More

    ಸೂರ್ಯನ ಸನಿಹದಲ್ಲಿ ‘ನಾಸಾ’ ಕ್ಲಿಕ್ಕಿಸಿದ ಫೋಟೋ…

    ವಾಷಿಂಗ್ಟನ್‌: ಸೂರ್ಯನಿಗೆ ಅತ್ಯಂತ ಹತ್ತಿರದಿಂದ ತೆಗೆದಿರುವ ಚಿತ್ರಗಳನ್ನು ನಾಸಾ ತನ್ನ ಟ್ವಿಟರ್‌ ಖಾತೆಯಲ್ಲಿ ಷೇರ್‌ ಮಾಡಿದೆ. ಈ ಚಿತ್ರವನ್ನು ಸೂರ್ಯನಿಂದ ಸುಮಾರು 4.8 ಕೋಟಿ ಕಿಲೋ ಮೀಟರ್‌ ದೂರದಿಂದ ಕ್ಲಿಕ್ಕಿಸಲಾಗಿದೆ.

    ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ) ಹಾಗೂ ಯೂರೋಪಿಯನ್‌ ಬಾಹ್ಯಾಕಾಶ ಏಜೆನ್ಸಿಗಳ ಜಂಟಿ ಸಹಯೋಗದಲ್ಲಿ ಸೂರ್ಯನ ಸುತ್ತ ಗಿರಕಿ ಹೊಡೆಯುವ ಆರ್ಬಿಟರ್‌ನಿಂದ ಈ ಫೋಟೋ ತೆಗೆದುಕೊಳ್ಳಲಾಗಿದೆ.

    ಸಂಪೂರ್ಣ ಸೌರಮಂಡಲದಲ್ಲಿನ ವಾತಾವರಣವನ್ನು ಸೂರ್ಯನ ತಾಪಮಾನ ಹೇಗೆ ನಿಯಂತ್ರಿಸುತ್ತದೆ ಎಂದು ಅರಿಯಲು ವಿಜ್ಞಾನಿಗಳಿಗೆ ಈ ಚಿತ್ರಗಳು ನೆರವಾಗಲಿವೆ. ಈ ಫೋಟೋದ ಆಧಾರದ ಮೇಲೆ ಭೂಮಿ ಹಾಗೂ ಸೂರ್ಯನ ಕುರಿತಂತೆ ಹಲವಾರು ಸಂಶೋಧನೆಗಳು ನಡೆಯಲಿವೆ ಎಂದಿದ್ದಾರೆ ಸಂಶೋಧಕರು.

    ಅದೇ ರೀತಿ ಸೂರ್ಯನ ಕುರಿತಾದ ಹಲವಾರು ಕುತೂಹಲಗಳಿಗೆ ತೆರೆ ಬೀಳಲಿದ್ದು, ಈ ಚಿತ್ರ ನಮಗೆ ಹಲವಾರು ಪ್ರಶ್ನೆಗಳಿಗೆ ಉತ್ತರ ಕೊಡಲಿದೆ ಎಂದಿದ್ದಾರೆ.

    ಈ ಲಿಂಕ್‌ ಕ್ಲಿಕ್‌ ಮಾಡಿದರೆ ಸಂಪೂರ್ಣ ವಿವರ ಪಡೆಯಬಹುದು.
    https://www.nasa.gov/solarorbiterfirstlight/

    ಕ್ವಾರಂಟೈನ್‌ ನಿಯಮ ಉಲ್ಲಂಘಿಸಿ ಪ್ರತಾಪ್ ಎಸ್ಕೇ‍ಪ್‌! ದಾಖಲಾಯ್ತು ಇನ್ನೊಂದು ಎಫ್‌ಐಆರ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts