More

    ಹೆಲ್ಪ್ ಎ ಚೈಲ್ಡ್ ಟು ಸ್ಟಡಿ ಯೋಜನೆ ಬಡ ವಿದ್ಯಾರ್ಥಿಗಳ ಬಾಳಿನ ಆಶಾಕಿರಣ


    ಮಹಾಲಿಂಗಪುರ: ಹೆಲ್ಪ್ ಎ ಚೈಲ್ಡ್ ಟು ಸ್ಟಡಿ ಯೋಜನೆಯಡಿ ನಿರ್ಗತಿಕ, ಅನಾಥ ಹಾಗೂ ಬಡ ವಿದ್ಯಾರ್ಥಿಗಳ ಬಾಳಿಗೆ ಬೆಳಕು ನೀಡಬೇಕೆಂಬುದೇ ಸಮೀರವಾಡಿ ಕಾರ್ಖಾನೆ ಮಾಲೀಕ ಸಮೀರಭಾಯಿ ಸೋಮೈಯಾ ಹಾಗೂ ಅಮಿತಾ ಬೇನ್ ಸೋಮೈಯಾ ಅವರ ಸದಿಚ್ಛೆಯಾಗಿದೆ ಎಂದು ಗೋದಾವರಿ ಬಯೋರಿಫೈನರೀಜನ ಕಾರ್ಯನಿರ್ವಾಹಕ ನಿರ್ದೇಶಕ ಬಾಲಚಂದ್ರ ಬಕ್ಷಿ ಹೇಳಿದರು.

    ಸಮೀಪದ ಸೈದಾಪುರ-ಸಮೀರವಾಡಿ ಶಿವಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಸಮೀರವಾಡಿ ಸೋಮೈಯಾ ಗ್ರಾಮೀಣ ವಿಕಾಸ ಕೇಂದ್ರ ಹಾಗೂ ಮುಂಬೈ ಸೋಮೈಯಾ ವಿದ್ಯಾವಿಹಾರ ಆಶ್ರಯದಲ್ಲಿ ಹೆಲ್ಪ್ ಎ ಚೈಲ್ಡ್ ಟು ಸ್ಟಡಿ ಯೋಜನೆಯಡಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2001ರಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ 74.5 ಸಾವಿರ ರೂ. ನೀಡಿ ಪ್ರಾರಂಭಿಸಿದ ಈ ಯೋಜನೆಯಡಿ ಇಲ್ಲಿಯವರೆಗೆ ಅಂದಾಜು 11 ಸಾವಿರ ಲಾನುಭವಿ ವಿದ್ಯಾರ್ಥಿಗಳಿಗೆ 7 ಕೋಟಿ 45 ಲಕ್ಷ ರೂ. ವ್ಯಯಿಸಲಾಗಿದೆ. ಸಹಾಯ ನೀಡಿ ನಮ್ಮ ಕರ್ತವ್ಯ ಮುಗಿಯಿತು ಎಂದು ನಾವು ಸುಮ್ಮನಿರುವುದಿಲ್ಲ. ಈ ಯೋಜನೆ ಲಾನುಭವಿಗಳು ಹಣದ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆಯೋ, ಇಲ್ಲವೋ ಎಂಬುದರ ಬಗ್ಗೆ ಗಮನ ಹರಿಸುತ್ತ ಅವರ ಶಿಕ್ಷಣ ಮುಗಿಯುವವರೆಗೂ ನಿರಂತರ ಧನ, ಲ್ಯಾಪ್‌ಟಾಪ್, ಪಠ್ಯಪುಸ್ತಕದ ರೂಪದಲ್ಲಿ ಸಹಾಯ ನೀಡಲಾಗುತ್ತಿದೆ ಎಂದರು.

    ಈ ಯೋಜನೆ ಸಹಾಯದಿಂದ ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆ ಅಲಂಕರಿಸುವ ವಿದ್ಯಾರ್ಥಿಗಳು ಸಹ ಆರ್ಥಿಕ ತೊಂದರೆ ಅನುಭವಿಸುತ್ತಿರುವ ವಿದ್ಯಾರ್ಥಿಗಳಿಗೆ ಸಹಾಯ ಮಾಡಬೇಕೆಂಬುದು ಸಮೀರಭಾಯಿ ಸೋಮೈಯಾ ಹಾಗೂ ಅಮಿತಾ ಬೆನ್ ಸೋಮೈಯಾ ಅವರ ಆಶಯವಾಗಿದೆ. ಕಾರ್ಖಾನೆ ಅಧಿಕಾರಿಗಳು, ಮಜ್ದೂರ ಯೂನಿಯನ್ ಸಂಘ ಹಾಗೂ ಸಿಬ್ಬಂದಿ ಸಹಕಾರದಿಂದ ಈ ಯೋಜನೆ ಅತ್ಯಂತ ಪಾರದರ್ಶಕವಾಗಿ ಜಾರಿ ಮಾಡಲಾಗುತ್ತಿದೆ. ಇಂತಹ ಪಾರದರ್ಶಕ ವ್ಯವಹಾರಕ್ಕೆ ಹೆಸರಾದ ಕಾರ್ಖಾನೆಗೆ ಎಲ್ಲ ಲಾನುಭವಿಗಳ ರೈತರ ಬೆಂಬಲ ಸದಾ ಇರಲಿ ಎಂದರು.

    ಹೆಲ್ಪ್ ಎ ಚೈಲ್ಡ್ ಟು ಸ್ಟಡಿ ಯೋಜನಾಧಿಕಾರಿ ವಿಜಯಕುಮಾರ ಕಣವಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳ ಅರ್ಹತಾ ಪರೀಕ್ಷೆ, ವೈಯಕ್ತಿಕ ಸಂದರ್ಶನ ಮತ್ತು ಆರ್ಥಿಕ ಪರಿಸ್ಥಿತಿ ಪರಿಶೀಲಿಸಿ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. 800 ವಿದ್ಯಾರ್ಥಿಗಳಿಗೆ 51 ಲಕ್ಷ ರೂ. ಅಧಿಕ ಸಹಾಯ ನೀಡಲಾಗುತ್ತಿದೆ ಎಂದರು.

    ವೈದ್ಯಕೀಯ ವಿದ್ಯಾರ್ಥಿನಿ ಶೃತಿ ನಿಡಗುಂದಿ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿ ಸಚಿನ್ ಅಂಬಿ ಅವರಿಗೆ ತಲಾ 1 ಲಕ್ಷ ರೂ., ಬಿಎಸ್‌ಸಿ ವಿದ್ಯಾರ್ಥಿ ಶಿಸನ್‌ಗೆ 75 ಸಾವಿರ ರೂ. ಚೆಕ್, ಇಂಜಿನಿಯರಿಂಗ್ ವಿದ್ಯಾರ್ಥಿ ಅಮಿತ್ ಇಲಕಲ್ ಅವರಿಗೆ ಲ್ಯಾಪ್‌ಟಾಪ್, ಪಿಯುಸಿ ವಿದ್ಯಾರ್ಥಿ ಕೃಷ್ಣಾ ಕುಂಬಾರ ಅವರಿಗೆ ಸಾಂಕೇತಿಕವಾಗಿ ಪಠ್ಯಪುಸ್ತಕ ವಿತರಿಸುವ ಮೂಲಕ ಯೋಜನೆಗೆ ಚಾಲನೆ ನೀಡಲಾಯಿತು. ಸೋಮೈಯಾ ಕೃಷಿ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ನಂದಕುಮಾರ ವೇದಿಕೆ ಮೇಲಿದ್ದರು.

    ಗೋದಾವರಿ ಕಾರ್ಖಾನೆ ಹಣಕಾಸು ವಿಭಾಗದ ಪ್ರಧಾನ ವ್ಯವಸ್ಥಾಪಕ ಮಹಮ್ಮದ್ ರಫಿಕ್ ಚಾವೂಸ, ಸಹಾಯಕ ವ್ಯವಸ್ಥಾಪಕ (ಎಚ್‌ಆರ್‌ಡಿ) ಎಂ.ರಾಮಚಂದ್ರನ್, ಹೆಲ್ಪ್ ಎ ಚೈಲ್ಡ್ ಯೋಜನೆಯ ಸಂಜೀವ ಬ್ಯಾಳಿ, ರೇಖಾ ಮಠಪತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts