More

    ಪ್ರಭಾಸ್​ ‘ಸಲಾರ್’ ಸಿನಿಮಾಕ್ಕೆ ಪ್ರಶಾಂತ್​ ನೀಲ್​ ಆ್ಯಕ್ಷನ್​ ಕಟ್; ಹೊಂಬಾಳೆ ಫಿಲಂಸ್ ನಿರ್ಮಾಣ

    ಬೆಂಗಳೂರು: ಅಭಿಮಾನಿಗಳ ಕಾತರಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ಪ್ರಶಾಂತ್​ ನೀಲ್​ ನಿರ್ದೇಶನದ ಹೊಸ ಸಿನಿಮಾವನ್ನು ಹೊಂಬಾಳೆ ಫಿಲಂಸ್​ ಘೋಷಣೆ ಮಾಡಿದೆ. ಈ ಮೂಲಕ ಸಲಾರ್ ಶೀರ್ಷಿಕೆಯ ಸಿನಿಮಾದಿಂದ ಪ್ರಭಾಸ್​ ಮತ್ತೊಂದು ಪ್ಯಾನ್​ ಇಂಡಿಯಾ ಸಿನಿಮಾಕ್ಕೆ ನಾಯಕರಾಗುತ್ತಿದ್ದಾರೆ.

    ಇದನ್ನೂ ಓದಿ: ಅಕ್ಕಿನೇನಿ ನಾಗಾರ್ಜುನ್​ ಕಿರಿಯ ಪುತ್ರನ ಚಿತ್ರದಲ್ಲಿ ಮಂಗಳೂರು ಬೆಡಗಿ…

    ಸದ್ಯ ಪೋಸ್ಟರ್​ ಮತ್ತು ಶೀರ್ಷಿಕೆಯನ್ನು ಬಿಡುಗಡೆ ಮಾಡಿಕೊಂಡಿರುವ ತಂಡ, ಈ ಚಿತ್ರವನ್ನು ಇಂಡಿಯನ್​ ಸಿನಿಮಾ ಎಂದು ಘೋಷಿಸಿಕೊಂಡಿದೆ. ಕನ್ನಡದ ಜತೆಗೆ ಭಾರತದ ಹತ್ತಾರು ಭಾಷೆಗಳಲ್ಲಿ ಈ ಸಿನಿಮಾವನ್ನು ತೆರೆಗೆ ತರುವ ಬಗ್ಗೆಯೂ ಈಗಾಗಲೇ ನಿರ್ಮಾಣ ಸಂಸ್ಥೆ ಹೇಳಿಕೊಂಡಿದ್ದು, 100 ಕೋಟಿಗೂ ಅಧಿಕ ಬಜೆಟ್​ನಲ್ಲಿ ಈ ಸಿನಿಮಾ ಮೂಡಿಬರಲಿದೆ.

    ಅಂದಹಾಗೆ, ಕೆಜಿಎಫ್​ 2 ಸಿನಿಮಾದ ಕೊನೇ ಹಂತದ ಕೆಲಸಗಳಲ್ಲಿರುವ ನಿರ್ದೇಶಕ ಪ್ರಶಾಂತ್​ ನೀಲ್​, ಸಲಾರ್ ಚಿತ್ರವನ್ನು 2021ರ ಜನವರಿಯಿಂದ ಶೂಟಿಂಗ್​ ಆರಂಭಿಸಲಿದ್ದಾರೆ. ಹಾಗಾದರೆ, ಏನಿದು ಸಲಾರ್? ಅಷ್ಟಕ್ಕೂ ಸಲಾರ್ ಎಂಬುದು ಉರ್ದು ಪದ. ಕನ್ನಡದಲ್ಲಿ ಸಲಾರ್ ಎಂದರೆ ನಾಯಕ ಎಂದರ್ಥ.

    ‘ದಿ ಮೋಸ್ಟ್ ವೈಲೆಂಟ್ ಮೆನ್, ಕಾಲ್ಡ್​ ಒನ್​ ಮ್ಯಾನ್.. ದಿ ಮೋಸ್ಟ್ ವೈಲೆಂಟ್​..’ ಎಂಬ ಅಡಿಬರಹವೂ ಕುತೂಹಲ ಮೂಡಿಸಿದ್ದು, ಈ ಸಿನಿಮಾ ಉಗ್ರಂ ಚಿತ್ರದ ರಿಮೇಕ್​ ಎಂದೇ ಹೇಳಲಾಗುತ್ತಿದೆ. 2014ರಲ್ಲಿ ಉಗ್ರಂ ಸಿನಿಮಾ ಬಿಡುಗಡೆಯಾದಾಗಲೇ ಅದರ ರಿಮೇಕ್​ನಲ್ಲಿ ಪ್ರಭಾಸ್ ನಟಿಸಲಿದ್ದಾರೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಆರು ವರ್ಷಗಳ ಬಳಿಕ ಆ ಸುದ್ದಿ ನಿಜವಾಗುತ್ತಿದೆ ಎಂದೇ ಹೇಳಲಾಗುತ್ತಿದೆ. ಈ ಬಗ್ಗೆ ಇನ್ನಷ್ಟೇ ಚಿತ್ರತಂಡ ಅಧಿಕೃತವಾಗಿ ಹೇಳಿಕೊಳ್ಳಬೇಕಿದೆ.

    ಇದನ್ನೂ ಓದಿ: ನರೇಂದ್ರ ಮೋದಿ ಅವರನ್ನು ಹಿಂದಿಕ್ಕಿದ ಸುಶಾಂತ್​ ಸಿಂಗ್​ ರಜಪೂತ್​ …

    ವಿಜಯ್​ ಕಿರಗಂದೂರು ಚಿತ್ರಕ್ಕೆ ಬಂಡವಾಳ ಹೂಡಲಿದ್ದು, ಸ್ಟಾರ್ ಕಲಾವಿದರ ದಂಡೇ ಚಿತ್ರದಲ್ಲಿರಲಿದೆ. ಸದ್ಯ ಪ್ರಭಾಸ್ ಕೈಯಲ್ಲಿ ಪ್ರಸ್ತುತ ಮೂರು ಸಿನಿಮಾಗಳಿವೆ. ಅವುಗಳಲ್ಲಿ ರಾಧೆ ಶ್ಯಾಮ್​ ಬಹುತೇಕ ಮುಕ್ತಾಯದ ಹಂತದಲ್ಲಿದ್ದು, ಅದಾದ ಬಳಿಕ ಸಲಾರ್ ಚಿತ್ರ ಕೈಗೆತ್ತಿಕೊಳ್ಳಲಿದ್ದಾರೆ. ಜತೆಯಲ್ಲಿ ಆದಿಪುರುಷ್ ಮತ್ತು ನಾಗ್​ ಅಶ್ವಿನ್​ ನಿರ್ದೇಶನದ ಸಿನಿಮಾದ ಭಾಗವಾಗಲಿದ್ದಾರೆ.

    ಸಾರಾ ಮೇಲೆ ಕೂಗಾಡಿದ್ದೇಕೆ ಹಿರಿಯ ನಿರ್ದೇಶಕ ಡೇವಿಡ್​ ಧವನ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts