More

    10 ವರ್ಷದಿಂದ ಕತ್ತಲ ಕೋಣೆಯಲ್ಲೇ ಇದ್ದ ಒಡಹುಟ್ಟಿದವರು! ಮಾಟ ಮಂತ್ರವೇ ಕಾರಣವೆಂದ ಅಪ್ಪ!

    ರಾಜಕೋಟ್​: ಅಣ್ಣ, ತಂಗಿ ಮತ್ತು ತಮ್ಮ ಪ್ರಪಂಚದಿಂದ ದೂರಾಗಿ, 10 ವರ್ಷಗಳ ಕಾಲ ಕತ್ತಲ ಕೋಣೆಯಲ್ಲೇ ಬದುಕಿದ್ದು, ಇದೀಗ ಅವರ ರಕ್ಷಣೆ ಮಾಡಲಾಗಿದೆ. ಪದವೀದರರಾಗಿರುವ ಈ ಒಡಹುಟ್ಟಿದವರ ಪರಿಸ್ಥಿತಿಗೆ ಕಾರಣವೇನು ಎನ್ನುವುದು ಮಾತ್ರ ಇನ್ನೂ ತಿಳಿದುಬಂದಿಲ್ಲ.

    ಇದನ್ನೂ ಓದಿ: ಆಟಿಕೆಯ ಟ್ರ್ಯಾಕ್ಟರ್​ ಹಿಡಿದು ಹೋರಾಟ ನಡೆಸಿದ ಕಾಂಗ್ರೆಸ್​! ರಾಹುಲ್​ ಹೆಸರಿನ ಪಾಪುವನ್ನು ವಿದೇಶದಿಂದ ವಾಪಾಸು ಕರೆಸಲು ಈ ಆಟಿಕೆ ಎಂದ ಬಿಜೆಪಿ

    ರಾಜಸ್ಥಾನದ ರಾಜಕೋಟ್​ನಲ್ಲಿ ಇಂತಹ ಒಂದು ವಿಚಿತ್ರ ಗೃಹಬಂಧನವಾಗಿತ್ತು. ಅಮರೇಶ್​ ಮೆಹ್ತಾ (42), ಮೇಘನಾ ಮೆಹ್ತಾ (39) ಮತ್ತು ಭವೇಶ್​ ಮೆಹ್ತಾ (30) ಗೃಹಬಂಧನಕ್ಕೆ ಒಳಗಾದ ಸಹೋದರರು. ಇವರ ಬಗ್ಗೆ ಮಾಹಿತಿ ಪಡೆದ ಸಾಥಿ ಸೇವಾ ಎನ್​ಜಿಒದ ಕಾರ್ಯಕರ್ತರು ಅವರ ರಕ್ಷಣೆ ಮಾಡಿದ್ದಾರೆ. ಬೆಳಕೇ ಇಲ್ಲದ ಕೋಣೆಯಲ್ಲಿ ಅತ್ಯಂತ ಹೀನಾಯ ಸ್ಥಿತಿಯಲ್ಲಿ ಅವರಿದ್ದಿದ್ದಾಗಿ ಹೇಳಲಾಗಿದೆ.

    ಮಕ್ಕಳ ರಕ್ಷಣೆಯಾಗುತ್ತಿರುವುದನ್ನು ಕೇಳಿ ಸ್ಥಳಕ್ಕೆ ಬಂದ ಅವರ ತಂದೆ ನವೀನ್​ಭಾಯ್​ ಮೆಹ್ತಾ, ಮಕ್ಕಳ ಬಗ್ಗೆ ಕೆಲವು ಮಾಹಿತಿ ಹಂಚಿಕೊಂಡಿದ್ದಾರೆ. ಅವರ ಹಿರಿಯ ಮಗ ಅಮರೀಶ್ ಬಿಎ, ಎಲ್‌ಎಲ್‌ಬಿ ಪದವಿಗಳೊಂದಿಗೆ ಅಭ್ಯಾಸ ಮಾಡಿದ್ದ. ಮಗಳು ಮೇಘನಾ ಸೈಕಾಲಜಿಯಲ್ಲಿ ಎಂ.ಎ. ಪದವಿ ಪಡೆದಿದ್ದಾಳೆ ಮತ್ತು ಅವರ ಕಿರಿಯ ಮಗ ಭವೇಶ್ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಹಾಗೂ ಉತ್ತಮ ಕ್ರಿಕೆಟ್ ಆಟಗಾರರಾಗಿದ್ದರು. 1986ರಲ್ಲಿ ಅವರ ತಾಯಿ ಅನಾರೋಗ್ಯದಿಂದ ಅಸುನೀಗಿದ್ದು, ಅದಾದ ನಂತರ ಮೂವರು ಮಕ್ಕಳು ಈ ರೀತಿ ಪ್ರಪಂಚದಿಂದ ದೂರಾಗಿ ಬದುಕುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಪ್ರತಿದಿನ ಅವರಿರುವ ಕೋಣೆಯ ಬಳಿ ಊಟವಿಡುತ್ತಿದೆ. ನನ್ನ ಸಂಬಂಧಿಕರು ಯಾರೋ ಅವರಿಗೆ ಮಾಟ ಮಂತ್ರ ಮಾಡಿಸಿದ್ದಾರೆ ಎನ್ನುವ ಆರೋಪವನ್ನೂ ನವೀನ್​ಭಾಯ್​ ಮಾಡಿದ್ದಾರೆ.

    ಇದನ್ನೂ ಓದಿ: ಸರ್ಪೈಸ್​ ನೀಡಲು ಮನೆಗೆ ಬಂದ ಗಂಡನಿಗೆ ಕಾದಿತ್ತು ಬಿಗ್​ ಶಾಕ್​! ಹೆಂಡತಿಯ ಇನ್ನೊಂದು ರೂಪ ನೋಡಿದ ಗಂಡ ಮಾಡಿದ್ದೇನು?

    ಮಕ್ಕಳ ಈ ಸ್ಥಿತಿಗೆ ಕಾರಣ ತಂದೆಯೇ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ನವೀನ್​ಭಾಯ್​ಗೆ ಮಾಟ ಮಂತ್ರದ ಬಗ್ಗೆ ಹೆಚ್ಚು ನಂಬಿಕೆಯಿದೆ. ನನ್ನ ಮಕ್ಕಳಿಗೆ ಯಾರಾದರೂ ಮಾಟ ಮಂತ್ರ ಮಾಡಿಬಿಡುತ್ತಾರೆ ಎನ್ನುವ ಭಯದಿಂದ ಆತ ಈ ರೀತಿ ಅವರನ್ನು ಕೂಡಿ ಹಾಕಿದ್ದಾನೆ ಎಂದು ಗ್ರಾಮಸ್ಥರು ದೂರಿದ್ದಾರೆ. ಸದ್ಯ ಮೂವರನ್ನು ರಕ್ಷಿಸಲಾಗಿದ್ದು, ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. (ಏಜೆನ್ಸೀಸ್​)

    ಡಾಕ್ಟರ್​ ಕನಸು ಕಟ್ಟಿದ್ದ ಯುವತಿ ಆತ್ಮಹತ್ಯೆ; ಶೇ. 96 ಅಂಕ ತೆಗೆದರೂ ಸಿಗಲಿಲ್ಲ ಸರ್ಕಾರಿ ಸೀಟು!

    PHOTO GALLERY: ರಮೇಶ್​ ಅರವಿಂದ್​ ಮಗಳ ಮದುವೆ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts