More

    ರೂ. 646ರಿಂದ 595ಕ್ಕೆ ಕುಸಿದಿರುವ ಅದಾನಿ ಪವರ್ ಷೇರು: ರೂ. 820ಕ್ಕೆ ಏರಬಹುದು ಎನ್ನುತ್ತಾರೆ ತಜ್ಞರು

    ಮುಂಬೈ: ಕಳೆದ ಕೆಲವು ವರ್ಷಗಳಲ್ಲಿ, ವಿದ್ಯುತ್ ವಲಯಕ್ಕೆ ಸಂಬಂಧಿಸಿದ ಎರಡು ದೊಡ್ಡ ಕಂಪನಿಗಳ ಷೇರುಗಳಾದ ಅದಾನಿ ಪವರ್ ಮತ್ತು ಟಾಟಾ ಪವರ್ ಮಲ್ಟಿಬ್ಯಾಗರ್ ರಿಟರ್ನ್ಸ್ ನೀಡಿವೆ. ಈ ಎರಡೂ ಕಂಪನಿಗಳ ಷೇರುಗಳ ಬೆಲೆ ವ್ಯಾಪಕವಾಗಿ ಏರಿಕೆಯಾಗಿದ್ದು, ಈ ಮೂಲಕ ಹೂಡಿಕೆದಾರರನ್ನು ಶ್ರೀಮಂತರನ್ನಾಗಿ ಮಾಡಿವೆ. ಗೌತಮ್ ಅದಾನಿ ಗ್ರೂಪ್‌ನ ಪವರ್ ಕಂಪನಿಯಾದ ಅದಾನಿ ಪವರ್‌ನ ಷೇರುಗಳು ಒಂದು ವರ್ಷದಲ್ಲಿ ಶೇಕಡಾ 200 ಕ್ಕಿಂತ ಹೆಚ್ಚು ಏರಿಕೆ ಕಂಡಿವೆ.

    ಷೇರು ಮಾರುಕಟ್ಟೆ ತಜ್ಞರ ಪ್ರಕಾರ, ಅದಾನಿ ಪವರ್ ಷೇರುಗಳ ಬೆಲೆಯು ದಾಖಲೆಯ ಉನ್ನತ ಮಟ್ಟದಿಂದ ಕುಸಿತವನ್ನು ಅನುಭವಿಸುತ್ತಿದೆ. ಆದರೂ, ಅದಾನಿ ಪವರ್ ಷೇರುಗಳು ಮೌಲ್ಯಮಾಪನದ ದೃಷ್ಟಿಯಿಂದ ಆಕರ್ಷಕವಾಗಿ ಕಾಣುತ್ತವೆ ಎಂದು ತಜ್ಞರು ಹೇಳುತ್ತಾರೆ.

    ಮಧ್ಯಮದಿಂದ ದೀರ್ಘಾವಧಿಯ ಹೂಡಿಕೆದಾರರು ಮಾರುಕಟ್ಟೆಯಲ್ಲಿ ತಿದ್ದುಪಡಿಗಾಗಿ ಕಾಯುವಂತೆ ತಜ್ಞರು ಸಲಹೆ ನೀಡಿದ್ದಾರೆ. ಈ ಷೇರಿನ ಸಾರ್ವಕಾಲಿಕ ಗರಿಷ್ಠ ಬೆಲೆ ರೂ. 646.90 ಹಾಗೂ ಕನಿಷ್ಠ ಬೆಲೆ ರೂ. 15.15 ಇದೆ.

    ಈ ಷೇರು ಬೆಲೆ ರೂ. 646 ತಲುಪಿ, 52 ವಾರಗಳ ಗರಿಷ್ಠ ಮಟ್ಟವನ್ನು ಮಟ್ಟಿತ್ತು. ಆದರೆ, ಈ ಮಟ್ಟದಿಂದ ಅದು ಈಗ ಅಂದಾಜು 8% ರಷ್ಟು ಕುಸಿದಿದೆ ಎಂದು ಪೇಸ್ 360 ಸಂಸ್ಥೆಯ ಸಹ-ಸಂಸ್ಥಾಪಕ ಅಮಿತ್ ಗೋಯಲ್ ಹೇಳಿದ್ದಾರೆ.

    ಜನವರಿ 2022 ರಲ್ಲಿ ಅಂದಾಜು ರೂ. 100 ಇದ್ದ ಅದಾನಿ ಷೇರಿನ ಬೆಲೆಯು ಪ್ರಸ್ತುತ ರೂ. 595 ಕ್ಕೆ ಏರಿದೆ. ಆದರೂ, ಕಂಪನಿಯು ನಿರಂತರವಾಗಿ ಸಾಲ ಕಡಿಮೆ ಮಾಡಿಕೊಳ್ಳುತ್ತಿರುವುದರಿಂದ ಅದಾನಿ ಪವರ್ ಷೇರುಗಳು ಆಕರ್ಷಕವಾಗಿವೆ. ಕಂಪನಿಯು ತನ್ನ ಉಷ್ಣ ಸಾಮರ್ಥ್ಯವನ್ನು ಪ್ರಸ್ತುತ 15.21 GW ನಿಂದ 21 GW ಗೆ ವಿಸ್ತರಿಸಲು ಯೋಜಿಸಿದೆ. ಇವು ಸಕಾರಾತ್ಮಕ ಚಿಹ್ನೆಗಳಾಗಿವೆ ಎಂದು ವೆಲ್ತ್‌ಸ್ಟ್ರೀಟ್‌ನ ಸಂಸ್ಥಾಪಕ ಸುಗಂಧಾ ಸಚ್‌ದೇವ ಹೇಳಿದ್ದಾರೆ.

    ಗುರಿ ಬೆಲೆ ಏನು?:

    ಟಾಟಾ ಪವರ್ ಷೇರುಗಳಿಗೆ ಹೋಲಿಸಿದರೆ ಅದಾನಿ ಪವರ್ ಷೇರುಗಳನ್ನು ಸಂಗ್ರಹಿಸುವ ಪರವಾಗಿ ನಮ್ಮ ದೃಷ್ಟಿಕೋನವಿದೆ. ಆದರೂ, ನಿರ್ದಿಷ್ಟ ಸ್ಟಾಕ್‌ನಲ್ಲಿ ಹೂಡಿಕೆ ಮಾಡುವುದನ್ನು ಪರಿಗಣಿಸುವ ಮೊದಲು ಗಣನೀಯ ಮಾರುಕಟ್ಟೆ ತಿದ್ದುಪಡಿಗಾಗಿ ಕಾಯುವುದು ವಿವೇಕಯುತವಾಗಿದೆ. ಅದಾನಿ ಪವರ್ ಸ್ಟಾಕ್ ದೀರ್ಘಾವಧಿಯ ದೃಷ್ಟಿಕೋನದಿಂದ ರೂ 750 ಮತ್ತು ನಂತರ ರೂ. 820 ರ ಮಟ್ಟಕ್ಕೆ ಏರುವ ಸಾಮರ್ಥ್ಯವನ್ನು ಹೊಂದಿದೆ ಎಂದು ಪೇಸ್ 360ರ ಅಮಿತ್ ಗೋಯಲ್ ಹೇಳಿದ್ದಾರೆ.

    ಅದಾನಿ ಪವರ್ ಷೇರುಗಳ ಬೆಲೆ ರೂ. 500 ರಂತೆ ಬಲವಾದ ನೆಲೆಯನ್ನು ರೂಪಿಸಿವೆ. ಹೂಡಿಕೆದಾರರು ಖರೀದಿ-ಆನ್-ಡಿಪ್ಸ್ (ಬೆಲೆ ಕುಸಿದಾಗ ಖರೀದಿ) ತಂತ್ರವನ್ನು ನಿರ್ವಹಿಸಬಹುದು ಎಂದು ಎಸ್ಎಸ್ ವೆಲ್ತ್ ಸ್ಟ್ರೀಟ್‌ನ ಸುಗಂಧಾ ಸಚ್‌ದೇವ ಹೇಳಿದ್ದಾರೆ.

    ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಕಾಂಗ್ರೆಸ್​ನ ದುಪ್ಟಟ್ಟು ಮತ: ಚುನಾವಣೆ ಸಮೀಕ್ಷೆಯ ಭವಿಷ್ಯ

    ಕಂಪನಿಯ ಮೌಲ್ಯಕ್ಕಿಂತ ದುಪಟ್ಟು ಮೊತ್ತದ ಕಾಮಗಾರಿ ಗುತ್ತಿಗೆ: ಒಂದೇ ದಿನದಲ್ಲಿ ಷೇರು ಬೆಲೆ 20% ಹೆಚ್ಚಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts