More

    ‘ವಿಶಿಂಗ್​ ಯೂ ದಿ ಬೆಸ್ಟ್​ ಮಾಮಾ …’ ಎಂದು ಅಭಿನಂದಿಸಿದ ಸುದೀಪ್​

    ಬೆಂಗಳೂರು: ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಹಲವು ರಾಜಕಾರಣಿಗಳು, ಸೆಲೆಬ್ರಿಟಿಗಳು, ಜನಸಾಮಾನ್ಯರು ಬೊಮ್ಮಾಯಿ ಅವರಿಗೆ ರಾಜ್ಯದ ಹೊಸ ಮುಖ್ಯಮಂತ್ರಿಯಾಗಿರುವುದಕ್ಕೆ ಅಭಿನಂದನೆಗಳನ್ನು ಸೂಚಿಸುತ್ತಿದ್ದಾರೆ.

    ಇದನ್ನೂ ಓದಿ: ಸಿಎಂ ಆಗಿ ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಬೊಮ್ಮಾಯಿ

    ಇದೀಗ ನಟ ಸುದೀಪ್​ ಸಹ ಹೊಸ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಬೊಮ್ಮಾಯಿ ಅವರನ್ನು ಹಲವು ವರ್ಷಗಳಿಂದ ಬಲ್ಲ ಸುದೀಪ್​, ಅವರನ್ನು ಮಾಮ ಎಂದು ಪ್ರೀತಿಯಿಂದ ಸಂಬೋಧಿಸಿದ್ದಾರೆ.

    ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಆಂಜನೇಯ ಸ್ವಾಮಿ ದೇವರ ಪ್ರದಕ್ಷಿಣೆ ಹಾಕಿದ ಬೊಮ್ಮಾಯಿ

    ಈ ಕುರಿತು ಟ್ವೀಟ್​ ಮಾಡಿರುವ ಸುದೀಪ್​, ‘ನಾನು ಅವರ ಸರಳತೆಯನ್ನು ನೋಡಿ ಬೆಳೆದವ. ನಾನು ಚಿತ್ರರಂಗಕ್ಕೆ ಬಂದ ಹೊಸದರಲ್ಲಿ ಅವರು ಕೊಟ್ಟ ಸಹಕಾರ ಮತ್ತು ಪ್ರೋತ್ಸಾಹಗಳನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಆಲ್​ ದಿ ಬೆಸ್ಟ್​ ಮಾಮ …’ ಎಂದು ಸುದೀಪ್​ ಬರೆದುಕೊಂಡಿದ್ದಾರೆ.

    ಸಿಎಂ ಬೊಮ್ಮಾಯಿ ಮೊದಲ ಪ್ರತಿಕ್ರಿಯೆ: ಬಡವರು-ರೈತರ ಕಣ್ಣೀರು ಒರೆಸುವೆ… ಸಮಸ್ಯೆಗಳ ಸರಮಾಲೆಯೇ ಇದೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts