More

    ಪೌರ ಕಾರ್ಮಿಕರ ಸೇವೆ ಅವಿಸ್ಮರಣೀಯ

    ಮಹಾಲಿಂಗಪುರ: ಪಟ್ಟಣ ಸ್ವಚ್ಛವಾಗಿರಿಸಲು ನಿತ್ಯ ಶ್ರಮವಹಿಸಿ ಕಾರ್ಯ ನಿರ್ವಹಿಸುವ ಪೌರ ಕಾರ್ಮಿಕರ ಸೇವೆ ಸ್ಮರಣೀಯ. ತಮ್ಮ ಆರೋಗ್ಯ ರಕ್ಷಣೆಯಲ್ಲಿಯೂ ಕಾಳಜಿ ವಹಿಸಬೇಕೆಂದು ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಹೇಳಿದರು.

    ಪುರಸಭೆ ಸಭಾಭವನದಲ್ಲಿ ಬುಧವಾರ ನಡೆದ ಪೌರಕಾರ್ಮಿಕರ ತ್ರೈಮಾಸಿಕ ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಕಾಯಕದಲ್ಲಿ ಯಾವುದೂ ಮೇಲು ಕೀಳುಗಳಿಲ್ಲ. ಕಾಯಕವೇ ಶ್ರೇಷ್ಠ. ಯಾರು ಏನೇ ಅನ್ನಲಿ, ನಿಮಗೆ ನಿಮ್ಮ ಕೆಲಸದ ಬಗ್ಗೆ ಆತ್ಮತೃಪ್ತಿ ಇರಲಿ. ಒಂದು ಕಡೆ ನಗರದ ಜನತೆ ಜಾತ್ರೆ ಹಬ್ಬಗಳನ್ನು ಆಚರಿಸುತ್ತಿದ್ದರೆ ಇತ್ತ ಪೌರಕಾರ್ಮಿಕರು ನಗರದ ಸ್ವಚ್ಛತೆಗೆ ದುಡಿಯುತ್ತಿರುತ್ತಾರೆ. ನಿಮ್ಮ ಆರೋಗ್ಯದ ಕಾಳಜಿಯೊಂದಿಗೆ ಪಟ್ಟಣವನ್ನು ರೋಗ ಮುಕ್ತವಾಗಿಸಿ ಎಂದರು.

    ಹಿರಿಯ ಆರೋಗ್ಯ ನಿರೀಕ್ಷಕ ಮಹಾಲಿಂಗ ಮುಗಳಖೋಡ ಮಾತನಾಡಿ, ಬೇಸಿಗೆ, ಮಳೆ, ಚಳಿ ಎನ್ನದೇ ನಿತ್ಯ ಪಟ್ಟಣದ ಸ್ವಚ್ಛತೆಗಾಗಿ ಶ್ರಮಿಸುತ್ತಿರುವ ಪೌರ ಕಾರ್ಮಿಕರು ಆರೋಗ್ಯ ರಕ್ಷಾ ಕವಚಗಳನ್ನು ಧರಿಸಿ ಸ್ವಚ್ಛತೆಯಲ್ಲಿ ತೊಡಗಬೇಕು. ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ನಿಮ್ಮ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.

    ಡಾ. ಪ್ರಶಾಂತ ಗೋಡೆಕರ, ಡಾ. ಕಾರ್ತಿಕ ಕುಂದಗೋಳ ಹಾಗೂ ಸಿಬ್ಬಂದಿ ಅಂದಾಜು 55 ಪೌರಕಾರ್ಮಿಕರು, 12 ವಾಹನ ಚಾಲಕರು, ಘನತಾಜ್ಯ ವಿಲೇವಾರಿ ಘಟಕದಲ್ಲಿ ಕೆಲಸ ಮಾಡುವ 8 ಜನ ಸೇರಿ 75 ಜನರ ಮಧುಮೇಹ, ರಕ್ತ, ಬಿಪಿ ತಪಾಸಣೆ ಮಾಡಿದರು.

    ಪುರಸಭೆ ಕಿರಿಯ ಆರೋಗ್ಯ ನಿರೀಕ್ಷಕ ರಾಜು ಹೂಗಾರ, ಸಿದ್ದು ಅಳ್ಳಿಮಟ್ಟಿ, ಸಿಬ್ಬಂದಿ ಹಣಮಂತ ಮಾದರ, ರಾಮು ಮಾಂಗ, ಲಕ್ಷ್ಮೀ ಪರೀಟ್, ಮಹಾಲಿಂಗ ಮಾಂಗ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts