More

    ನ್ಯೂಯಾರ್ಕ್​ನಲ್ಲಿ ಶಾರುಖ್​ ಖಾನ್​ ಮಗಳಿರುವ ಡ್ರೀಮ್​ ಅಪಾರ್ಟ್​ಮೆಂಟ್​ ಹೇಗಿದೆ ಗೊತ್ತಾ? ಫೋಟೋ ಇಲ್ಲಿದೆ ನೋಡಿ..

    ನ್ಯೂಯಾರ್ಕ್​: ಬಾಲಿವುಡ್​ ನಟ ಶಾರುಖ್​ ಖಾನ್​ ಮಗಳು ಸುಹಾನಾ ಖಾನ್​ ದೂರದ ನ್ಯೂಯಾರ್ಕ್​ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿಚಾರ ನಿಮಗೆಲ್ಲ ಗೊತ್ತೇ ಇದೆ. ಕರೊನಾ ಹಿನ್ನೆಲೆಯಲ್ಲಿ ನ್ಯೂಯಾರ್ಕ್​ನಿಂದ ಮುಂಬೈಗೆ ಮರಳಿದ್ದ ಸ್ಟಾರ್​ ಕಿಡ್​ ಇದೀಗ ನ್ಯೂಯಾರ್ಕ್​ಗೆ ವಾಪಾಸು ಹೋಗಿದ್ದಾರೆ. ಅಲ್ಲಿ ಅವರಿರುವ ಡ್ರೀಮ್​ ಅಪಾರ್ಟ್​ಮೆಂಟ್​ ಹೇಗಿದೆ? ಅಲ್ಲಿಂದ ಸಿಟಿ ಯಾವ ರೀತಿಯಲ್ಲಿ ಕಾಣುತ್ತದೆ ಗೊತ್ತಾ?

    ನ್ಯೂಯಾರ್ಕ್​ಗೆ ಹೋಗಿ ಕೆಲವೇ ದಿನಗಳಲ್ಲಿ ಸುಹಾನಾ ತನ್ನ ಅಪಾರ್ಟ್​ಮೆಂಟ್​ನಿಂದ ಫೋಟೋ ತೆಗೆದು ಅದನ್ನು ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಸ್ಟೋರಿಯಾಗಿ ಹಂಚಿಕೊಂಡಿದ್ದಾರೆ. ಸದ್ಯಕ್ಕಂತೂ ನ್ಯೂಯಾರ್ಕ್​ನಲ್ಲಿ ಭಾರಿ ಪ್ರಮಾಣದಲ್ಲಿ ಹಿಮಪಾತವಾಗುತ್ತಿದ್ದು, ಅದೀಗ ಹಿಮದ ನಗರವಾಗಿ ಬದಲಾಗಿಬಿಟ್ಟಿದೆ. ಅಪಾರ್ಟ್​ಮೆಂಟ್​ನ ಕಿಟಕಿಯ ಬಳಿ ಕುಳಿತು, ಎದುರಿಗೆ ಸುರಿಯುತ್ತಿರುವ ಹಿಮದ ಸಣ್ಣ ವಿಡಿಯೋವನ್ನು ಸುಹಾನಾ ಹಂಚಿಕೊಂಡಿದ್ದಾರೆ. ಅದನ್ನು ನೋಡಿದವರು ವಾವ್​! ಎಂತಹ ಸುಂದರ ಸ್ಥಳವಿದು ಎನ್ನುವುದು ಗ್ಯಾರಂಟಿ.

    ನ್ಯೂಯಾರ್ಕ್​ನಲ್ಲಿ ಶಾರುಖ್​ ಖಾನ್​ ಮಗಳಿರುವ ಡ್ರೀಮ್​ ಅಪಾರ್ಟ್​ಮೆಂಟ್​ ಹೇಗಿದೆ ಗೊತ್ತಾ? ಫೋಟೋ ಇಲ್ಲಿದೆ ನೋಡಿ..
    ಅಂದ ಹಾಗೆ ಸುಹಾನಾ 2019ರಲ್ಲಿ ನ್ಯೂಯಾರ್ಕ್​ ವಿಶ್ವವಿದ್ಯಾಲಯ ಸೇರಿಕೊಂಡಿದ್ದಾರೆ. ಮುಂಬೈಗೆ ಬಂದಿದ್ದ ಅವರನ್ನು ಜನವರಿ 29ರಂದು ಶಾರುಖ್​ ಖಾನ್​ ಮತ್ತು ಮನೆಯ ಪುಟಾಣಿ ಅಬ್ರಾಮ್​ ವಿಮಾನ ನಿಲ್ದಾಣಕ್ಕೆ ಬಿಟ್ಟು ಬಂದಿದ್ದರು. (ಏಜೆನ್ಸೀಸ್​)

    ದಿನವೊಂದರಲ್ಲಿ ಈಕೆಗೆ 19 ಸಾವಿರ ಭಾರತೀಯರು ‘ಐ ಲವ್​ ಯು’ ಹೇಳ್ತಾರಂತೆ! ನಿಮ್ಮ ಮನೆಗೂ ಬರಲು ಸಿದ್ಧವಿದ್ದಾಳಂತೆ ಈ ಸುಂದರಿ!

    ಬಿಜೆಪಿ ನಾಯಕನ ಮೇಲೆ ಕಪ್ಪು ಮಸಿ ಸುರಿದ ಶಿವಸೇನೆ ನಾಯಕರು! ಸೀರೆ ತೊಡುವಂತೆ ಮಾಡಿದರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts