More

    ಕಬ್ಬು ಕಟಾವಿಗಾಗಿ ಹೂವಿನಹಡಗಲಿ ಗಂಗಾಪುರ ಸಕ್ಕರೆ ಕಾರ್ಖಾನೆಗೆ ರೈತರ ಮುತ್ತಿಗೆ

    ಹೂವಿನಹಡಗಲಿ: ಕಬ್ಬು ಕಟಾವು ಮಾಡುವಂತೆ ಆಗ್ರಹಿಸಿ ತಾಲೂಕಿನ ಮಿರಾಕೊರನಹಳ್ಳಿ, ಉಪನಾಯಕನಹಳ್ಳಿ, ತಿಪ್ಪಾಪುರ, ಹೂವಿನಹಡಗಲಿ ರೈತರು ಮಂಗಳವಾರ ಪಟ್ಟಣದ ಗಂಗಾಪುರ ಸಕ್ಕರೆ ಕಾರ್ಖಾನೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

    ಕಾರ್ಖಾನೆಯವರು ನಿಮಯದಂತೆ ಕಬ್ಬು ಕಟಾವು ಮಾಡುತ್ತಿಲ್ಲ. ಸಕಾಲಕ್ಕೆ ಕಬ್ಬು ಕಟಾವು ಮಾಡದ ಕಾರಣ ಇಳುವರಿ ಹಾಗೂ ತೂಕ ಕಡಿಮೆಯಾಗುತ್ತದೆ. ಕಬ್ಬು ಕಟಾವು ಮಾಡಲು ಬರುವ ಕಾರ್ಮಿಕರು ಹೆಚ್ಚು ಹಣ ಕೇಳುತ್ತಿದ್ದಾರೆ. ಬಡವರ್ಗದ ರೈತರು ಹೆಚ್ಚು ಕೂಲಿ ಕೊಡಲಾಗುತ್ತಿಲ್ಲ. ಈಗಾಗಲೇ ರೈತರ ಕಬ್ಬು ಕಟಾವಿಗೆ ಬಂದಿದೆ. ಆದರೆ, ನಿಯಮ ಮೀರಿ ರೈತರಲ್ಲೇ ತಾರತಮ್ಯ ಮಾಡುತ್ತಿದ್ದಾರೆ. ಕೂಡಲೇ ಕೊಯ್ಲಿಗೆ ಬಂದ ಕಬ್ಬ ಅನ್ನು ಕಟಾವು ಮಾಡಬೇಕು. ಇಲ್ಲವಾದರೆ ಕಾರ್ಖಾನೆ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

    ಸ್ಥಳಕ್ಕೆ ಭೇಟಿ ನೀಡಿದ ಕಾರ್ಖಾನೆಯ ಜೆ.ಡಿ.ಮಂಜುನಾಥ ಮಾತನಾಡಿ, ಕಾರ್ಮಿಕರ ಸಮಸ್ಯೆಯಿಂದ ಕಬ್ಬು ಕಟಾವು ಕಾರ್ಯ ವಿಳಂಬವಾಗಿದೆ. ಇನ್ನು ಹತ್ತು ದಿನಗಳಲ್ಲಿ ಎಲ್ಲ ರೈತರ ಕಬ್ಬು ಕಟಾವಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ನಂತರ ರೈತರು ಪ್ರತಿಭಟನೆ ಹಿಂಪಡೆದರು. ಕಬ್ಬು ಬೆಳೆಗಾರರಾದ ಮಂಜುನಾಥಗೌಡ, ಹಣ್ಣಿ ಬಸವನಗೌಡ, ಮನೋಹರ, ಐನಹಳ್ಳಿ ಬಸವರಾಜ್, ಟಿ.ಹಾಲೇಶ, ಶರಣು, ಪಿ.ಎಂ.ಕೊಟ್ರಯ್ಯ, ಡಿ.ಬಸವರಾಜ ರೆಡ್ಡಿ, ಹನುಮಂತರೆಡ್ಡಿ, ಹೇಮರೆಡ್ಡಿ, ಜಮೀರುದ್ದೀನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts