More

    ಸಿಡಿಯಿತು ಸೂರ್ಯನ ಭಾಗ! ಅತ್ಯಪರೂಪದ ವಿದ್ಯಮಾನ, ವಿಜ್ಞಾನಿಗಳಿಂದ ಕಾರಣ ಶೋಧ

    ನವದೆಹಲಿ: ಖಗೋಳಶಾಸ್ತ್ರಜ್ಞರನ್ನು ಸದಾ ಬೆರಗುಗೊಳಿಸುವ ನಕ್ಷತ್ರವಾದ ಸೂರ್ಯ ಇದೀಗ ಇನ್ನೊಂದು ಭಾರಿ ಆಸಕ್ತಿದಾಯಕ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. ಸೂರ್ಯನ ಒಂದು ದೊಡ್ಡ ಭಾಗ ಸಿಡಿದು ಅದರ ಉತ್ತರ ಧ್ರುವದಲ್ಲಿ ಸುಂಟರಗಾಳಿಯಂಥ ಬೃಹತ್ ಸುಳಿ ಸೃಷ್ಟಿಯಾಗಿದೆ. ಈ ರೀತಿಯಲ್ಲಿ ಸೂರ್ಯನ ಭಾಗ ತುಂಡಾಗಿದ್ದಕ್ಕೆ ಕಾರಣವನ್ನು ವಿಜ್ಞಾನಿಗಳು ವಿಶ್ಲೇಷಿಸುತ್ತಿದ್ದಾರೆ. ಈ ವಿದ್ಯಮಾನದ ವೀಡಿಯೊ ದೃಶ್ಯ ಬಾಹ್ಯಾಕಾಶ ವಿಜ್ಞಾನಿಗಳ ಸಮುದಾಯವನ್ನು ಬೆರಗುಗೊಳಿಸಿದೆ.

    ಜೇಮ್ಸ್​ ವೆಬ್​ನಿಂದ ಸೆರೆ: ಈ ಅತ್ಯಪರೂಪದ ವಿದ್ಯಮಾನವನ್ನು ನಾಸಾದ ಜೇಮ್ಸ್​ ವೆಬ್ ಟೆಲಿಸ್ಕೋಪ್ ಸೆರೆ ಹಿಡಿದಿದೆ. ಬಾಹ್ಯಾಕಾಶ ಹವಾಮಾನ ತಜ್ಞೆ ಡಾ.ತಮಿತಾ ಸ್ಕೋವ್ ಕಳೆದ ವಾರ ಅದನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದರು.

    8 ತಾಸು ಬೇಕು: ಸುಂಟರಗಾಳಿಯಂಥ ಈ ಸುಳಿಯು ಅಂದಾಜು 60 ಡಿಗ್ರಿ ಅಕ್ಷಾಂಶದಲ್ಲಿ ಧ್ರುವವನ್ನು ಸುತ್ತಲು ಅಂದಾಜು 8 ತಾಸು ಬೇಕಾಗುತ್ತದೆ ಎಂದು ಡಾ. ಸ್ಕೋವ್ ತಿಳಿಸಿದ್ದಾರೆ.

    ಅಭೂತಪೂರ್ವ ಘಟನೆ: ಈ ಬಗೆಯ ‘ಸುಳಿ’ಯನ್ನು ಯಾವತ್ತೂ ಗಮನಿಸಿರಲಿಲ್ಲ ಎಂದು ಅಮೆರಿಕದ ನ್ಯಾಷನಲ್ ಸೆಂಟರ್ ಫಾರ್ ಅಟ್ಮಾಸ್ಪಿಯರಿಕ್ ರೀಸರ್ಚ್​ನ ಸೌರ ಭೌತ ವಿಜ್ಞಾನಿ ಸ್ಕಾಟ್ ಮೆಕಂತೋಶ್ ಹೇಳಿದ್ದಾರೆ. ಅವರು ಹಲವಾರು ದಶಕಗಳಿಂದ ಸೂರ್ಯನನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ರವಿಯ ಈ ಅತ್ಯಪರೂಪದ ವಿದ್ಯಮಾನದ ಬಗ್ಗೆ ವಿಶ್ಲೇಷಣೆ ನಡೆಸುತ್ತಿರುವ ವಿಜ್ಞಾನಿಗಳು ಸ್ಪಷ್ಟ ಚಿತ್ರಣ ಪಡೆಯಲು ಹೆಚ್ಚೆಚ್ಚು ವಿವರಗಳನ್ನು ಕಲೆ ಹಾಕುತ್ತಿದ್ದಾರೆ.

    ಭೂಮಿ ಮೇಲೆ ಪರಿಣಾಮ
    ಪ್ರಾಮಿನೆನ್ಸ್ ಎಂದು ಕರೆಯಲಾಗುವ ಸೌರಜ್ವಾಲೆಗಳನ್ನು ಸೂರ್ಯ ಹೊರಸೂಸು ತ್ತಿದ್ದು, ಅದು ಕೆಲವೊಮ್ಮೆ ಭೂಮಿ ಮೇಲಿನ ಸಂವಹನ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿ ಸುತ್ತದೆ. ಹೀಗಾಗಿ ಸೂರ್ಯನ ಇತ್ತೀಚಿನ ವಿದ್ಯಮಾನದ ಬಗ್ಗೆ ವಿಜ್ಞಾನಿಗಳು ಹೆಚ್ಚು ಕಳವಳಗೊಂಡಿದ್ದಾರೆ. ಪ್ರಾಮಿನೆನ್ಸ್ ಎಂಬುದು ಸೂರ್ಯನ ಮೇಲ್ಮೈಯಿಂದ ಹೊರಗೆ ಚಾಚುವ ಬೃಹತ್ ಉಜ್ವಲ ಅಂಶವಾಗಿದೆ ಎನ್ನುವುದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ವಿವ ರಣೆಯಾಗಿದೆ. ಹಿಂದೆಯೂ ಹಲವು ಬಾರಿ ಇಂಥ ಘಟನೆಗಳು ನಡೆದಿವೆ. ಆದರೆ, ಈ ಬಾರಿಯ ವಿದ್ಯಮಾನ ವಿಜ್ಞಾನಿಗಳನ್ನು ನಿಬ್ಬೆರಗಾಗಿಸಿದೆ.

    ಸಿರಿಯಾ ಭೂಕಂಪದ ಅವಶೇಷಗಳಡಿ ಜನಿಸಿದ ಮಗುವಿಗೆ ಅಯಾ ಎಂದು ನಾಮಕರಣ! ಹೆಸರಿನ ಅರ್ಥ ಹೀಗಿದೆ….

    ಸ್ನೇಹಿತೆಯ ಪತಿಯನ್ನೇ ಬಲೆಗೆ ಬೀಳಿಸಿಕೊಂಡ್ರಾ? ವಿವಾದದ ಬಗ್ಗೆ ಹನ್ಸಿಕಾ ಕೊಟ್ಟ ಸ್ಪಷ್ಟನೆ ಹೀಗಿದೆ ನೋಡಿ….

    ಏನು ಆಗಲ್ಲ ಅನ್ನೋ ನಂಬಿಕೆ….ಆಸೆಪಟ್ಟು ಪರೋಟ ತಿಂದ ಪಿಯು ವಿದ್ಯಾರ್ಥಿನಿಯ ಬದುಕು ದುರಂತ ಅಂತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts