More

    ಮೋದಿ ಉದ್ಘಾಟಿಸಿದ ಈ ಸುರಂಗ ಮಾರ್ಗದಲ್ಲಿ ಭಾನುವಾರ ಏನಾಯ್ತು ಗೊತ್ತಾ?!

    ರೋಹ್ಟಂಗ್: ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿರುವ, ವಿಶ್ವದಲ್ಲೇ ಅತಿ ಎತ್ತರದಲ್ಲಿರುವ ಸುರಂಗ ಮಾರ್ಗ ಎಂಬ ಖ್ಯಾತಿ ಪಡೆದಿರುವ ಅಟಲ್​ ಟನೆಲ್ ಹೈವೇ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ರೋಹ್ಟಂಗ್​ನ ಈ ಸುರಂಗ ಮಾರ್ಗ ಅತಿ ಎತ್ತರದಲ್ಲಿರುವಂಥದ್ದಷ್ಟೇ ಅಲ್ಲ, ಅತಿವಿಶಿಷ್ಟವಾಗಿದ್ದು ಕೂಡ. ಅಂಥ ಸುರಂಗ ಮಾರ್ಗದಲ್ಲಿ ಭಾನುವಾರ ಇದೇ ಮೊದಲು ಎಂಬಂಥ ವಿದ್ಯಮಾನ ದಾಖಲಾಗಿದೆ.

    ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್​ 3ರಂದು ಈ ಸುರಂಗ ಮಾರ್ಗವನ್ನು ಉದ್ಘಾಟಿಸಿದ್ದರು. ಆ ಬಳಿಕ ಇದು ಮನಾಲಿ ಲೇಹ್​ ಹೈವೇನ ಟೂರಿಸ್ಟ್​ ಸ್ಪಾಟ್ ಆಗಿ ಪರಿಣಮಿಸಿತ್ತು. ಈ ಸುರಂಗ ಮಾರ್ಗದಲ್ಲಿ ಇದುವರೆಗಿನ ಅತ್ಯಧಿಕ ಎಂಬಷ್ಟು ವಾಹನಗಳು ಭಾನುವಾರ ಹಾದುಹೋಗಿವೆ. ಭಾನುವಾರವೊಂದೇ ದಿನ ಎರಡೂ ಕಡೆಯದ್ದು ಸೇರಿ ಒಟ್ಟು 5,450 ವಾಹನಗಳು ಈ ಸುರಂಗ ಮಾರ್ಗದಲ್ಲಿ ಹಾದುಹೋಗಿವೆ. ಇದು ಈ ಸುರಂಗ ಮಾರ್ಗ ಮೂಲಕ ಹಾದುಹೋದ ವಾಹನಗಳ ಪ್ರಮಾಣದಲ್ಲೇ ಅತಿ ಗರಿಷ್ಠ ಎಂದು ದಾಖಲೆ ಹೇಳಿದೆ. ಭಾನುವಾರ ಮನಾಲಿಯಿಂದ ಲಹೌಲ್ ಕಡೆಗೆ 2,800 ಮತ್ತು ಲಹೌಲ್​ನಿಂದ ಮನಾಲಿ ಕಡೆಗೆ 2,650 ವಾಹನಗಳು ಹಾದುಹೋಗಿವೆ.

    ಈ ಸುರಂಗ ಮಾರ್ಗ ನಿರ್ಮಾಣಕ್ಕೆ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಅಂದರೆ 2000ನೇ ಇಸವಿಯ ಜೂನ್​ 3ರಂದು ನಿರ್ಣಯಿಸಲಾಗಿತ್ತು. ಹೀಗಾಗಿ 2019ರಲ್ಲಿ ಕೇಂದ್ರದ ಸಚಿವ ಸಂಪುಟ ಅಟಲ್​ ಬಿಹಾರಿ ವಾಜಪೇಯಿ ಅವರ ಗೌರವಾರ್ಥ ಈ ಸುರಂಗ ಮಾರ್ಗಕ್ಕೆ ಅಟಲ್ ಹೆಸರಿಡಲು ನಿರ್ಧಾರ ತಳೆದಿತ್ತು. (ಏಜೆನ್ಸೀಸ್)

    ‘ಸೆಕ್ಸ್​ಪರ್ಟ್’​ ಇನ್ನಿಲ್ಲ: ಇವರಿದ್ದಾಗ ಸಿಕ್ಕಿತ್ತು ಅದೆಷ್ಟೋ ಮಂದಿಗೆ ಸಾಂತ್ವನ-ಸಮಾಧಾನ…

    10 ವರ್ಷದಿಂದ ಕತ್ತಲ ಕೋಣೆಯಲ್ಲೇ ಇದ್ದ ಒಡಹುಟ್ಟಿದವರು! ಮಾಟ ಮಂತ್ರವೇ ಕಾರಣವೆಂದ ಅಪ್ಪ!

    54ರ ಫಾಸ್ಟರ್ ಜತೆ ಏನಾಯ್ತು? ಅಜ್ಞಾತ ಸ್ಥಳದಿಂದಲೇ ವಿಡಿಯೋ ಕಳಿಸಿದ್ಳು 24ರ ಯುವತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts