More

    ಬಿಸಿಲ ತಾಪಕ್ಕೆ ಬಾಡದಿರಲಿ ನಯನಗಳು; ಈ ಟಿಪ್ಸ್​​ ಅನುಸರಿಸಿದ್ರೆ ಕಣ್ಣುಗಳು ಸುರಕ್ಷಿತ!

    ಬೆಂಗಳೂರು: ಬಿಸಿಗಾಳಿಯಿಂದಾಗಿ ಜನರು ಹೈರಾಣವಾಗಿದ್ದಾರೆ. ಮುಂದಿನ ದಿನಗಳಲ್ಲಿ ಬಿಸಿಗಾಳಿಯ ಅಪಾಯ ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ಬಿಸಿಗಾಳಿಯಿಂದಾಗಿ ದೇಹದ ಹಲವು ಭಾಗಗಳು ಬಾಧಿತವಾಗಿವೆ. ಬಿಸಿ ತಾಪಮಾನವು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ನಾವು ಇಂದು ನಿಮ್ಮ ಕಣ್ಣುಗಳಿಗೆ ಉಂಟಾಗುವ ಮಸ್ಯೆ ಮತ್ತು ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಎನ್ನುವ ಮಾಹಿತಿ ನೀಡಲಿದ್ದೇವೆ.

    ಬೇಸಿಗೆಯಲ್ಲಿ ಉರಿ ಬಿಸಿಲಿನಿಂದ ಕಣ್ಣಿಗೆ ಕಾಡುವ ಸಮಸ್ಯೆಗಳು:
    ಬಿಸಿ ತಾಪಮಾನವು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಇದರಿಂದ ದೇಹದಲ್ಲಿ ನೀರಿನ ಕೊರತೆ ಉಂಟಾಗುತ್ತದೆ. ಶಾಖದ ಅಲೆಯು ಅನೇಕ ಜನರ ಕಣ್ಣುಗಳಿಗೆ ಹಾನಿಯನ್ನುಂಟುಮಾಡುತ್ತದೆ.

    ಬಿಸಿಗಾಳಿಯಿಂದ ಕಣ್ಣು ಉರಿಯುವುದು, ಕಣ್ಣು ಕೆಂಪಾಗುವುದು, ಒಣಗುವುದು ಮುಂತಾದ ಸಮಸ್ಯೆಗಳು ಉದ್ಭವಿಸುತ್ತವೆ.

    ಬಲವಾದ ಸೂರ್ಯನ ಕಿರಣಗಳಿಂದ ಕಣ್ಣಿನ ಸೋಂಕಿನ ಅಪಾಯವೂ ಇದೆ. ಸೂರ್ಯನ ಬೆಳಕು ಕಣ್ಣಿನ ಕಾರ್ನಿಯಾವನ್ನು ಹಾನಿಗೊಳಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ.

    ಶಾಖದ ಅಲೆಯ ಜತೆಗೆ, ಧೂಳು ಮತ್ತು ಕೊಳಕುಗಳಿಂದಲೂ ರಕ್ಷಣೆ ಅತ್ಯಗತ್ಯ. ಇಲ್ಲದಿದ್ದರೆ ಕಣ್ಣಿನಲ್ಲಿ ಅಲರ್ಜಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

    ಬೆಸಿಗೆಯಲ್ಲಿ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

    ಬೇಸಿಗೆಯಲ್ಲಿ ಹೊರಗೆ ಹೋಗುವವರು ಸನ್ ಗ್ಲಾಸ್ ಧರಿಸಬೇಕು

    ಕಣ್ಣುಗಳನ್ನು ಮುಟ್ಟುವ ಮೊದಲು ಕೈಗಳನ್ನು ತೊಳೆಯಬೇಕು

    ದಿನಕ್ಕೆ ಎರಡರಿಂದ ಮೂರು ಬಾರಿ ಕಣ್ಣುಗಳನ್ನು ತೊಳೆಯಿರಿ

    ದೇಹವನ್ನು ಹೈಡ್ರೀಕರಿಸಲು ಸಾಕಷ್ಟು ನೀರು ಕುಡಿಯಿರಿ

    ತರಕಾರಿ, ಹಣ್ಣು, ಜ್ಯೂಸ್​​ ಸೇವಿಸುತ್ತೀರಿ

    ಕಣ್ಣಿನ ತುರಿಕೆ ಉಂಟಾದಲ್ಲಿ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಿರಿ.

    ಬಿಸಿಲೋ ಬಿಸಿಲು…ರಣ ಬಿಸಿಲಿನಲ್ಲಿ ಶಾಖದ ಹೊಡೆತ ತಡೆಗಟ್ಟಲು ಹೀಗೆ ಮಾಡಿ…

    ಗೋಡೆ ಮೇಲೆ ಹಲ್ಲಿ ಕಂಡರೆ ಭಯಪಡಬೇಡಿ..ಹೀಗೆ ಮಾಡಿ ಮತ್ತೆ ಬರೋದಿಲ್ಲ..!

    ವಾರಕ್ಕೆ ಒಮ್ಮೆ ನುಗ್ಗೆಕಾಯಿ ಸಾಂಬರ್ ತಿನ್ನಬೇಕಂತೆ, ಆದ್ರೆ ಅತಿಯಾದ ಸೇವನೆ ಆರೋಗ್ಯಕ್ಕೆ ಅಪಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts