More

    ಬಸ್‍ನಲ್ಲಿ ಕಂಪ್ಯೂಟರ್ ತರಬೇತಿಗೆ ಚಾಲನೆ

    ಬೀದರ್: ನಗರದಲ್ಲಿ ಏಕಲ್ ಗ್ರಾಮೋತ್ಥಾನ ಫೌಂಡೇಷನ್‍ನ ಏಕಲ್ ಆನ್ ವ್ಹೀಲ್ಸ್ ಬಸ್‍ನಲ್ಲಿ ಕಂಪ್ಯೂಟರ್ ತರಬೇತಿಗೆ ಯುಗಾದಿ ಹಬ್ಬದ ದಿನ ಚಾಲನೆ ನೀಡಲಾಯಿತು.
    ಸರಸ್ವತಿ ಶಾಲೆಯಲ್ಲಿ ಸಂಸ್ಥೆಯ ಅಧ್ಯಕ್ಷ ಎಸ್.ಬಿ. ಸಜ್ಜನಶೆಟ್ಟಿ ತರಬೇತಿಗೆ ಚಾಲನೆ ನೀಡಿದರು.
    ಏಕಲ್ ಆನ್ ವ್ಹೀಲ್ಸ್ ಬಸ್ ಜಿಲ್ಲೆಯ ಎಲ್ಲ ಗ್ರಾಮಗಳಿಗೆ ಸಂಚರಿಸಿ ಕಂಪ್ಯೂಟರ್ ತರಬೇತಿ ನೀಡಲಿದೆ ಎಂದು ಏಕಲ್ ಆನ್ ವ್ಹೀಲ್ಸ್ ಸಮಿತಿ ಅಧ್ಯಕ್ಷ ರಾಜಕುಮಾರ ಅಗ್ರವಾಲ್ ಹೇಳಿದರು.
    ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹಾಗೂ ಪದವೀಧರರು 22 ದಿನಗಳ ತರಬೇತಿಯ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು.
    ಬಸ್‍ನಲ್ಲಿ 9 ಲ್ಯಾಪ್‍ಟಾಪ್‍ಗಳು ಇವೆ. ಏಕಕಾಲಕ್ಕೆ 18 ಜನರಿಗೆ ಕಂಪ್ಯೂಟರ್ ತರಬೇತಿ ನೀಡಬಹುದಾಗಿದೆ ಎಂದು ಏಕಲ್ ಆನ್ ವ್ಹೀಲ್ಸ್ ಕಂಪ್ಯೂಟರ್ ಶಿಕ್ಷಣ ಪ್ರಭಾರಿ ಸಚ್ಚಿದಾನಂದ ಚಿದ್ರೆ ಹೇಳಿದರು.
    ಬಸ್‍ನಲ್ಲಿ ಒಂದು ದಿನದಲ್ಲಿ ನಾಲ್ಕು ತಂಡಗಳಿಗೆ ತರಬೇತಿ ನೀಡಬಹುದು. ಒಬ್ಬರು ಕಂಪ್ಯೂಟರ್ ತರಬೇತುದಾರ ಹಾಗೂ ಚಾಲಕ ಬಸ್‍ನಲ್ಲಿ ಇರಲಿದ್ದಾರೆ ಎಂದು ತಿಳಿಸಿದರು.
    ಮೊದಲ ಹಂತದಲ್ಲಿ ಬಸ್ ಒಂದು ತಿಂಗಳ ಕಾಲ ಸರಸ್ವತಿ ಶಾಲೆ ಆವರಣದಲ್ಲಿ ಇರಲಿದೆ. ಬಳಿಕ ಜಿಲ್ಲೆಯ ಎಲ್ಲ ಗ್ರಾಮಗಳಿಗೆ ಸಂಚರಿಸಿ ವಿದ್ಯಾರ್ಥಿಗಳು ಹಾಗೂ ಪದವೀಧರರಿಗೆ ಕಂಪ್ಯೂಟರ್ ತರಬೇತಿ ನೀಡಲಿದೆ ಎಂದು ಹೇಳಿದರು.
    ಏಕಲ್ ಬೀದರ್ ಆಂಚಲ್ ಅಧ್ಯಕ್ಷ ರಾಜಕುಮಾರ ಅಳ್ಳೆ, ಪ್ರಮುಖರಾದ ಎಸ್.ಬಿ. ಚಿಟ್ಟಾ, ದತ್ತಾತ್ರೇಯ ಸಗ್ಗಮ್, ಸತ್ಯಪ್ರಕಾಶ, ನಿತಿನ್ ಕರ್ಪೂರ, ರಾಮಕೃಷ್ಣನ್ ಸಾಳೆ, ನಾಗೇಶ ರೆಡ್ಡಿ, ಶ್ರೀಕಾಂತ ಮೋದಿ, ಗೋಪಾಲ್ ಕೃಷ್ಣ, ಶರಣು ಪಾಟೀಲ, ಡಾ. ಲೋಕೇಶ ಹಿರೇಮಠ ಮೊದಲಾದರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts