More

    ವಾದ್ಯಗೋಷ್ಠಿ ಕಲಾವಿದರ ಹೋರಾಟಕ್ಕೆ ಸುದೀಪ್​ ಬೆಂಬಲ

    ಬೆಂಗಳೂರು: ಕರೊನಾ ಮತ್ತು ಲಾಕ್​ಡೌನ್​ನಿಂದ ಸಾಕಷ್ಟು ಸಂಕಷ್ಟಕ್ಕೊಳಗಾದ ಒಂದು ವಲಯವೆಂದರೆ ಅದು ವಾದ್ಯಗೋಷ್ಠಿ ಕಲಾವಿದರ ವಲಯ. ಗಣೇಶ ಹಬ್ಬ, ರಾಜ್ಯೋತ್ಸವ, ರಾಮನವಮಿ ಸೇರಿದಂತೆ ಹಲವು ಹಬ್ಬಗಳಿಗೆ ಕಾರ್ಯಕ್ರಮ ನೀಡಿ ಜೀವನ ಸಾಗಿಸುತ್ತಿದ್ದ ಆರ್ಕೆಸ್ಟ್ರಾ ಕಲಾವಿದರು, ಲಾಕ್​ಡೌನ್​ನಿಂದ ಅವೆಲ್ಲಾ ಕಾರ್ಯಕ್ರಮಗಳು ರದ್ದಾಗಿದ್ದರಿಂದ ತೀವ್ರ ಸಮಸ್ಯೆಗಳನ್ನು ಎದುರಿಸಿದ್ದರು. ಸರ್ಕಾರದ ವತಿಯಿಂದಲೂ ಅವರಿಗೆ ಸಹಾಯ ಸಿಕ್ಕಿದ್ದು ಬಹಳ ಕಡಿಮೆಯೇ.

    ವಾದ್ಯಗೋಷ್ಠಿ ಕಲಾವಿದರ ಹೋರಾಟಕ್ಕೆ ಸುದೀಪ್​ ಬೆಂಬಲ

    ಇದನ್ನೂ ಓದಿ: ಜ. 21ಕ್ಕೆ ‘ಫ್ಯಾಂಟಮ್​’ ಚಿತ್ರತಂಡದಿಂದ ಬರಲಿದೆ ವಿಶೇಷ ಸುದ್ದಿ

    ಲಾಕ್‌ಡೌನ್‌ನಿಂದ ತತ್ತರಿಸಿರುವ ವಾದ್ಯಗೋಷ್ಠಿ ಕಲಾವಿದರು ತಮಗೆ ಸರ್ಕಾರದಿಂದ ಸೂಕ್ತ ಸಹಾಯ ಸಿಗುತ್ತಿಲ್ಲ ಎಂದು ಪ್ರತಿಭಟನೆ ನಡೆಸಿದ್ದರು. ಈಗ ನಟ-ನಿರ್ದೇಶಕ ಸುದೀಪ್ ಅವರಿಗೆ ಬೆನ್ನಿಗೆ ನಿಂತಿದ್ದಾರೆ. ಅಷ್ಟೇ ಅಲ್ಲ, ಅವರ ಹೋರಾಟಕ್ಕೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.

    ವಾದ್ಯಗೋಷ್ಠಿ ಕಲಾವಿದರ ಹೋರಾಟಕ್ಕೆ ಬೆಂಬಲ ಸೂಚಿಸಿರುವ ಸುದೀಪ್, ಕಲಾವಿದರಿಗೆ ನೆರವು ನೀಡಲು ತಮ್ಮ ಸ್ನೇಹಿತರು ಮತ್ತು ಅಭಿಮಾನಿಗಳಿಗೆ ವಿನಂತಿಸಿಕೊಂಡಿದ್ದಾರೆ. ಜತೆಗೆ ಸರ್ಕಾರಕ್ಕೂ ಪೂರಕ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಮನವಿ ಮಾಡಿದ್ದಾರೆ.

    ಇದನ್ನೂ ಓದಿ: ಸಿಂಹ ಮತ್ತು ಹುಲಿಯ ಮಿಶ್ರತಳಿಯೇ ಶೀರ್ಷಿಕೆ!; ವಿಜಯ್ ದೇವರಕೊಂಡ ಈಗ ಲೈಗರ್ ಕ್ರಾಸ್​ಬ್ರೀಡ್​!

    ಈ ಕುರಿತು ಟ್ವೀಟ್ ಮಾಡಿರುವ ಅವರು, ‘ನಾನು ಪ್ರತಿಭಟನಾ ನಿರತ ವಾದ್ಯಗೋಷ್ಠಿ ಕಲಾವಿದರ ಜತೆಗೆ ಇದ್ದೇನೆ. ಅವರ ಹೋರಾಟಕ್ಕೆ ನನ್ನ ಬೆಂಬಲವಿದೆ. ನನ್ನ ಸ್ನೇಹಿತರು ಮತ್ತು ಅಭಿಮಾನಿಗಳನ್ನು ಈ ವಿಷಯವಾಗಿ ಗಮನಹರಿಸಲು ಮತ್ತು ನಿಮ್ಮಿಂದಾಗುವ ನೆರವನ್ನು ನೀಡಲು ವಿನಂತಿಸುವೆ. ಹಾಗೆ ಈ ಕಲಾವಿದರ ಪರವಾಗಿ ಸರ್ಕಾರ ಸಹ ಪೂರಕ ಕ್ರಮಗಳನ್ನು ಕೈಗೊಳ್ಳಲು ಕೋರುತ್ತೇನೆ. ಏಕೆಂದರೆ, ದೂರದರ್ಶನವಿಲ್ಲದ ಕಾಲದಿಂದಲೂ ನಮ್ಮನ್ನು ರಂಜಿಸುತ್ತಿರುವ ಈ ಕಲಾಬಳಗವನ್ನು ಮುಂದಿನ ತಲೆಮಾರುಗಳ ತನಕ ಕಾಪಾಡಿಕೊಳ್ಳಬೇಕಾದುದು ನಮ್ಮೆಲ್ಲರ ಕರ್ತವ್ಯವೆಂದು ಭಾವಿಸಿದ್ದೇನೆ. ನಮ್ಮ ಈ ಪ್ರತಿಭೆಗಳ ಪರವಅಗಿ ನಾವೇ ನಿಲ್ಲದಿದ್ದರೆ ಬೇರಾರು ನಿಲ್ಲುತ್ತಾರೆ’ ಎಂದು ಅವರು ಪ್ರಶ್ನಿಸಿದ್ದಾರೆ.

    ಇನ್‌ಸ್ಟಾಗ್ರಾಂನಲ್ಲಿ ಲೈವ್​ ಬಂದ ಧ್ರುವ ಸರ್ಜಾ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts