More

    ವಿಧ್ಯಾರ್ಥಿಗಳು ಸಂವಿಧಾನ ಬಗ್ಗೆ ತಿಳಿಯಲಿ

    ಅಳವಂಡಿ: ವಿಧ್ಯಾರ್ಥಿಗಳು ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗಗಳ ಬಗ್ಗೆ ಮಾಹಿತಿ ಪಡೆಯುವುದು ಅಗತ್ಯ ಎಂದು ಮುಖ್ಯ ಶಿಕ್ಷಕ ಶಂಭುಲಿಂಗನಗೌಡ ಪಾಟೀಲ ಹಲಗೇರಿ ತಿಳಿಸಿದರು.

    ಇದನ್ನೂ ಓದಿ: ವಿಧ್ಯಾರ್ಥಿಗಳು ಸಂಸ್ಕಾರ ಗುಣ ಬೆಳೆಸಿಕೊಳ್ಳಿ,

    ಸಮೀಪದ ಮೈನಹಳ್ಳಿಯ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಧ್ಯಾರ್ಥಿಗಳಿಗಾಗಿ ನ್ಯಾಯಾಲಯದ ಪ್ರಾತ್ಯಕ್ಷಿತೆಯ ಕುರಿತು ನಡೆದ ಕೋರ್ಟ್ ಕಲಾಪದ ಅಣುಕು ಪ್ರದರ್ಶನಕ್ಕೆ ಚಾಲನೆ ನೀಡಿ ಶನಿವಾರ ಮಾತನಾಡಿದರು.

    ಪ್ರಾಯೋಗಿಕ ಶಿಕ್ಷಣವನ್ನು ವಿಧ್ಯಾರ್ಥಿಗಳಿಗೆ ನೀಡುವುದರಿಂದ ವಿಷಯಗಳ ಮನವರಿಕೆಯಿಂದ ನೆನಪಿನಲ್ಲಿ ಉಳಿಯುವಂತೆ ಮಾಡುತ್ತದೆ. ಇಂತಹ ಕಾರ್ಯಕ್ರಮದಲ್ಲಿ ಪಾಲುಗೊಳ್ಳುವುದರಿಂದ ಜ್ಞಾನ ವೃದ್ಧಿ ಹಾಗೂ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದರು.

    ಮುಖ್ಯ ನ್ಯಾಯಮೂರ್ತಿಯಾಗಿ ಭೂಮಿಕಾ ಮೂಲಿಮನಿ, ಸರ್ಕಾರಿ ವಕೀಲರಾಗಿ ಪುಟ್ಟರಾಜಯ್ಯ, ಗಂಗಮ್ಮ, ಸಹನಾ ವಾದ ಮಂಡಿಸಿದರು. ಇನ್ನಿತರ ವಿಧ್ಯಾರ್ಥಿಗಳು ನ್ಯಾಯವಾದಿಗಳಾಗಿ ಕಲಾಪದಲ್ಲಿ ಭಾಗವಹಿಸಿದ್ದರು. ಕಲಾಪದಲ್ಲಿ ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ ನಿಷೇಧ, ಕಳ್ಳತನ ಅಪರಾಧ ಪ್ರಕರಣ ಮುಂತಾದ ವಿಷಯಗಳ ಕುರಿತು ವಾದ ವಿವಾದ ನಡೆಯಿತು.

    ಶಿಕ್ಷಕರಾದ ನಾಗರಾಜ, ಕುಮಾರ, ಬಸವರಾಜ ಸಜ್ಜನ, ಕುಮಾರ, ಸಂಜೀವಕುಮಾರ, ಹನುಮಂತಪ್ಪ, ನಾಗರಾಜ, ಬಸವರಾಜ ಚಿತ್ತಾಪುರ, ಉಮಾಪಾರ್ವತಿ, ರೇಣುಕಾ, ಗೀತಾ, ಶಕುಂತಲಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts