸುಬ್ರಮಣಿಯನ್ ಅವರನ್ನೊಳಗೊಂಡ ನ್ಯಾಯಪೀಠವು ಶುಕ್ರವಾರ ನೋಟೀಸ್ ಜಾರಿ ಮಾಡಿದ್ದು, ಈ ಬಗ್ಗೆ ಸಲ್ಲಿಸಲಾಗಿರುವ ಇನ್ನಿತರ ಅರ್ಜಿಗಳೊಂದಿಗೆ ವಿಚಾರಣೆ ನಡೆಸುವುದಾಗಿ ಹೇಳಿದೆ.

    ಇದನ್ನೂ ಓದಿ: ಡೊನಾಲ್ಡ್​ ಟ್ರಂಪ್​​ ಟ್ವಿಟರ್​ ಖಾತೆ ಶಾಶ್ವತ ರದ್ದು ಮಾಡಿ ಟ್ವಿಟರ್​ ಕೊಟ್ಟ ಕಾರಣ ಹೀಗಿದೆ…

    ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ರಾಜಕೀಯ ಪಕ್ಷಗಳು ಚುನಾವಣಾ ಸಮಯದಲ್ಲಿ ಎದುರಾಳಿಗಳ ತೇಜೋವಧೆ ಮಾಡಲು ಬಳಸುತ್ತಿವೆ. ಸರಕಾರಿ ಸಂಸ್ಥೆಗಳ ಮತ್ತು ಪ್ರತಿಷ್ಠಿತ ಜನರ ಹೆಸರಲ್ಲಿ ಸಾವಿರಾರು ನಕಲಿ ಟ್ವಿಟರ್ ಹ್ಯಾಂಡಲ್​ಗಳು ಮತ್ತು ಫೇಸ್​ಬುಕ್​ ಅಕೌಂಟ್​ಗಳು ಜನರಿಗೆ ಸುಳ್ಳು ಮಾಹಿತಿ ಹರಡುತ್ತಿವೆ. ಆದರೆ ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಪರಿಸ್ಥಿತಿಯನ್ನು ಸುಧಾರಿಸಲು ಸೂಕ್ತ ಕಾನೂನು ಮತ್ತು ಕಾರ್ಯತಂತ್ರದ ಅಗತ್ಯವಿದೆ ಎಂದು ಈ ಅರ್ಜಿಯಲ್ಲಿ ಹೇಳಲಾಗಿದೆ.

    ಸುಳ್ಳು ಸುದ್ದಿಯೇ ದೆಹಲಿಯಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರವೂ ಸೇರಿದಂತೆ ದೇಶದಲ್ಲಿ ಅನೇಕ ಗಲಭೆಗಳಿಗೆ ಕಾರಣವಾಗಿದೆ ಎಂದಿರುವ ಅರ್ಜಿದಾರರು, ನಕಲಿ ಟ್ವಿಟರ್ ಹ್ಯಾಂಡಲ್ ಮತ್ತು ಬೋಗಸ್ ಫೇಸ್​ಬುಕ್ ಅಕೌಂಟ್​ಗಳನ್ನು ಅದಕ್ಕಾಗಿ ಬಳಸಲಾಗುತ್ತಿದೆ ಎಂದಿದ್ದಾರೆ. ಪ್ರಸ್ತುತ ಭಾರತದಲ್ಲಿ 35 ಮಿಲಿಯನ್ ಟ್ವಿಟರ್ ಹ್ಯಾಂಡಲ್​ಗಳು ಮತ್ತು 350 ಮಿಲಿಯನ್ ಫೇಸ್​ಬುಕ್ ಅಕೌಂಟ್​ಗಳಿದ್ದು, ಇವುಗಳಲ್ಲಿ ಶೇ.10 ರಷ್ಟು ನಕಲಿಯಾಗಿವೆ ಎಂದಿದ್ದಾರೆ.

    ಇದನ್ನೂ ಓದಿ: ದೀಪ್ ಸಿಧು ಫೇಸ್​ಬುಕ್ ಖಾತೆ ನಡೆಸುತ್ತಿದ್ದಾಳೆ ಒಬ್ಬ ವಿದೇಶೀ ಸ್ನೇಹಿತೆ !

    ಉದಾಹರಣೆಗೆ ಗೃಹ ಸಚಿವಾಲಯವು ಸಿಖ್ಸ್ ಫಾರ್ ಜಸ್ಟೀಸ್ ಎಂಬ ಸಂಘಟನೆಯನ್ನು ಯುಎಪಿಎ ಕಾನೂನಿನ ಅಡಿ ಭಾರತ ಸರ್ಕಾರ 2019 ರ ಜುಲೈ 10 ರಂದು ನಿಷೇಧಿಸಿದೆ. ಆದರೆ ಟ್ವಿಟರ್​ನಲ್ಲಿ ಅದು ಇನ್ನೂ ರಾಷ್ಟ್ರದ್ರೋಹ ಮತ್ತು ಅಪರಾಧಿಕ ಕೃತ್ಯಗಳಿಗೆ ಪ್ರಚೋದನೆ ನೀಡುತ್ತಿದೆ ಎಂದೂ ಆಪಾದಿಸಿರುವ ಅರ್ಜಿದಾರರು, ಆ್ಯಂಟಿ ಇಂಡಿಯಾ ಟ್ವೀಟ್​ಗಳನ್ನು ಗೊತ್ತಿದ್ದೂ ಪ್ರಮೋಟ್​ ಮಾಡುತ್ತಿರುವ ಟ್ವಿಟರ್ ಮತ್ತು ಅದರ ಪ್ರತಿನಿಧಿಗಳ ಮೇಲೆ ಕ್ರಮ ಕೈಗೊಳ್ಳಲು, ಶಿಕ್ಷೆ ವಿಧಿಸಲು ಸೂಕ್ತ ಕಾನೂನು ರಚಿಸಬೇಕು ಎಂದಿದ್ದಾರೆ.(ಏಜೆನ್ಸೀಸ್)

    ರಾಮ ಮಂದಿರದ ಹೆಸರಲ್ಲಿ ವಂಚಿಸುತ್ತಿದ್ದ ದುಷ್ಕರ್ಮಿಗಳ ಬಂಧನ

    ಪೊಲೀಸರ ಫೇಸ್​ಬುಕ್ ಖಾತೆಗೇ ಕನ್ನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts