More

    ಅಂಬಿ-ವಿಷ್ಣು ಸ್ನೇಹ-ಬಾಂಧವ್ಯಕ್ಕೆ ಮಸಿ ಬೆಳೆಯೋದು ಬೇಡ …

    ಅಂಬರೀಶ್ ಸ್ಮಾರಕ ನಿರ್ಮಾಣಕ್ಕಾಗಿ ಕಂಠೀರವ ಸ್ಟುಡಿಯೋ ಆವರಣದಲ್ಲಿ 1.34 ಎಕರೆ ಜಾಗ ಮತ್ತು 5 ಕೋಟಿ ರೂಪಾಯಿ ಅನುದಾನವನ್ನು ರಾಜ್ಯ ಸರ್ಕಾರ ಇಂದು ಮಂಜೂರು ಮಾಡಿರುವುದು ಎಲ್ಲರಿಗೂ ಗೊತ್ತೇ ಇದೆ.

    ಇದನ್ನೂ ಓದಿ: ಅಂಬರೀಶ್ ಸ್ಮಾರಕ ನಿರ್ಮಾಣ ಎಲ್ಲಿ? ಎಷ್ಟು ವೆಚ್ಚದಲ್ಲಿ ಆಗಲಿದೆ ಗೊತ್ತಾ?

    ಅಂಬರೀಶ್​ ಅವರ ಸ್ಮಾರಕಗೆ ಸರ್ಕಾರದಿಂದ ನೆರವು ಸಿಗುತ್ತಿದ್ದಂತೆಯೇ, ಕೆಲವರು ಅಪಸ್ವರ ಎತ್ತಿದ್ದಾರೆ. ವಿಷ್ಣುವರ್ಧನ್​ ಅವರು ನಿಧನರಾಗಿ 10 ವರ್ಷಗಳ ನಂತರ ಅವರ ಸ್ಮಾರಕದ ಕೆಲಸ ಪ್ರಾರಂಭವಾಗಿದೆ. ಆದರೆ, ಅಂಬರೀಶ್​ ಅವರು ನಿಧನರಾಗಿ ಒಂದೂವರೆ ವರ್ಷಗಳಲ್ಲಿ ಸ್ಮಾರಕಕ್ಕೆ ಹಣ ಮತ್ತು ಜಾಗ ಮಂಜೂರಾಗಿದೆ. ವಿಷ್ಣುವರ್ಧನ್​ ಅವರ ಸ್ಮಾರಕ ನಿರ್ಮಾಣ ನಿಧಾನವಾಗಿ ಸಾಗುತ್ತಿದ್ದ, ಕನ್ನಡ ಚಿತ್ರರಂಗ ಸೂಕ್ತ ರೀತಿಯಲ್ಲಿ ಸ್ಪಂದಿಸಲಿಲ್ಲ ಎಂದು ಹಲವರು ದೂರಿದ್ದಾರೆ.

    ಹೀಗೆ ಅಂಬರೀಶ್​ ಮತ್ತು ವಿಷ್ಣುವರ್ಧನ್​ ಅವರ ಸ್ಮಾರಕಗಳ ಕುರಿತಾಗಿ ಹೋಲಿಕೆಗಳು ಶುರುವಾಗುತ್ತಿದ್ದಂತೆಯೇ, ಸುಮಲತಾ ಅಂಬರೀಶ್​ ಅವರು ಸಿಟ್ಟಾಗಿದ್ದಾರೆ. ಈ ರೀತಿಯ ಹೋಲಿಕೆ, ಟೀಕೆಗಳಿಂದ ವಿಷ್ಣುವರ್ಧನ್​ ಮತ್ತು ಅಂಬರೀಶ್​ ಅವರ ಸ್ನೇಹ ಮತ್ತು ಬಾಂಧವ್ಯಕ್ಕೆ ಮಸಿ ಬಳಿಯೋದು ಬೇಡ ಎಂದು ಮನವಿ ಮಾಡಿದ್ದಾರೆ.

    ಇದಕ್ಕೆ ಟ್ವಿಟರ್​ನಲ್ಲಿ ಉತ್ತರ ಕೊಟ್ಟಿರುವ ಸುಮಲತಾ ಅಂಬರೀಶ್​, ‘ನಮ್ಮ ಪ್ರೀತಿಯ ವಿಷ್ಣುವರ್ಧನ್​ರವರ ಸ್ಮಾರಕದ ಕೆಲಸ ಅವರ ಮನೆಯವರ ಅಪೇಕ್ಷೆಯಂತೆ ಮೈಸೂರಿನಲ್ಲೇ ಒಂದು ವರ್ಷದ ಹಿಂದೆಯೇ ಶುರು ಆಗಿರುವುದು ಕೆಲವು ಅಭಿಮಾನಿಗಳಿಗೆ ತಿಳಿದು ಬಂದಿಲ್ಲ. ನನಗೆ ತಿಳಿದಿರುವಂತೆ ಸರಕಾರ ಘೋಷಿಸಿದ್ದ 10 ಕೋಟಿಯಲ್ಲಿ ಐದು ಕೋಟಿ ಬಿಡುಗಡೆ ಮಾಡಿದೆ. ಅನಗತ್ಯ ಅಂಬಿ-ವಿಷ್ಣು ಸ್ನೇಹ ಬಾಂಧವ್ಯಕ್ಕೆ ಮಸಿ ಬಳಿಯೋದು ಬೇಡ’ ಎಂದು ಅವರು ಟ್ವೀಟ್​ ಮಾಡಿದ್ದಾರೆ.

    ಇದನ್ನೂ ಓದಿ: ಅಕ್ಷಯ್​ಗೆ ಮೋದಿ ಸರ್ಕಾರ ಅಂದ್ರೆ ಭಯಾನಾ?

    ಇದಕ್ಕೂ ಮುನ್ನ, ಇಂದು ಬೆಳೆಗ್ಗೆ ಅಂಬರೀಶ್​ ಸ್ಮಾರಕ ಪ್ರತಿಷ್ಠಾನದ ಉನ್ನದ ಮಟ್ಟದ ಸಮಿತಿಯ ಸಭೆ ನಡೆದಿದ್ದು, ಈ ಸಭೆಯಲ್ಲಿ ಸುಮಲತಾ ಅಂಬರೀಶ್​, ಅಭಿಷೇಕ್​ ಅಂಬರೀಶ್​, ರಾಕ್​ಲೈನ್​ ವೆಂಕಟೇಶ್​, ಹಿರಿಯ ನಟ ದೊಡ್ಡಣ್ಣ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್​ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಈ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪನವರು ಅಂಬರೀಶ್​ ಸ್ಮಾರಕಕ್ಕೆ ಜಾಗ ಮತ್ತು ಹಣವನ್ನು ಮಂಜೂರು ಮಾಡಿದ್ದಾರೆ.

    ಸುದೀಪ್​ ಚಿತ್ರಕ್ಕೆ ರಾಜಮಂಡ್ರಿಯಿಂದ 22 ಲಾರಿಗಳಲ್ಲಿ ಬಂದಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts