More

    ಶಾಲಾ ಪಠ್ಯಪುಸ್ತಕಗಳ ಬಗ್ಗೆ ಸಲಹೆಗಳಿಗೆ ಆಹ್ವಾನ

    ನವದೆಹಲಿ : ಶಾಲಾ ಪಠ್ಯಪುಸ್ತಕಗಳಿಂದ ಭಾರತೀಯ ಇತಿಹಾಸವನ್ನು ತಿರುಚಿಬರೆದಿರುವ ಪ್ರಕರಣಗಳನ್ನು ತೆಗೆದುಹಾಕುವುದಕ್ಕಾಗಿ ಕೇಂದ್ರ ಸರ್ಕಾರ ಸಲಹೆಗಳನ್ನು ಆಹ್ವಾನಿಸಿದೆ. ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಇತರ ತಜ್ಞರು ತಮ್ಮ ನಿರ್ದಿಷ್ಟ ಸಲಹೆಗಳನ್ನು ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಜುಲೈ 15, 2021 ರೊಳಗೆ ಈ ಮೇಲ್ ಮೂಲಕ ನೀಡಬಹುದಾಗಿದೆ.

    ಸಲಹೆಗಳನ್ನು ಕಳುಹಿಸಬೇಕಾದ ಈಮೇಲ್ ವಿಳಾಸ ಹೀಗಿದೆ : [email protected]

    ಇದನ್ನೂ ಓದಿ: ತಾಯಿ-ಚಿಕ್ಕಪ್ಪನ ಅಕ್ರಮ ಸಂಬಂಧ ಅರಿತ ಬಾಲಕ… ಮುಂದಾದದ್ದು ಭಾರೀ ದುರಂತ

    ಶಿಕ್ಷಣ, ಮಹಿಳೆಯರು, ಮಕ್ಕಳು, ಯುವಜನರು ಮತ್ತು ಕ್ರೀಡೆಗಳಿಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಯು ‘ಶಾಲಾ ಪಠ್ಯಗಳ ವಿಷಯ ಮತ್ತು ವಿನ್ಯಾಸದಲ್ಲಿನ ಸುಧಾರಣೆಗಳು’ ಎಂಬ ವಿಷಯದ ಬಗ್ಗೆ ಪರಿಶೀಲನೆ ನಡೆಸುತ್ತಿದೆ ಎಂದು ರಾಜ್ಯಸಭೆಯ ಸೆಕ್ರೆಟೇರಿಯಟ್​ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಈ ಪರಾಮರ್ಶೆಯ ಅಂಗವಾಗಿ ಕೆಳಕಂಡ ವಿಷಯಗಳ ಬಗ್ಗೆ ಗಮನ ಹರಿಸಲಾಗುವುದು ಎನ್ನಲಾಗಿದೆ –
    ಎ) ನಮ್ಮ ರಾಷ್ಟ್ರೀಯ ವೀರರ ಬಗ್ಗೆ ಐತಿಹಾಸಿಕವಲ್ಲದ ಸಂಗತಿಗಳು ಮತ್ತು ವಿರೂಪಗಳ ಉಲ್ಲೇಖಗಳನ್ನು ಪಠ್ಯ ಪುಸ್ತಕಗಳಿಂದ ತೆಗೆದುಹಾಕುವುದು
    ಬಿ) ಭಾರತೀಯ ಇತಿಹಾಸದ ಎಲ್ಲಾ ಅವಧಿಗಳಿಗೆ ಸಮಾನ ಅಥವಾ ಅನುಪಾತದ ಉಲ್ಲೇಖಗಳನ್ನು ಖಚಿತಪಡಿಸುವುದು.
    ಸಿ) ಗಾರ್ಗಿ, ಮೈತ್ರೇಯಿ ಸೇರಿದಂತೆ ಶ್ರೇಷ್ಠ ಐತಿಹಾಸಿಕ ಮಹಿಳೆಯರ ಅಥವಾ ಝಾನ್ಸಿಯ ರಾಣಿ, ರಾಣಿ ಚೆನ್ನಮ್ಮ, ಚಾಂದ್ ಬೀಬಿ, ಜಲ್ಕ್ರಿ ಬಾಯಿ ಮುಂತಾದವರ ಪಾತ್ರವನ್ನು ಎತ್ತಿ ತೋರಿಸುವಂತಹ ಸಾಮಗ್ರಿ ನೀಡುವುದು. (ಏಜೆನ್ಸೀಸ್)

    VIDEO | ಆಕಾಶದಲ್ಲಿ ಹಾರುವ ಕಾರು​! ಕಲ್ಪನೆಯಲ್ಲ.. ನೀವೇ ನೋಡಿ

    ಲಸಿಕೆ ಪಡೆಯದ ಜನರು ವೈರಸ್​ ರೂಪಾಂತರ ಹೊಂದುವ ‘ಫ್ಯಾಕ್ಟರಿ’ಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts