More

    ವಿಧ್ಯಾರ್ಥಿಗಳು ಸಂಸ್ಕಾರ ಗುಣ ಬೆಳೆಸಿಕೊಳ್ಳಿ,

    ಅಳವಂಡಿ: ವಿಧ್ಯಾರ್ಥಿಗಳು ಮಹಾನ್ ಪುರುಷರ ಆದರ್ಶ ಗುಣಗಳನ್ನು ಜೀವನದಲ್ಲಿ ಮೈಗೂಡಿಸಿಕೊಂಡು ಶಿಕ್ಷಕರಿಗೆ ಗೌರವವನ್ನು ಕೊಡಬೇಕು ಹಾಗೂ ಸಂಸ್ಕಾರ ಗುಣಗಳನ್ನು ಬೆಳೆಸಿಕೊಳ್ಳಿ ಎಂದು ಪ್ರಾಚಾರ್ಯ ಚಂದ್ರಶೇಖರ ದೊಡ್ಡಮನಿ ತಿಳಿಸಿದರು.

    ಇದನ್ನೂ ಓದಿ: ಜಂಗಮವಟುಗಳು ಸಂಸ್ಕಾರವಂತರಾಗಲಿ

    ಗ್ರಾಮದ ಶ್ರೀಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದರು.
    ವಿಧ್ಯಾರ್ಥಿಗಳು ಸತ್ಯ, ನ್ಯಾಯ, ಆದರ್ಶ ಗುಣಗಳನ್ನು ಪಾಲಿಸದಿದ್ದರೆ ಜೀವನದಲ್ಲಿ ಪರಿಪೂರ್ಣರಾಗಲು ಸಾದ್ಯವಿಲ್ಲ.

    ಶಿಸ್ತು, ಸಂಯಮದೊಂದಿಗೆ ಗುರುಹಿರಿಯರನ್ನು ಗೌರವಿಸುವ ಮೂಲಕ ಪ್ರತಿಯೊಬ್ಬರಿಗೂ ಆದರ್ಶರಾಗಬೇಕು. ಪುಸ್ತಕಗಳು ಜ್ಞಾನವನ್ನು ನೀಡುತ್ತವೆ. ಗಿಡಗಳು ಪರಿಸರದಲ್ಲಿ ಸ್ವಚ್ಚ ವಾತಾವರಣ ನಿರ್ಮಿಸುತ್ತವೆ.

    ಉತ್ತಮ ಜ್ಞಾನ ಹಾಗೂ ಸಂಸ್ಕಾರ ಪಡೆದ ವಿಧ್ಯಾರ್ಥಿ ಸಮಾಜ ಸುಧಾರಣೆಗೆ ಶ್ರಮಿಸುತ್ತಾನೆ ಎಂದರು. ಉಪನ್ಯಾಸಕರಾದ ಎಚ್.ಮಹಾನಂದಿ, ನವೀನ ಇನಾಮದಾರ, ಎಸ್.ಎಸ್.ಅಂಗಡಿ, ಎಚ್.ಎನ್.ತಾವರಗೇರಿ, ಮಲ್ಲಪ್ಪ ಅಂಬಿಗೇರ, ಅಂಬರೀಶ ಬೋಚನಹಳ್ಳಿ, ದೇವಮ್ಮ ಕಲಾದಗಿ ಹಾಗೂ ಚನ್ನಯ್ಯ ಹಿರೇಮಠ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts