More

    ಕಮಂಡಲು ಹಿಡಿದ ಕೈ, ಅಧಿಕಾರ ನಡೆಸುವ ಪರಿ!; ಚಕ್ರವರ್ತಿ ಸೂಲಿಬೆಲೆ ಅವರ ಅಂಕಣ

    ಕಮಂಡಲು ಹಿಡಿದ ಕೈ, ಅಧಿಕಾರ ನಡೆಸುವ ಪರಿ!; ಚಕ್ರವರ್ತಿ ಸೂಲಿಬೆಲೆ ಅವರ ಅಂಕಣ‘ಯುಪಿಎ ಸರ್ಕಾರವನ್ನು ಉಳಿಸಿಕೊಳ್ಳುವತ್ತಲೇ ಮನಮೋಹನ್ ಸಿಂಗ್ ಸರ್ಕಾರ ವ್ಯಸ್ತವಾಗಿದ್ದರಿಂದ ಆಡಳಿತ ಹಳ್ಳ ಹಿಡಿಯಿತು’ ಎಂದು ಬಿಡುಗಡೆಯಾಗಲಿರುವ ‘ದಿ ಪ್ರೆಸಿಡೆನ್ಶಿಯಲ್ ಇಯರ್ಸ್’ ಎಂಬ ಕೃತಿಯಲ್ಲಿ ಮಾಜಿ ರಾಷ್ಟ್ರಪತಿ ದಿವಂಗತ ಪ್ರಣಬ್ ಮುಖರ್ಜಿ ಹೇಳಿರುವುದು ದಾಖಲಾಗಿದೆ. ಕಾಂಗ್ರೆಸ್ಸಿನ ಗೌರವಾನ್ವಿತ ಮುಖಂಡರೇ ಇದನ್ನು ಹೇಳಿರುವುದರಿಂದ ಈ ಹೇಳಿಕೆಯನ್ನು ವಿಸ್ತಾರವಾಗಿ ಅಧ್ಯಯನ ಮಾಡುವುದೊಳಿತು. ಏಕೆಂದರೆ ಇದು ಬರಿಯ ಕಾಂಗ್ರೆಸ್ಸಿಗಷ್ಟೇ ಅಲ್ಲ, ಎಲ್ಲ ಪಕ್ಷಗಳಿಗೂ ಉಪಯುಕ್ತವಾಗುವಂಥ ಸಾಲೇ. ಕುರ್ಚಿಗೆ ಆತುಕೊಂಡು ಅದನ್ನು ಉಳಿಸಿಕೊಳ್ಳುವಲ್ಲಿ ಹೆಣಗಾಡುತ್ತ ಕೊನೆಗೆ ಕೆಲವು ವರ್ಷ ಅಧಿಕಾರ ನಡೆಸಿಬಿಟ್ಟರೂ ಇತಿಹಾಸದಲ್ಲಿ ಅವರು ಮಾಜಿ ಮುಖ್ಯಮಂತ್ರಿ, ಮಾಜಿ ಪ್ರಧಾನಮಂತ್ರಿ ಎಂದಷ್ಟೇ ದಾಖಲಾಗುತ್ತಾರೇ ಹೊರತು ಸಮಾಜದ ಸ್ಮೃತಿಪಟಲದಲ್ಲಿ ನೆನಪುಳಿಯುವ ವ್ಯಕ್ತಿಗಳಾಗುವುದು ಸಾಧ್ಯವೇ ಇಲ್ಲ! ಇವಿಷ್ಟನ್ನೂ ಏಕೆ ಹೇಳಬೇಕಾಯ್ತೆಂದರೆ ಯೋಗಿ ಆದಿತ್ಯನಾಥರು ಮುನ್ನುಗ್ಗುತ್ತಿರುವ ರೀತಿಯನ್ನು ಕಂಡಾಗ ಇತರ ರಾಜ್ಯಗಳ ನಾಯಕರು ಈ ಮಾಡೆಲ್ ಅನುಸರಿಸುವುದು ಸೂಕ್ತವಾದೀತೇನೋ ಎಂಬ ಕಾರಣಕ್ಕಾಗಿ ಅಷ್ಟೇ, ವಿಶೇಷವಾಗಿ ಕರ್ನಾಟಕ.

    ಉತ್ತರಪ್ರದೇಶಕ್ಕೆ ಹೋಲಿಸಿದರೆ ಕರ್ನಾಟಕ ಹಿಂದಿನಿಂದಲೂ ಸಭ್ಯ, ಸಮೃದ್ಧ, ಬುದ್ಧಿವಂತರಿಂದ ಕೂಡಿದ ವಿಶಿಷ್ಟ ರಾಜ್ಯವೇ. ದೇಶದ ಇತರ ರಾಜ್ಯಗಳು ಈಗ ಯಾವುದನ್ನು ‘ಅಭಿವೃದ್ಧಿ’ ಎಂದು ಕರೆಯುತ್ತಿವೆಯೋ ಅದನ್ನು ಮೈಸೂರಿನ ಮಹಾರಾಜರ ಕಾಲದಲ್ಲೇ ಆರಂಭಿಸಿದ್ದವರು ನಾವು. ಮೂಲಭೂತ ಸೌಕರ್ಯಗಳಲ್ಲಿ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳು ಕಡೆಗಣನೆಗೆ ಒಳಗಾಗಿವೆ ಎಂಬುದನ್ನು ಬಿಟ್ಟರೆ ಇಡಿಯ ರಾಜ್ಯ ಈ ವಿಚಾರದಲ್ಲೂ ಸಮರ್ಥವಾಗಿಯೇ ಇದೆ. ಬೆಂಗಳೂರಿನಲ್ಲಿ ಹೂಡಿಕೆ ಮಾಡಲು ಜಗತ್ತಿನ ಸಾಫ್ಟ್​ವೇರ್ ಕಂಪನಿಗಳೆಲ್ಲ ಧಾವಿಸುವಲ್ಲಿ ಇದರ ಪ್ರಾಕೃತಿಕ ಕೊಡುಗೆಯೂ ಸಾಕಷ್ಟಿದೆ. ಈ ನಿಟ್ಟಿನಲ್ಲಿ ನೋಡಿದರೆ ಸದ್ಯದಮಟ್ಟಿಗೆ ಯಾವ ರಾಜ್ಯಗಳೊಂದಿಗೂ ನಾವು ಪ್ರತಿಸ್ಪರ್ಧಿಗಳಾಗಿರಲೇಬೇಕಿಲ್ಲ. ನಮ್ಮೊಡನೆ ಪ್ರತಿಸ್ಪರ್ಧಿಸಲೂ ಬೇರೆ ರಾಜ್ಯಗಳು ಕಸರತ್ತು ಮಾಡಬೇಕಾದ ವಾತಾವರಣ ನಾವು ನಿರ್ಮಾಣ ಮಾಡಬೇಕಿತ್ತು. ಏಕೆ ಹೀಗೆನಿಸುತ್ತಿದೆ ಎಂದರೆ ಕಳೆದ ಮೂರು ವರ್ಷಗಳಲ್ಲಿ ಯೋಗಿ ಆದಿತ್ಯನಾಥರು ಉತ್ತರಪ್ರದೇಶವನ್ನು ರೂಪಿಸುತ್ತಿರುವ ರೀತಿ ನೋಡಿದರೆ ಎಂಥವನಿಗೂ ಅಚ್ಚರಿ ಎನಿಸದಿರಲಾರದು.

    ಇದನ್ನೂ ಓದಿ: ಚಿನ್ನಾಭರಣ ಪ್ರಿಯರಿಗೆ ಬಿಗ್​ ಶಾಕ್​! ಒಂದೇ ವಾರದಲ್ಲಿ ಶೇ. 2 ಏರಿದ ಗೋಲ್ಡ್​ ರೇಟ್​! 

    ಕುಂಭಮೇಳದ ಹೊತ್ತಲ್ಲಿ ಉತ್ತರಪ್ರದೇಶಕ್ಕೆ ಹೋಗಿದ್ದಾಗ ತರುಣನೊಬ್ಬ ತಮ್ಮ ಮುಖ್ಯಮಂತ್ರಿಯ ಬಗ್ಗೆ ಪುಂಖಾನುಪುಂಖವಾಗಿ ಹೊಗಳುತ್ತಿದ್ದ. ಸ್ವಲ್ಪ ಕೆದಕಿ, ‘ಅಂಥದ್ದೇನು ಮಹಾ ಮಾಡಿದ್ದಾರೆ?’ ಎಂದೊಡನೆ ಚಂದ್ರಶೇಖರ್ ಆಜಾದ್​ರ ಸ್ಮೃತಿಪಾರ್ಕ್​ನಿಂದ ಹೊರಗೆ ಕರಕೊಂಡು ಬಂದು ರಸ್ತೆಯನ್ನು ತೋರಿಸಿದ. ಇಡಿಯ ಉತ್ತರಪ್ರದೇಶದಲ್ಲಿ ನಿರ್ವಣಗೊಂಡಿರುವ ರಸ್ತೆಗಳ ಬಗ್ಗೆ ಆತ ಬಲು ಹೆಮ್ಮೆಯಿಂದ ನುಡಿಯುತ್ತ ಕುಂಭಮೇಳ ಇಷ್ಟು ಸುಸೂತ್ರವಾಗಿ ನಡೆಯುವಲ್ಲಿ ಈ ರಸ್ತೆಗಳ ಮಹತ್ವವನ್ನು ತಿಳಿಹೇಳಿದ. ಅದೇನು ಸುಳ್ಳಲ್ಲ. 2017ಕ್ಕೆ ಅವರು ಅಧಿಕಾರಕ್ಕೆ ಬರುವಾಗ ಎರಡು ಎಕ್ಸ್​ಪ್ರೆಸ್​ವೇಗಳು ರಾಜ್ಯದಲ್ಲಿದ್ದವು. ಆಗ್ರಾ ಮತ್ತು ದೆಹಲಿಯನ್ನು ಸಂರ್ಪಸುವ 165 ಕಿ.ಮೀ.ಗಳ ಯಮುನಾ ಎಕ್ಸ್​ಪ್ರಸ್​ವೇ, 302 ಕಿ.ಮೀ.ಗಳ ಲಖನೌ-ಆಗ್ರಾ ಎಕ್ಸ್​ಪ್ರೆಸ್​ವೇ. ಇವೆರಡನ್ನೂ ಪೂರ್ಣಗೊಳಿಸಲು ಹಿಂದಿನ ಸರ್ಕಾರಗಳು ಒಂಬತ್ತು ವರ್ಷ ತೆಗೆದುಕೊಂಡಿದ್ದವು. ಆದರೆ ಯೋಗಿಯವರ ಐದು ವರ್ಷಗಳ ಅಧಿಕಾರಾವಧಿ ಮುಗಿಯುವುದರೊಳಗೆ 340 ಕಿ.ಮೀ.ಗಳ ಪೂರ್ವಾಂಚಲ ಎಕ್ಸ್​ಪ್ರೆಸ್​ವೇ, 296 ಕಿ.ಮೀ.ಗಳ ಬುಂದೇಲ್​ಖಂಡ್ ಎಕ್ಸ್​ಪ್ರೆಸ್​ವೇ, 91 ಕಿ.ಮೀ.ಗಳ ಗೊರಖ್​ಪುರ್ ಲಿಂಕ್ ಎಕ್ಸ್​ಪ್ರೆಸ್​ಗಳು ಸಂಪೂರ್ಣಗೊಂಡಿರುತ್ತವಲ್ಲದೆ ರಾಜ್ಯದ ಆರನೇ ಮತ್ತು ಅತ್ಯಂತ ಉದ್ದನೆಯ 594 ಕಿ.ಮೀ.ಗಳ ಗಂಗಾ ಎಕ್ಸ್​ಪ್ರೆಸ್​ವೇ ಕೂಡ ಆರಂಭವಾಗಿಬಿಟ್ಟಿರುತ್ತದೆ. ಅಷ್ಟೇ ಅಲ್ಲ, ಎರಡೂವರೆ ಸಾವಿರದಷ್ಟು ಹಳ್ಳಿಗಳ ನಾಲ್ಕುಸಾವಿರ ಕಿ.ಮೀ.ಗೂ ಹೆಚ್ಚು ರಸ್ತೆಗಳನ್ನು ಅಭಿವೃದ್ಧಿಪಡಿಸಿ ಈ ಎಕ್ಸ್​ಪ್ರೆಸ್​ವೇಗಳಿಗೆ ಜೋಡಿಸಲಾಗಿದೆ. ಮೋದಿ ಇತ್ತೀಚೆಗೆ ವಾರಾಣಾಸಿಗೆ ಹೋಗಿದ್ದಾಗ ‘ಉತ್ತರಪ್ರದೇಶ ಯೋಗಿಜೀಯವರಡಿಯಲ್ಲಿ ಎಕ್ಸ್ ಪ್ರೆಸ್​ವೇ ಪ್ರದೇಶ ಆಗಿಬಿಟ್ಟಿದೆ’ ಎಂದಿದ್ದು ಅಭಿಮಾನದ ನುಡಿಯಾಗಿತ್ತು. ರಸ್ತೆಗಳು ದೇಹದೊಳಗಿನ ನರನಾಡಿಗಳಿದ್ದಂತೆ. ರಕ್ತದ ಪ್ರವಾಹದಲ್ಲಿ ಏರುಪೇರಾದರೆ ದೇಹದ ಕಾರ್ಯ ಚಟುವಟಿಕೆ ಹೇಗೆ ಕುಂಠಿತವಾಗುತ್ತದೆಯೋ ಅದೇ ಮಾದರಿಯಲ್ಲಿ ಒಂದು ರಾಜ್ಯದ ಆರ್ಥಿಕ ಪ್ರಗತಿಯೂ ನೇರವಾಗಿ ರಸ್ತೆಗಳಿಗೆ ಸಂಬಂಧಿಸಿದ್ದು. ಯಾವ ನಾಯಕ ಇದನ್ನು ಗುರುತಿಸಲಾರನೋ ಆತ ಅಭಿವೃದ್ಧಿಯಿಂದ ದೂರವೇ ಉಳಿದುಬಿಡುತ್ತಾನೆ. ಗುಜರಾತಿನಲ್ಲಿ ಮೋದಿ ಮಾಡಿದ್ದು ಇದನ್ನೇ. ಯೋಗಿ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ.

    ಕಮಂಡಲು ಹಿಡಿದ ಕೈ, ಅಧಿಕಾರ ನಡೆಸುವ ಪರಿ!; ಚಕ್ರವರ್ತಿ ಸೂಲಿಬೆಲೆ ಅವರ ಅಂಕಣ

    ಕರೊನಾ ಬಂದಾಗ ಎಲ್ಲ ರಾಜ್ಯಗಳೂ ಉತ್ತರಪ್ರದೇಶದವರನ್ನು ಮರಳಿ ಕಳಿಸಿಬಿಟ್ಟರಲ್ಲ, ಅದು ಅವರ ಸ್ವಾಭಿಮಾನಕ್ಕೆ ಬಲುದೊಡ್ಡ ಧಕ್ಕೆಯಾಗಿತ್ತು. ಹೀಗೆ ಬಂದವರಲ್ಲಿ ಬಹುತೇಕರನ್ನು ಅವರು ರಸ್ತೆನಿರ್ಮಾಣ ಕಾಮಗಾರಿಗಳಿಗೆ ಬಳಸಿಕೊಂಡರೆಂದು ಈಗ ವರದಿಗಳು ಹೊರಬರುತ್ತಿವೆ. ನಾಯಕನೊಬ್ಬನ ಕಾರ್ಯಶೈಲಿ ಇದು. ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸಿಕೊಂಡುಬಿಡೋದು! ಹಾಗಂತ ಬರಿ ರಸ್ತೆಗಳನ್ನು ನಿರ್ವಿುಸಿ ಕೈಬಿಟ್ಟುಬಿಡುತ್ತಿಲ್ಲ. ಅವುಗಳಿಂದ ಎಷ್ಟು ಲಾಭ ಪಡೆಯಬೇಕೋ ಅಷ್ಟಕ್ಕೂ ಅವರು ಸಜ್ಜಾಗಿಬಿಟ್ಟಿದ್ದಾರೆ.

    ಉತ್ತರಪ್ರದೇಶ ದೇಶದ ಮತ್ತು ಜಗತ್ತಿನ ಯಾತ್ರಿಕರನ್ನು ತನ್ನೆಡೆಗೆ ಸೆಳೆಯುವ ಅಪರೂಪದ ಸಾಮರ್ಥ್ಯ ಹೊಂದಿದೆ. ದೇಶದ ಜನರ ಶ್ರದ್ಧಾಕೇಂದ್ರವಾದ ಅಯೋಧ್ಯೆ-ಮಥುರಾಗಳು ಇರೋದು ಅಲ್ಲಿಯೇ. ಋಷಿಮುನಿಗಳು ಓಡಾಡಿದ, ಭಗವಂತನ ಲೀಲೆಗಳು ನಡೆದ ಅನೇಕ ತಾಣಗಳು ಅಲ್ಲಿವೆ. ಇಡಿಯ ರಾಜ್ಯವನ್ನು ಧಾರ್ವಿುಕ ಪ್ರವಾಸೋದ್ಯಮಕ್ಕೆ ಸೂಕ್ತವಾಗಿ ಬಳಸಿಕೊಳ್ಳಬೇಕೆಂಬುದನ್ನು ಅವರು ಆರಂಭದಲ್ಲಿಯೇ ನಿರ್ಧರಿಸಿದಂತೆ ಕಾಣುತ್ತೆ. ಮಠವೊಂದರ ಪ್ರಮುಖರಾಗಿ ಇದು ಸಹಜ ಕೂಡ ಹೌದು. ಈ ಹಿನ್ನೆಲೆಯಲ್ಲೇ ರಾಮಲೀಲಾ ಆರಂಭಿಸಿ ದೀಪಾವಳಿಯನ್ನು ಜಗತ್ತೇ ಆನಂದಿಸುವಂತೆ ಮಾಡಿಬಿಟ್ಟರು. ಐದಾರು ಲಕ್ಷ ದೀಪಗಳನ್ನು ನದಿತೀರದಲ್ಲಿ ಹೊತ್ತಿಸಿ ಅವರು ಸಂಭ್ರಮಿಸುವ ರೀತಿ ಹಿಂದೂಧರ್ಮಕ್ಕೆ ಪುನಶ್ಚೇತನವೆಂದೇ ಹೇಳಬಹುದು. ಅಂದರೆ ದೀಪಾವಳಿ ಉತ್ತರಪ್ರದೇಶದ್ದೇ ಕೊಡುಗೆ ಎಂದು ಸಮಾಜಕ್ಕೆ ಒಪ್ಪಿಸುವಲ್ಲಿ ಅವರು ಶಕ್ತರಾಗಿಬಿಟ್ಟರು. ಆದರೆ ಬಹಳ ಜನರಿಗೆ ಗೊತ್ತಿಲ್ಲದ ಒಂದು ಸಂಗತಿ ಎಂದರೆ ಅವರು ಹೋಳಿಯನ್ನೂ ತಮ್ಮ ರಾಜ್ಯದ್ದೇ ಕೊಡುಗೆ ಎಂದು ಹೇಳುವಲ್ಲಿ ಯಶಸ್ವಿಯಾದರು. ಶ್ರೀಕೃಷ್ಣ ವೃಜದಲ್ಲಿ ನಡೆಸಿದ ಲೀಲೆಯನ್ನು ರಂಗಿನೊಂದಿಗೆ ವೈಭವಪೂರ್ಣಗೊಳಿಸಿ ಜಗತ್ತಿನ ಗಮನ ಸೆಳೆಯುವಂತೆ ಮಾಡುವಲ್ಲಿ ಯಶಸ್ವಿಯಾದರು. ಈ ಹೊತ್ತಲ್ಲೇ ಅವರು ಲಠ್ ಔರ್ ಲಠ್​ವಾರ್ ಎಂಬ ಹಳೆಯ ಧಾರ್ವಿುಕ ಚಟುವಟಿಕೆಯೊಂದಕ್ಕೆ ವೈಭವದ ಸ್ಪರ್ಶ ಕೊಟ್ಟಿದ್ದು. ಬಿದಿರಿನ ಕಡ್ಡಿಯನ್ನು ಹೆಣ್ಣುಮಕ್ಕಳು ಹಿಡಿದುಕೊಂಡು ಗಂಡುಮಕ್ಕಳಿಗೆ ಹೊಡೆಯುವ ಪ್ರೀತಿಯ ಆಟ ಇದು. ಈ ಕಾರ್ಯಕ್ರಮಕ್ಕೆ ಇಡಿಯ ದೇಶದ ಭಿನ್ನ ಭಿನ್ನ ಕಲಾತಂಡಗಳನ್ನು ಕರೆಸಿ ಸ್ವರೂಪವನ್ನೂ ಬದಲಾಯಿಸಿಬಿಟ್ಟರು. ಜನ ಈ ಸುದ್ದಿ ವ್ಯಾಪಕಗೊಳ್ಳುತ್ತಿದ್ದಂತೆ ಆಡಿಕೊಂಡು ನಗುತ್ತಿದ್ದರಂತೆ, ‘ಯೋಗಿಜಿ ಹೆಸರಿಗೆ ಮಾತ್ರ ಈ ಕಾರ್ಯಕ್ರಮ ಮಾಡುತ್ತಿದ್ದಾರೆ. ವಾಸ್ತವವಾಗಿ ಅವರು ನೀಡುತ್ತಿರುವ ಸಂದೇಶ ಕೈಯಲ್ಲಿ ದಂಡ ಹಿಡಿದ ಪೊಲೀಸರು ಮಾಫಿಯಾದವರನ್ನು ಬಡಿಯುತ್ತಿದ್ದಾರೆ ಎಂಬುದಾಗಿದೆ’ ಅಂತ. ಬರಿ ರಾಮ-ಕೃಷ್ಣರಷ್ಟೇ ಅಲ್ಲ. ಯೋಗಿಜೀ ಶಿವನ ಕ್ಷೇತ್ರವಾಗಿರುವ ಕಾಶಿಯನ್ನು ಆಮೂಲಾಗ್ರವಾಗಿ ಬದಲಾಯಿಸುತ್ತಿದ್ದಾರೆ. ಅದು ಸ್ವತಃ ಪ್ರಧಾನಮಂತ್ರಿಯವರ ಲೋಕಸಭಾ ಕ್ಷೇತ್ರವೂ ಆಗಿರುವುದರಿಂದ ಅದನ್ನು ಸುಂದರಗೊಳಿಸುವ ಹೊಣೆಗಾರಿಕೆ ಯೋಗಿಯವರ ಹೆಗಲ ಮೇಲೆ ಇದೆ. ಅದಾಗಲೇ ಮಂದಿರದ ಆಸುಪಾಸಿನ ಜಾಗಗಳನ್ನೆಲ್ಲ ಕೊಂಡುಕೊಂಡಿರುವ ಯೋಗಿಜೀ ಕೋಟ್ಯಂತರ ರೂಪಾಯಿಗಳನ್ನು ಕಾಶಿಯ ಅಭಿವೃದ್ಧಿಗಾಗಿ ವ್ಯಯಿಸುತ್ತಿದ್ದಾರೆ. ವೇದವಿಜ್ಞಾನದ ಅಧ್ಯಯನಕ್ಕಾಗಿ ಹಿಂದೂ ವಿಶ್ವವಿದ್ಯಾಲಯಕ್ಕೆ -ಠಿ; 18 ಕೋಟಿ ಅನುದಾನವನ್ನೂ ಕೊಟ್ಟಿದ್ದಾರೆ. ಇನ್ನೈದು ವರ್ಷದ ನಂತರ ನೀವು ಕಾಶಿಗೆ ಹೋದರೆ ಯಾವುದೋ ಲೋಕಕ್ಕೆ ಬಂದಂತೆ ಭಾಸವಾದರೆ ಅಚ್ಚರಿಪಡಬೇಕಿಲ್ಲ!

    ಇದನ್ನೂ ಓದಿ: ಓ ಪುರುಷರೇ.. ನಿಮಗಿದು ಬ್ಯಾಡ್ ನ್ಯೂಸ್​!; ನಿಮ್ಮಲ್ಲಿ ಈ ಲಕ್ಷಣಗಳಿದ್ದರೆ ಕರೊನಾ ಸೋಂಕಿತರಾಗದಂತೆ ಎಚ್ಚರ ವಹಿಸಿ 

    ನಿಜ, ಉತ್ತರಪ್ರದೇಶದ ಅಭಿವೃದ್ಧಿಗೆ ಹೊಂಡ ತುಂಬಿದ ರಸ್ತೆಗಳು ಎಷ್ಟು ತೊಂದರೆ ಕೊಟ್ಟಿದ್ದವೋ ರಾಜಕೀಯ ಪಕ್ಷಗಳ ಹೆಸರಿನಲ್ಲಿ ಗೂಂಡಾಗಿರಿ ನಡೆಸುವವರದ್ದೂ ಅಷ್ಟೇ ಕೊಡುಗೆ ಇತ್ತು. ಯೋಗಿಜೀ ರಸ್ತೆಗಳಿಗೆ ಸುಂದರ ರೂಪ ಕೊಟ್ಟಂತೆ ಮಾಫಿಯಾ ಡಾನುಗಳನ್ನು ಮುಲಾಜಿಲ್ಲದೇ ಒಳಹಾಕಿದರು, ಬಲು ಮೆರೆಯುತ್ತಿದ್ದವರನ್ನು ನಡುರಸ್ತೆಯಲ್ಲೇ ಗುಂಡಿಟ್ಟು ಕೊಲ್ಲಲಾಯ್ತು. ಒಂದು ಕಾಲದಲ್ಲಿ ಬಿಹಾರದೊಂದಿಗೆ ತುಲನೆಗೊಳಪಟ್ಟು ಹೆದರಿಕೆಯ ತಾಣವೆಂದು ಗಣಿಸಲ್ಪಡುತ್ತಿದ್ದ ಉತ್ತರಪ್ರದೇಶ ಇಂದು ಈ ದೇಶವಿರೋಧಿ ಗೂಂಡಾಗಳಿಂದ ಬಚಾವಾಗಿದೆ ಎಂದರೆ ನಿಸ್ಸಂಶಯವಾಗಿ ಅದು ಈ ಸಂತನ ಕೊಡುಗೆಯೇ! ಈ ಗೂಂಡಾಗಳ ಆಧಾರದ ಮೇಲೆಯೇ ಅಧಿಕಾರ ನಡೆಸುತ್ತಿದ್ದ ಪಕ್ಷಗಳೀಗ ಪತರಗುಟ್ಟುತ್ತಿವೆ. ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ಜನರ ಆಸ್ತಿಪಾಸ್ತಿಗಳಿಗೆ ನಷ್ಟವುಂಟುಮಾಡಿದ್ದ ಗೂಂಡಾಗಳ ಚಿತ್ರಗಳನ್ನು ದೊಡ್ಡದಾಗಿ ಪ್ರಕಟಿಸಿ, ಅವರ ಆಸ್ತಿಯನ್ನೂ ಮುಟ್ಟುಗೋಲು ಹಾಕಿಕೊಂಡಿದ್ದವರು ಯೋಗಿ. ಅವರ ಕಾರ್ಯಶೈಲಿ ಮೈಝುುಮ್ಮೆನಿಸುವಂಥದ್ದು!

    ಇವೆಲ್ಲದರ ಪರಿಣಾಮವಾಗಿಯೇ ಯೋಗಿ ರಾಜ್ಯಕ್ಕೆ ಅಪಾರ ಪ್ರಮಾಣದ ಹಣ ಹರಿದುಬರುತ್ತಿದೆ. ಕಳೆದ ಮೂರು ವರ್ಷಗಳಲ್ಲಿ 1,88,000 ಕೋಟಿ ರೂಪಾಯಿಯಷ್ಟು ಹಣ ಹರಿದು ಬಂದಿದೆ. ಸರಳ ಲೆಕ್ಕಾಚಾರ ಹಾಕಿದರೂ ಸಂತನೊಬ್ಬ ತನ್ನ ಸಾಮರ್ಥ್ಯದಿಂದಲೇ ದಿನಕ್ಕೆ 172 ಕೋಟಿ ರೂಪಾಯಿಯನ್ನು ರಾಜ್ಯದಲ್ಲಿ ಹೂಡಿಕೆ ಮಾಡಿಸಿದ್ದಾನೆ. ಅಮೆರಿಕ, ಯುಕೆ, ಜರ್ಮನಿ, ದಕ್ಷಿಣ ಕೊರಿಯಾ, ಜಪಾನ್, ಫ್ರಾನ್ಸ್​ನಂಥ ಪ್ರಮುಖ ದೇಶಗಳ ಅನೇಕ ಕಂಪೆನಿಗಳು ಕರೊನಾ ಕಾಲಘಟ್ಟದಲ್ಲಿ ಉತ್ತರಪ್ರದೇಶದಲ್ಲಿ ಹೂಡಿಕೆಗೆ ಧಾವಿಸಿರುವುದು ಯೋಗಿ ಆದಿತ್ಯನಾಥರ ಸಾಧನೆಯಲ್ಲದೆ ಮತ್ತೇನೂ ಅಲ್ಲ. ತೀರಾ ಇತ್ತೀಚೆಗೆ ಸ್ಯಾಮ್ಂಗ್ ಚೀನಾದಲ್ಲಿರುವ ತನ್ನ ಘಟಕವನ್ನು ಉತ್ತರಪ್ರದೇಶಕ್ಕೆ ಸ್ಥಳಾಂತರಿಸುವುದಾಗಿ ಹೇಳಿರುವುದು ಹುಬ್ಬೇರಿಸುವ ಸಂಗತಿಯೇ. ಯೋಗಿ ಆದಿತ್ಯನಾಥರಿಗೆ ದೃಷ್ಟಿ ನಿಚ್ಚಳವಾಗಿದೆ. ಅವರು ಶಿವಾರಾಧನೆ ಮಾಡುತ್ತ ಮೈಮರೆಯುವಷ್ಟೇ ಸಲೀಸಾಗಿ ಅಧಿಕಾರ ಮಾಡುತ್ತ ತನ್ನ ಪ್ರಜೆಗಳಿಗೆ ಒಳಿತು ಮಾಡುವಲ್ಲಿಯೂ ಮೈಮರೆಯುತ್ತಾರೆ. ಹೀಗಾಗಿಯೇ ಅವರು ರಾಷ್ಟ್ರಕ್ಕೆ ಭರವಸೆಯ ಆಶಾಕಿರಣವಾಗಿಬಿಟ್ಟಿದ್ದಾರೆ. ಅವರನ್ನು ಭೇಟಿಮಾಡಲು ಬಂದ ಪಶ್ಚಿಮದ ಕೆಲವು ಪ್ರಮುಖರೊಂದಿಗೆ ಸಹಜವಾಗಿ ಮಾತನಾಡುತ್ತ ಯೋಗಿಜಿ ಪುರೋಹಿತರ ಕುರಿತಂತೆ ಪಶ್ಚಿಮ-ಭಾರತದ ಕಲ್ಪನೆಗಳ ವೈರುದ್ಧ್ಯನ್ನು ವಿವರಿಸಿದರಂತೆ. ಅಲ್ಲಿ ಪುರೋಹಿತನಾದವನು ದೇವಕಾರ್ಯಬಿಟ್ಟರೆ ಬೇರೇನೂ ಮಾಡುವಂತಿಲ್ಲ. ಇಲ್ಲಿ ಸಂತನಾದವನು ರಾಜ್ಯವನ್ನೂ ಆಳಬಹುದು!

    ಬಹುಶಃ ಸಂತನಾದರೆ ಆಳುವುದು ಸುಲಭವೆನಿಸುತ್ತದೆ. ಅವನಿಗೆ ಹಿಂದು-ಮುಂದಿಲ್ಲ, ನಾಳಿನ ಚಿಂತೆಯಿಲ್ಲ. ಮೋಕ್ಷ ಪಡೆಯುವುದೊಂದೇ ಗುರಿಯಾಗಿದ್ದರೆ ಅದಕ್ಕೆ ಅಧಿಕಾರ, ಹಣ ಸಹಾಯ ಮಾಡಲಾರದು ಎಂಬುದೂ ಗೊತ್ತಿರುತ್ತದೆ. ಆದ್ದರಿಂದಲೇ ಆತ ಯಾರ ಮುಲಾಜಿಗೂ ಒಳಗಾಗದೇ ತಾನು ಕೆಲಸ ಮಾಡಬಲ್ಲ. ಅಧಿಕಾರವನ್ನು ಉಳಿಸಿಕೊಳ್ಳಲೆಂದು ಯಾರಿಗೂ ಬಕೇಟು ಹಿಡಿಯುವ, ಓಲೈಸುವ, ತಲೆಬಾಗುವ ದರ್ದು ಅವರಿಗಿಲ್ಲ. ಹೀಗಾಗಿಯೇ ಆತ ತಾನು ನಡೆದದ್ದೇ ದಾರಿ ಎನ್ನುವಂತೆ ಕೆಲಸ ಮಾಡಬಲ್ಲ. ಪ್ರತಿಯೊಬ್ಬ ನಾಯಕನೂ ಹೀಗೆಯೇ ಆಲೋಚನೆ ಮಾಡಬೇಕಿದೆ. ಮೋದಿಯಂಥ ಸಮರ್ಥ ನಾಯಕ ದೇಶವನ್ನು ಆಳುತ್ತಿರುವಾಗ, ಯೋಗಿಯಂತೆ ಪ್ರತಿಯೊಂದು ರಾಜ್ಯದಲ್ಲಿಯೂ ಅವರ ಕೈ ಬಲಪಡಿಸುತ್ತ ಅವರು ಕಟ್ಟಿದ ಕನಸನ್ನು ಆದಷ್ಟು ಬೇಗ ನನಸು ಮಾಡುವಲ್ಲಿ ಶ್ರಮಿಸಬೇಕೇ ಹೊರತು ತಾನು ತನ್ನ ಪರಿವಾರ, ತನ್ನ ಜಾತಿ, ಇವುಗಳಲ್ಲೇ ಮಗ್ನವಾಗಿಬಿಟ್ಟರೆ ಇತಿಹಾಸ ಅಂಥವರನ್ನು ನಿವಾಳಿಸಿ ಒಗೆದುಬಿಡುತ್ತದೆ!

    ಅಂದಹಾಗೆ, ಕರ್ನಾಟಕದ ಟೊಯೊಟಾ ಕಂಪನಿಯಲ್ಲಿ ಕಾರ್ವಿುಕರ ಗಲಾಟೆ ಶುರುವಾಗಿದೆ. ಆಪಲ್ ಘಟಕದಲ್ಲೂ ಗಲಾಟೆಯಾದ ಸುದ್ದಿ ಸದ್ದು ಮಾಡಿದೆ. ಹೀಗೆ ನಿಯಂತ್ರಣಕ್ಕೆ ಬರದ ಕಾರ್ವಿುಕ ಕದನಗಳು ಮತ್ತಷ್ಟು ಹೂಡಿಕೆಗೆ ತಡೆ ಉಂಟುಮಾಡುವುದಿಲ್ಲವೇ? ಯೋಚಿಸಬೇಕಾದ ವಿಚಾರ. ದುರದೃಷ್ಟವೆಂದರೆ ಉಪಮುಖ್ಯಮಂತ್ರಿಗಳಾಗಲೀ, ಕಾರ್ವಿುಕ ಸಚಿವರಾಗಲೀ ಸಂಧಾನ ಮಾಡುವ ಪ್ರಯತ್ನ ಮಾಡಿದರೇ ಹೊರತು ಪರಿಹಾರವನ್ನು ಕೊಟ್ಟು ಉದ್ದಿಮೆ ಚುರುಕುಗೊಳ್ಳುವಲ್ಲಿ ಅಲ್ಲ. ಮೈಸೂರಿನ ಮಹಾರಾಜರು ಹಾಕಿಕೊಟ್ಟ ಪಥ ಸಾಮಾನ್ಯವಾದ್ದಲ್ಲ. ಅದರ ಗೌರವವನ್ನು ಉಳಿಸುವ ಹೊಣೆಗಾರಿಕೆ ನಮ್ಮೆಲ್ಲರದ್ದೂ ಇದೆ. ಕರ್ನಾಟಕ ಯಾರ ಹಿಂದೆ ನಿಲ್ಲಬೇಕಾದ್ದಲ್ಲ, ಹೇಗೆ ಮುನ್ನುಗ್ಗಬೇಕೆಂಬುದಕ್ಕೆ ಮಾರ್ಗದರ್ಶಿಯಾಗಬೇಕು.

    (ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

    ರಾಜಸ್ಥಾನ ಸ್ಥಳೀಯ ಚುನಾವಣೆಯಲ್ಲಿ ಮುಗ್ಗರಿಸಿದ ಬಿಜೆಪಿ! ಗೆದ್ದು ಬೀಗಿದ ಕಾಂಗ್ರೆಸ್​

    ಖೇಲೋ ಇಂಡಿಯಾ ಗೇಮ್ಸ್‌ಗೆ ಮಲ್ಲಕಂಬ ಸ್ಪರ್ಧೆ ಸೇರ್ಪಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts