More

    ಸಿರಿಯಾ ಭೂಕಂಪದ ಅವಶೇಷಗಳಡಿ ಜನಿಸಿದ ಮಗುವಿಗೆ ಅಯಾ ಎಂದು ನಾಮಕರಣ! ಹೆಸರಿನ ಅರ್ಥ ಹೀಗಿದೆ….

    ಅಂಕಾರ: ಕಳೆದ ಸೋಮವಾರ ಸಿರಿಯಾದಲ್ಲಿ ಸಂಭವಿಸಿದ ಭೀಕರ ಭೂಕಂಪದ ಬಳಿಕ ಅವಶೇಷಗಳ ಅಡಿಯಲ್ಲಿ ಜನಿಸಿ, ಪವಾಡ ಸದೃಶ ರೀತಿಯಲ್ಲಿ ಬದುಕುಳಿದ ನವಜಾತ ಹೆಣ್ಣು ಶಿಶುವಿಗೆ ಅಯಾ ಎಂದು ಹೆಸರಿಡಲಾಗಿದ್ದು, ಸರ್ಕಾರದಿಂದ ವಸತಿ ವ್ಯವಸ್ಥೆಯನ್ನು ಮಾಡಲಾಗಿದೆ.

    ಸಿರಿಯಾದ ಜೆಂಡೆರಿಸ್​ನಲ್ಲಿರುವ ತಮ್ಮ ಮನೆಯ ಅವಶೇಷಗಳಡಿ ಸಿಲುಕಿ ಮಗುವಿಗೆ ಜನ್ಮ ನೀಡಿದ ತಾಯಿ ಮರುಕ್ಷಣವೇ ಮರಣ ಹೊಂದಿದರು. ಹೊಕ್ಕುಳ ಬಳ್ಳಿಯು ಮೃತ ತಾಯಿಗೆ ಅಂಟಿಕೊಂಡಿರುವ ಸ್ಥಿತಿಯಲ್ಲೇ ಮಗು ಪತ್ತೆಯಾಯಿತು. ಇದೀಗ ಆ ಮಗುವಿಗೆ ಅಯಾ ಎಂದು ಹೆಸರಿಡಲಾಗಿದ್ದು, ಅರೇಬಿಕ್​ ಪ್ರಕಾರ ಅಯಾ ಎಂದರೆ ಪವಾಡ ಎಂದರ್ಥ.

    ಮಗುವಿನ ತಂದೆ ಮತ್ತು ಒಡಹುಟ್ಟಿದವರು ಕೂಡ ಭೀಕರ ಭೂಕಂಪಕ್ಕೆ ಬಲಿಯಾಗಿದ್ದಾರೆ. ಮಗವಿನ ಇಡೀ ಕುಟುಂಬ ನಾಶವಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗು ಡಿಸ್ಚಾರ್ಜ್​ ಆದ ಬಳಿಕ ತಮ್ಮ ಮನೆಗೆ ಕರೆದೊಯ್ಯುವುದಾಗಿ ಮಗುವಿನ ತಂದೆಯ ಅಂಕಲ್​ ಸಲಾಹ್​ ಅಲ್​ ಬದ್ರಾನ್​ ತಿಳಿಸಿದ್ದಾರೆ. ಅವರ ಮನೆಯೂ ಕೂಡ ಭೂಕಂಪಕ್ಕೆ ಧರಶಾಹಿಯಾಗಿದ್ದು, ಸದ್ಯ ಅವರ ಕುಟುಂಬ ಟೆಂಟ್​ನಲ್ಲಿ ವಾಸವಿದೆ.

    ಪುಟ್ಟ ಅಯಾಳ ರಕ್ಷಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕುಸಿದಿರುವ ನಾಲ್ಕು ಅಂತಸ್ತಿನ ಕಟ್ಟಡದ ಅವಶೇಷಗಳ ಮೇಲೆ ಒಬ್ಬ ವ್ಯಕ್ತಿಯು ಧೂಳಿನಿಂದ ಆವೃತವಾದ ಪುಟ್ಟ ಮಗುವನ್ನು ಹಿಡಿದುಕೊಂಡು ಓಡುತ್ತಿರುವುದನ್ನು ದೃಶ್ಯಾವಳಿ ತೋರಿಸುತ್ತದೆ. ಎರಡನೆಯ ವ್ಯಕ್ತಿ ಶೂನ್ಯಕ್ಕಿಂತ ಕಡಿಮೆ ತಾಪಮಾನ ಹಿನ್ನೆಲೆ ನವಜಾತ ಶಿಶುವಿಗೆ ಹೊದಿಕೆಯನ್ನು ಹೊತ್ತುಕೊಂಡು ಮೊದಲನೆಯ ಕಡೆಗೆ ಓಡಿ ಬರುತ್ತಾನೆ. ಆದರೆ, ಮೂರನೆಯವನು ಅವಳನ್ನು ಆಸ್ಪತ್ರೆಗೆ ಕರೆದೊಯ್ಯಲು ಕಾರಿಗಾಗಿ ಕಿರುಚುವುದು ವಿಡಿಯೋದಲ್ಲಿದೆ.

    ಮಗುವನ್ನು ಹತ್ತಿರದ ಆಫ್ರಿನ್​ ಪಟ್ಟಣದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗುವಿನ ಸಣ್ಣ ಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಅತಿಯಾದ ಚಳಿಯಿಂದಾಗಿ ಹೈಪೋಥರ್ಮಿಯಾದಿಂದ ಮಗು ಬಳಲುತ್ತಿದ್ದು ಆಕೆಯನ್ನು ಬೆಚ್ಚಗಿನ ವಾತಾವರಣದಲ್ಲಿಟ್ಟು ಪೋಷಿಸಲಾಗುತ್ತಿದೆ.

    ಸಿರಿಯಾದಲ್ಲಿ ಸೋಮವಾರ 7.8 ತೀವ್ರತೆಯಲ್ಲಿ ಸಂಭವಿಸಿದ ಭೂಕಂಪಕ್ಕೆ ಅನಾಥರಾದ ಅನೇಕ ಮಕ್ಕಳಲ್ಲಿ ಅಯಾ ಕೂಡ ಒಬ್ಬಳು. ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ UNICEF, ಭೂಕಂಪಕ್ಕೆ ಕಾಣೆಯಾದ ಅಥವಾ ಮೃತಪಟ್ಟ ಪೋಷಕರ ಮಕ್ಕಳ ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ಅವರನ್ನು ನೋಡಿಕೊಳ್ಳಲು ಸಾಧ್ಯವಾಗಬಹುದಾದ ವಿಸ್ತೃತ ಕುಟುಂಬ ಸದಸ್ಯರನ್ನು ಪತ್ತೆಹಚ್ಚಲು ಆಸ್ಪತ್ರೆಗಳೊಂದಿಗೆ ಸಮನ್ವಯಗೊಳಿಸುತ್ತಿದೆ ಎಂದು ತಿಳಿಸಿದೆ.

    ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪಕ್ಕೆ ಈವರೆಗೆ 21 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ರಕ್ಷಣ ಕಾರ್ಯ ಭರದಿಂದ ಸಾಗುತ್ತಿದೆ. (ಏಜೆನ್ಸೀಸ್​)

    ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳಲು ಒಳಉಡುಪಿನಲ್ಲಿ 5 ಕೆಜಿ ತೂಕದ ಕಲ್ಲು ಕಟ್ಟಿಕೊಂಡು ಬಂದ ಭೂಪರು!

    ವಿಧಾನಮಂಡಲ ಬಜೆಟ್​ ಅಧಿವೇಶನ ಆರಂಭ: ರಾಜ್ಯಪಾಲರ ಭಾಷಣದ ಪ್ರಮುಖಾಂಶಗಳು ಇಲ್ಲಿವೆ…

    ಅಸಹಜ ಲೈಂಗಿಕ ಕ್ರಿಯೆ, ವರದಕ್ಷಿಣೆ ಕಿರುಕುಳ ಆರೋಪ: ರಾಖಿ ಪತಿ ಆದಿಲ್​ಗೆ ನ್ಯಾಯಾಂಗ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts