More

    ಮಾಯಾಬಜಾರ್​ಗೆ ಇರಲಿ ನಿಮ್ಮ ಬೆಂಬಲ; ಪುನೀತ್​ ಕೋರಿಕೆ

    ‘ಇಲ್ಲಿ ಪ್ರತಿ ಪಾತ್ರಕ್ಕೂ ಆದ್ಯತೆ ಇದೆ, ಚೆನ್ನಾಗಿದ್ದರೆ ಸಪೋರ್ಟ್ ಮಾಡಿ. ಚೆನ್ನಾಗಿಲ್ಲ ಎಂದರೆ.. ಇನ್ನಷ್ಟು ಸಿನಿಮಾ ಮಾಡ್ತೀವಿ. ಒಂದಷ್ಟು ಪ್ರಯೋಗ ಮಾಡ್ತಾ ಹೋಗ್ತೀವಿ..’ ಹೀಗೆಂದು ಭರವಸೆ ಕೊಡುತ್ತಲೇ ತಮ್ಮ ಸಿನಿಮಾದ ಬಗ್ಗೆ ಮಾತನಾಡಿದವರು ಬೇರಾರೂ ಅಲ್ಲ, ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್.

    ‘ಪಿಆರ್​ಕೆ ಪ್ರೊಡಕ್ಷನ್ಸ್’ ನಿರ್ಮಾಣದ ‘ಮಾಯಾಬಜಾರ್’ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಪುನೀತ್ ರಾಜ್​ಕುಮಾರ್, ‘ಈ ಚಿತ್ರದ ಹಾಡೊಂದರಲ್ಲಿ ನಾನು ಹೆಜ್ಜೆ ಹಾಕಿದ್ದೇನೆ. ಆ ಗೀತೆಗೆ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಹಾಡಿದರೆ ಚೆನ್ನಾಗಿರುತ್ತೆ ಅಂದುಕೊಂಡು ಹಾಡಿಸಿದ್ದೇವೆ’ ಎಂದರು. ‘ಪಿಆರ್​ಕೆ ಅಂದರೆ, ಪಾರ್ವತಮ್ಮ ರಾಜ್​ಕುಮಾರ್. ಪುನೀತ್ ರಾಜ್​ಕುಮಾರ್ ಎನ್ನುವುದು ಪ್ರೆಸೆಂಟ್ ಅಷ್ಟೇ. ನಮ್ಮ ‘ಪಿಆರ್​ಕೆ ಪ್ರೊಡಕ್ಷನ್ಸ್’ನಲ್ಲಿ ಮೊದಲು ‘ಕವಲುದಾರಿ’ ಶುರುವಾಯ್ತು, ಅದಕ್ಕೆ ಸಕ್ಸಸ್ ಸಿಕ್ತು. ಅದೊಂದು ಹೆಮ್ಮೆ. ಮೊದಲ ಸಿನಿಮಾ ಜತೆಗೇ ಈ ಕಥೆ ಕೇಳಿದಾಗ ಇಷ್ಟ ಆಯ್ತು. ನಿರ್ದೇಶಕ ರಾಧಾಕೃಷ್ಣ ರೆಡ್ಡಿ ಚೆನ್ನಾಗಿ ಕಥೆ ಮಾಡಿಕೊಂಡಿದ್ದರು. ಇದರಲ್ಲಿನ ಒಂದು ಪ್ರಮುಖ ಪಾತ್ರ ಯಾರಿಂದ ಮಾಡಿಸುವುದು ಎಂಬ ಪ್ರಶ್ನೆ ಇತ್ತು. ‘ರಾಜಕುಮಾರ’ ಚಿತ್ರೀಕರಣ ವೇಳೆ ಪ್ರಕಾಶ್ ರಾಜ್ ಬಳಿ, ನಾನೊಂದು ಪ್ರೊಡಕ್ಷನ್ಸ್ ಶುರು ಮಾಡುತ್ತಿದ್ದೇನೆ ಎಂದಿದ್ದೆ. ಅದಕ್ಕವರು, ನಿಮ್ಮ ಚಿತ್ರದಲ್ಲಿ ಪಾತ್ರ ಇದ್ದರೆ ಕಳಿಸಿ, ಕಥೆ ಕೇಳ್ತೀನಿ ಅಂದಿದ್ದರು. ನಿರ್ದೇಶಕರು ಹೋಗಿ ಕಥೆ ಹೇಳಿದ್ದರು. ಆಗ, ಪ್ರಕಾಶ್ ರಾಜ್, ‘ನನಗೆ ಸಂಭಾವನೆ ಕೊಡಬೇಡಿ, ನಾನು ನಟಿಸ್ತೀನಿ’ ಎಂದಿದ್ದರು ಎಂಬುದನ್ನು ಪುನೀತ್ ಹೇಳಿದರು.

    ‘ಕಥೆ ಕೇಳಿ ಅಪ್ಪು ಸರ್ ಗ್ರೀನ್ ಸಿಗ್ನಲ್ ಕೊಟ್ಟರು. ಇಲ್ಲಿ ಲೀಡ್ ಅಂತ ಯಾವುದೂ ಇಲ್ಲ. ಪ್ರತಿ ಪಾತ್ರಕ್ಕೂ ಆದ್ಯತೆ ಇದೆ. ಜಾಸ್ತಿ ನಗಿಸುತ್ತೆ, ಅಲ್ಲಲ್ಲಿ ಅಳಿಸುತ್ತೆ, ಅದೇ ಕಥೆ..’ ಎಂದರು ನಿರ್ದೇಶಕ ರಾಧಾಕೃಷ್ಣ ರೆಡ್ಡಿ. ‘ಒಳ್ಳೆಯ ಉದ್ದೇಶದೊಂದಿಗೆ ಹೊಸ ಪ್ರಯತ್ನದ ಪ್ರಯೋಗಾತ್ಮಕ ಸಿನಿಮಾ ಮಾಡಿದ್ದೇವೆ. ಮನರಂಜನೆಗಂತೂ ಕೊರತೆ ಇಲ್ಲ’ ಎಂದರು ನಟ ರಾಜ್ ಬಿ. ಶೆಟ್ಟಿ. ‘ನಾನಿಲ್ಲಿ ಜಗತ್ತು ಏನೆಂದು ಗೊತ್ತಿರದ ಮುಗ್ಧ ಕಾಲೇಜು ವಿದ್ಯಾರ್ಥಿನಿಯಾಗಿ ಕಾಣಿಸಿಕೊಂಡಿದ್ದು, ಹಲವು ಮನಸ್ಸುಗಳ ಮಧ್ಯೆ ಆಕೆ ಹೇಗಿರುತ್ತಾಳೆ ಎಂಬುದೇ ಕಥೆ’ ಎಂದರು ನಟಿ ಚೈತ್ರಾ. ಈ ಸಿನಿಮಾಗೆ ಮಿಧುನ್ ಮುಕುಂದನ್ ಸಂಗೀತ ಸಂಯೋಜಿಸಿದ್ದಾರೆ. ನಿರ್ವಪಕಿ ಅಶ್ವಿನಿ ಪುನೀತ್ ರಾಜ್​ಕುಮಾರ್, ನಟ ವಸಿಷ್ಠ ಸಿಂಹ, ಗೋವಿಂದು ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts