More

    ರಾಗಿ ಬೆಂಬಲ ಬೆಲೆಗೆ ಖರೀದಿ ಸ್ಥಗಿತ, ಸರ್ಕಾರದ ವಿರುದ್ಧ ಆಕ್ರೋಶ: ಕೈಕೊಟ್ಟ ಆಹಾರ ಇಲಾಖೆ, ಸಂಕಷ್ಟಕ್ಕೀಡಾದ ಬೆಳೆಗಾರರು

    | ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

    ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಧಾನ್ಯ ಖರೀದಿಸುವಲ್ಲಿ ರಾಜ್ಯ ಸರ್ಕಾರದ ಇಬ್ಬಗೆ ನೀತಿ ನಡುವೆಯೇ ಸೋಮವಾರ ರಾಗಿ ಖರೀದಿ ಸೇವೆ ಸ್ಥಗಿತಗೊಂಡಿದೆ. ಕಳೆದ ವರ್ಷ ನೋಂದಣಿಯಾಗಿದ್ದರಲ್ಲಿ ಅರ್ಧದಷ್ಟು ರೈತರು ಮಾತ್ರ ನೋಂದಣಿ ಆಗಿದ್ದು, ಉಳಿದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರದ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅವಧಿ ವಿಸ್ತರಿಸುವಂತೆ ಆಗ್ರಹಿಸಿದ್ದಾರೆ.

    2021-22ನೇ ಸಾಲಿನ ಮುಂಗಾರು ಬೆಳೆಗಳನ್ನು ಎಂಎಸ್​ಪಿ ಅನ್ವಯ ರಾಗಿ, ಭತ್ತ, ಬಿಳಿಜೋಳ ಸೇರಿ 8.2 ಲಕ್ಷ ಮೆಟ್ರಿಕ್ ಟನ್ ಖರೀದಿಗೆ ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ. ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ತಾಲೂಕು ಕಚೇರಿಗಳಲ್ಲಿ ರೈತರು ನೋಂದಣಿ ಮಾಡಿಕೊಳ್ಳುತ್ತಿದ್ದು, ಮಾರ್ಚ್ ಅಂತ್ಯದವರೆಗೂ ಅವಕಾಶವಿದೆ. ಆದರೆ, ರಾಗಿ ಮಾರಾಟ ಜ.24ಕ್ಕೆ ಸ್ಥಗಿತಗೊಂಡಿದೆ. ನಿಗದಿತ 2.1 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಗೆ ರೈತರು ನೋಂದಣಿ ಮಾಡಿರುವ ಪರಿಣಾಮ ನಿಲ್ಲಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 2020-21ನೇ ಸಾಲಿನಲ್ಲಿ 2.06 ಲಕ್ಷ ರೈತರಿಂದ 4.7 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸಲಾಗಿತ್ತು. ಪ್ರತಿ ಕ್ವಿಂಟಾಲ್​ಗೆ ರೂ.3,295 ರೂ.ರಂತೆ (ಪ್ರತಿ ರೈತರನಿಂದ ಗರಿಷ್ಠ 75 ಕ್ವಿಂಟಾಲ್) ಖರೀದಿಸಲಾಗಿತ್ತು. ಈ ಬಾರಿ ಕ್ವಿಂಟಲ್ ರಾಗಿಗೆ 3,377 ರೂ. ನಿಗದಿ ಮಾಡಿ ಪ್ರತಿ ರೈತನಿಂದ ಕೇವಲ 20 ಕ್ವಿಂಟಾಲ್ ಮಾತ್ರ ಖರೀದಿಗೆ ನಿಗದಿ ಮಾಡಲಾಗಿತ್ತು. ಅದರಲ್ಲಿಯೂ ಸಣ್ಣ ಮತ್ತು ಅತೀ ಸಣ್ಣ ರೈತರಿಂದ ಮಾತ್ರ ಧಾನ್ಯ ಖರೀದಿಸಲಾಗುತ್ತಿದೆ. 5 ಎಕರೆ ಮೇಲ್ಪಟ್ಟವರಿಗೆ ಸೌಲಭ್ಯ ಸಿಕ್ಕಿಲ್ಲ.

    ಆದರೂ ತಾಲೂಕು ಕಚೇರಿಗಳ ಮುಂಭಾಗ ನೂರಾರು ರೈತರು ರಾಗಿ ಮಾರಾಟಕ್ಕೆ ಸಾಲುಗಟ್ಟಿ ನಿಂತಿದ್ದಾರೆ. ಸೋಮವಾರ ವೆಬ್​ಸೈಟ್ ಸ್ಥಗಿತಗೊಂಡಿದೆ. ಈ ಬಗ್ಗೆ ಕಚೇರಿ ಸಿಬ್ಬಂದಿಯನ್ನು ಪ್ರಶ್ನಿಸಿದಾಗ ನಮಗೂ ಸೂಕ್ತ ಮಾಹಿತಿ ಇಲ್ಲ. 3 ದಿನಗಳ ಬಳಿಕ ದೂರವಾಣಿ ಕರೆ ಮಾಡಿ ಬರುವಂತೆ ಮೊಬೈಲ್ ನಂಬರ್ ಕೊಟ್ಟು ಕಳುಹಿಸುತ್ತಿದ್ದಾರೆ.ಏಕಾಏಕಿ ಬೆಂಬಲ ಬೆಲೆ ಸೇವೆ ಸ್ಥಗಿತ ಮಾಡಿರುವ ಪರಿಣಾಮ ರಾಗಿ ಬೆಳೆದ ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕೂಡಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಅಥವಾ ರಾಜ್ಯ ಸರ್ಕಾರವೇ ಹೆಚ್ಚುವರಿ ರಾಗಿ ಖರೀದಿಗೆ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದರೆ, ಬೀದಿಗೆ ಇಳಿದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.

    ಅನ್ನದಾತನಿಗೆ ಸಂಕಷ್ಟ

    • ಅನಿರ್ವಾಯವಾಗಿ ದಲ್ಲಾಳಿಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಬೇಕು
    • ಕೃಷಿ ಸಾಲ ತೀರಿಸಲು ಸಾಧ್ಯವಾಗದೇ ರೈತ ಕುಟುಂಬಕ್ಕೆ ಆರ್ಥಿಕ ಸಂಕಷ್ಟ
    • ಎಂಎಸ್​ಪಿ ಸೇವೆ ಸರ್ಕಾರ ವರ್ಷದಿಂದ ವರ್ಷಕ್ಕೆ ಇಳಿಸುವ ತಂತ್ರಗಾರಿಕೆ
    • ಬಹುರಾಷ್ಟ್ರೀಯ ಕಂಪನಿಗಳ ಅವಲಂಬನೆ ಮಾಡುವಂತೆ ವೇದಿಕೆ ಸೃಷ್ಟಿ
    • ಪಡಿತರ ಸೇವೆಗೆ ಬೇರೆ ರಾಜ್ಯದಿಂದ ಧಾನ್ಯ ಖರೀದಿಸುವ ಕುತಂತ್ರ

    ರಾಗಿ ಬೆಂಬಲ ಬೆಲೆಗೆ ಖರೀದಿ ಸ್ಥಗಿತ, ಸರ್ಕಾರದ ವಿರುದ್ಧ ಆಕ್ರೋಶ: ಕೈಕೊಟ್ಟ ಆಹಾರ ಇಲಾಖೆ, ಸಂಕಷ್ಟಕ್ಕೀಡಾದ ಬೆಳೆಗಾರರು

    ಕೇಂದ್ರ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ 2.1 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಗೆ ನಿಗದಿ ಮಾಡಿದ್ದು, ಈಗಾಗಲೆ ಪೂರ್ಣಗೊಂಡಿರುವ ಪರಿಣಾಮ ವೆಬ್​ಸೈಟ್​ನಲ್ಲಿ ಸೇವೆ ಸ್ಥಗಿತಗೊಂಡಿದೆ. ಬಿಳಿಜೋಳ ಮತ್ತು ಭತ್ತ ಮುಂದುವರಿದಿದೆ.

    | ಎಚ್.ಆರ್. ವಿಜಯಕುಮಾರ್ ಜಂಟಿ ನಿರ್ದೇಶಕ, ಆಹಾರ ಇಲಾಖೆ

    ಬೆಂಬಲ ಬೆಲೆಗೆ ಧನ್ಯಾಗಳನ್ನು ಖರೀದಿಸಲು ಮುಖ್ಯಮಂತ್ರಿಗಳು ಸ್ಪಂಧಿಸುತ್ತಿಲ್ಲ. ಆದರೆ, ರೈತರನ್ನು 2ನೇ ದರ್ಜೆ ನಾಗರಿಕನಾಗಿ ಮಾಡಲು ಹೊರಟಿರುವುದು ಹಾಸ್ಯಾಸ್ಪದ ವಾಗಿದೆ. ಎಲ್ಲ ರೈತರಿಂದ ಧಾನ್ಯ ಖರೀದಿಸಬೇಕು. ಇಲ್ಲವಾದರೆ, ರಸ್ತೆ ಗಿಳಿದು ಹೋರಾಟ ಮಾಡುತ್ತೇವೆ.

    | ಬಡಗಲಪುರ ನಾಗೇಂದ್ರ ಕರ್ನಾಟಕ ರಾಜ್ಯ ರೈತ ಸಂಘ

    ಪ್ರೀತಿಸುವ ನಾಟಕ, ಐದೇ ತಿಂಗಳಲ್ಲಿ ಲಿವಿಂಗ್ ಟುಗೆದರ್​; ಅವಳಾಗುತ್ತಿದ್ದಂತೆ ಗರ್ಭಿಣಿ, ಇವನು ಪರಾರಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts